ನಾಯಕತ್ವದ ಗುಣ ಬೆಳೆಸಿಕೊಳ್ಳಲು ಕ್ರೀಡೆ ಸಹಕಾರಿ; ಲೋಕೇಶ್
ಸ್ಪರ್ಧಾತ್ಮಕ ಮನೋಭಾವ ಹಾಗೂ ನಾಯಕತ್ವದ ಗುಣ ಬೆಳೆಸಿಕೊಳ್ಳಲು ಸಹಕಾರಿ
Team Udayavani, Jul 29, 2022, 6:01 PM IST
ನೆಲಮಂಗಲ: ಗ್ರಾಮೀಣ ಭಾಗದ ಯುವಕರಲ್ಲಿ ಕ್ರೀಡಾಸಕ್ತಿ ಹೆಚ್ಚಾಗಿ ಕಂಡು ಬಂದ ಹಿನ್ನೆಲೆ, ನಮ್ಮ ಗ್ರಾಪಂ ಸರ್ವ ಸದಸ್ಯರ ಸಲಹೆ ಮೇರೆಗೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ, ಯುವ ಸಮುದಾಯವನ್ನು ಪ್ರೋತ್ಸಾಹಿಸುತ್ತಿದ್ದೇವೆ ಎಂದು ಕಳಲುಘಟ್ಟ ಗ್ರಾಪಂ ಅದ್ಯಕ್ಷ ಗೋವೇನಹಳ್ಳಿ ಲೋಕೇಶ್ ಹೇಳಿದರು.
ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಕಳಲುಘಟ್ಟ ಗ್ರಾಪಂ ವತಿಯಿಂದ ಹಮ್ಮಿಕೊಂಡಿದ್ದ ಕಳಲುಘಟ್ಟ ಪಂಚಾಯಿತಿ ಪ್ರೀಮಿಯರ್ ಲೀಗ್ ಮತ್ತು ವಿಷ್ಣು, ಅಪ್ಪು ಕಪ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿ, ಕ್ರೀಡಾ ಚಟುವಟಿಕೆಗಳ ಮೂಲಕ ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಿಸಿಕೊಳ್ಳಬಹುದು. ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸಮಾಜದಲ್ಲಿ ಹೊಂದಾಣಿಕೆ, ಸಾಮರಸ್ಯ, ಬಾಂಧವ್ಯ ಸಹೋದರತ್ವ, ಸ್ಪರ್ಧಾತ್ಮಕ ಮನೋಭಾವ ಹಾಗೂ ನಾಯಕತ್ವದ ಗುಣ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಬಹುಮಾನ ವಿತರಣೆ: ಪಂದ್ಯಾವಳಿಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕ್ರಿಕೆಟ್ ಆಟಗಾರರ ಎಂಟು ತಂಡಗಳು ಕಪ್ ಪಡೆಯಲು ಮೈದಾನದಲ್ಲಿ ಸೆಣೆಸಾಟ ನಡೆಸಿದ್ದರು.
ಫೈನಲ್ ಪಂದ್ಯದಲ್ಲಿ ತೋಟನಹಳ್ಳಿ ಪ್ರದೀಪ್ ಮತ್ತು ಚೇತನ್ ನಾಯಕತ್ವದ ಜೈಶ್ರೀರಾಮ್ ಕ್ರಿಕೆಟರ್ಸ್ ತಂಡ ಮೊದಲ ಬಹುಮಾನದ 1 ಲಕ್ಷ ರೂಪಾಯಿ, ಟಗರು ಹಾಗೂ ವಿಷ್ಣು-ಅಪ್ಪು ಟ್ರೋಫಿ ಪಡೆದರು, ಎರಡನೇಯ ಬಹುಮಾನ 50 ಸಾವಿರ ರೂಗಳು ಆಕರ್ಷಕ ಟ್ರೋಫಿಯನ್ನು ಮಿಣ್ಣಾಪುರದ ಸನ್ ರೈಸರ್ಸ್, ತೃತೀಯ ಬಹುಮಾನವನ್ನು ನರಸಾಪುರ ತಂಡದವರು ಪಡೆದುಕೊಂಡರು. ಉಪಾಧ್ಯಕ್ಷರಾದ ನೇತ್ರಾವತಿ, ಪಿಡಿಒ ಗೀತಾಮಣಿ, ಸದಸ್ಯ ಮಿಣ್ಣಾಪುರ ರಂಗೇಗೌಡ, ಗಿರೀಶ್, ಆನಂದ್, ಶ್ರೀನಿವಾಸ್, ರೇಷ್ಮಾ, ಮಮತಾ, ಪದ್ಮಾವತಿ, ನರಸಿಂಹಮೂರ್ತಿ, ನರಸಮ್ಮ, ವಿಜಯಕುಮಾರಿ,ಹರೀಶ್, ಮಂಜುಳಾ, ಹುಚ್ಚಮ್ಮ, ಸೌಮ್ಯ, ರಮೇಶ್, ರಾಮು, ಕಿರಣ್,ದೀಪು, ನರಸಿಂಹಮೂರ್ತಿ, ತಿಮ್ಮೇಗೌಡ, ನಾಗರಾಜು ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
PM Modi;ಇಂದು 71000ಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.