ಮಕ್ಕಳಲ್ಲಿ ಶ್ರೀಕೃಷ್ಣನ ಆದರ್ಶ ಮೂಡಲಿ
Team Udayavani, Aug 25, 2019, 3:00 AM IST
ನೆಲಮಂಗಲ: ದೇಶದ ಭವಿಷ್ಯವನ್ನು ರೂಪಿಸುವ ಇಂದಿನ ಮಕ್ಕಳಲ್ಲಿ ಶ್ರೀಕೃಷ್ಣನ ಆದರ್ಶಗಳು ಮೂಡಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಆಚಾರ್ಯ ಗುರುಪರಂಪರೆ ವಿದ್ಯಾಲಯದ ಪ್ರಾಂಶುಪಾಲ ಎಸ್.ವೆಂಕಟಸುಬ್ಬ ಸಲಹೆ ನೀಡಿದರು. ಪಟ್ಟಣ ಸಮೀಪ ದಾಸನಪುರ ಗ್ರಾಮದ ಆಚಾರ್ಯ ಗುರುಪರಂಪರೆ ವಿದ್ಯಾಲಯದಲ್ಲಿ ನಡೆಸ ಶ್ರೀಕೃಷ್ಣ ಜನ್ಮಾಷ್ಟಮಿ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಣ ಕಲಿಯುತ್ತಿರುವ ಮಕ್ಕಳಲ್ಲಿ ಕೃಷ್ಣನ ಉತ್ತಮ ನಡವಳಿಕೆ, ಸಾಹಸ ಮನೋಭಾವ, ಪ್ರಾಮಾಣಿಕತೆ, ಧೈರ್ಯವಿರಬೇಕು. ಶಾಲೆ ಹಂತದಲ್ಲಿ ಶಿಕ್ಷಕರು ಮಹಾಪುರುಷರ ಸಾಹಸ ಕಥೆಗಳನ್ನು ಹೇಳುವುದರಿಂದ ಮಾನಸಿಕವಾಗಿ ಕುಗ್ಗುವುದು ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳಲ್ಲಿ ಬದುಕುವ ಛಲ ಹೆಚ್ಚಿಸಲು ಶ್ರೀಕೃಷ್ಣನ ಆದರ್ಶಗಳನ್ನು ಪರಿಚಯ ಮಾಡಬೇಕು ಎಂದರು.
ಮುಖ್ಯಶಿಕ್ಷಕಿ ಭವ್ಯ ಮಾತನಾಡಿ, ಸಣ್ಣ ವಯಸ್ಸಿನ ಮಕ್ಕಳು ಸಮಾಜದ ಸರಿ-ತಪ್ಪುಗಳನ್ನು ತಿಳಿಯುವ ಹಂತದಲ್ಲಿ ಪೋಷಕರು ಹಾಗೂ ಶಿಕ್ಷಕರು ನೀಡುವ ಮಾರ್ಗದರ್ಶನವನ್ನು ಅನುಸರಿಸುತ್ತಾರೆ ಎಂದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 150ಕ್ಕೂ ಹೆಚ್ಚು ಮಕ್ಕಳಿಗೆ ಶ್ರೀಕೃಷ್ಣ, ರಾಧೆ, ರುಕ್ಮಿಣಿಯ ವೇಷಭೂಷಣ ಧರಿಸಿ, ಶ್ರೀಕೃಷ್ಣನ ಸಾಹಸಿ ಕಥೆಗಳನ್ನು ಶಿಕ್ಷಕರು ಹೇಳಿದರು.
ಪುಟಾಣಿ ಮಕ್ಕಳು ಶ್ರೀಕೃಷ್ಣನ ವೇಷಧರಿಸಿ ಕುಣಿದು ಕುಪ್ಪಳಿಸಿದರು. ಈ ಸಂದರ್ಭದಲ್ಲಿ ಆಚಾರ್ಯ ಗುರುಪರಂಪರೆ ವಿದ್ಯಾಲಯದ ಅಧ್ಯಕ್ಷ ರಂಗಚಾರ್, ಕಾರ್ಯದರ್ಶಿ ನಾಗರತ್ನಮ್ಮ, ಶಿಕ್ಷಕರಾದ ದಿವ್ಯಾ, ಮೀನಾಕ್ಷಿ, ಅನುಸೂಯ, ಜಯ, ಅಶ್ವಿನಿ, ಚೈತ್ರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.