ಎಸ್ಸೆಸ್ಸೆಲ್ಸಿ: ಆನ್‌ಲೈನ್ ಕಿರು ಪರೀಕ್ಷೆಗೆ ಇಲಾಖೆ ಸಿದ್ಧತೆ
ಪರೀಕ್ಷಾ ಸಿದ್ಧತೆಗೆ ಆನ್‌ಲೈನ್ ತರಗತಿಗಳು ಅನುಕೂಲ
Team Udayavani, Nov 8, 2020, 3:29 PM IST
ಆನ್‌ಲೈನ್‌ನಲ್ಲಿ ಶಿಕ್ಷಣ ಪಡೆಯುತ್ತಿರುವ ಶಾಲೆ ಮಕ್ಕಳು. (ಸಾಂದರ್ಭಿಕ ಚಿತ್ರ)
ದೇವನಹಳ್ಳಿ: ಕೋವಿಡ್ ಲಾಕ್‌ಡೌನ್ ನಂತರದ ದಿನಗಳಲ್ಲಿ ಶಾಲೆಗಳು ಪ್ರಾರಂಭವಾಗದಿರುವುದರಿಂದ ಎಸ್ಸೆಸ್ಸೆಲ್ಸಿ ಮಕ್ಕಳ ಕಲಿಕೆಯಲ್ಲಿ ಹಿಂದುಳಿಯಬಾರದು ಎಂಬ ಉದ್ದೇಶದಿಂದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಚಂದನ ವಾಹಿನಿ ಮತ್ತು ಆನ್‌ಲೈನ್‌ನಲ್ಲಿ ಬೋಧನಕ್ರಮಗಳನ್ನುಕೈಗೊಂಡಿದೆ. ಅಲ್ಲದೆ, ಆನ್‌ಲೈನ್‌ಕಿರು ಪರೀಕ್ಷೆ ಪ್ರಾರಂಭಿಸಿದೆ.
ಆನ್‌ಲೈನ್ ತರಗತಿಯಿಂದ ಅನುಕೂಲ: ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಈ ಬಾರಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಆನ್‌ಲೈನ್ ತರಗತಿಗಳು ಅನುಕೂಲವಾಗಿದೆ. ಕೊರೊನಾ ಪರಿಣಾಮವಾಗಿ ಶಾಲೆಗಳನ್ನು ಪ್ರಾರಂಭವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಕ್ಕಳು ಶೈಕ್ಷಣಿಕ ಪ್ರಗತಿ ಹೊಂದುವ ಉದ್ದೇಶದಿಂದ ಸರ್ಕಾರವು ಆನ್‌ಲೈನ್ ಮತ್ತು ಚಂದನ ವಾಹಿನಿಯಲ್ಲಿ ಪಾಠ ಪ್ರವಚನಗಳನ್ನು ನುರಿತ ಶಿಕ್ಷಕರಿಂದ ಮಾಡಲಾಗುತ್ತಿದೆ. ಚಂದನ ವಾಹಿನಿಯಲ್ಲಿ ವಿದ್ಯಾಗಮ ಸಂವೇದಕಾರ್ಯಕ್ರಮವೊಂದೇ ಆಧಾರವಾಗಿದೆ. ಮಕ್ಕಳಿಗೆ ಪ್ರಶ್ನೋತ್ತರಗಳನ್ನು ನೀಡಿ, ಉತ್ತರ ಬರೆಸುವುದು. ವಿಷಯದಲ್ಲಿ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾರ್ಯ ವನ್ನು ಶಿಕ್ಷಕರು ಮಾಡುತ್ತಿದ್ದಾರೆ.
9 ಸಾವಿರ ಮಕ್ಕಳಿಗೆ ಪ್ರಯೋಜನ: ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರತಿ ತಿಂಗಳು ಆನ್‌ಲೈನ್‌ನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಗೊಳಿಸಿ, 25 ಅಂಕಗಳಿಗೆ ಉತ್ತರಿಸಲು ಅವಕಾಶ ಮಾಡಿಕೊಡಲಾಗಿದೆ. ಜಿಲ್ಲೆಯಲ್ಲಿ 15136 ಎಸ್ಸೆಸ್ಸೆಲ್ಸಿ ಮಕ್ಕಳಲ್ಲಿ 9 ಸಾವಿರ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳ ಸಂಪರ್ಕದಲ್ಲಿದ್ದು, ಯಾವುದೇ ವಿಷಯದಲ್ಲಿ ಸಂಶಯಗಳಿದ್ದರೆ, ಅದನ್ನು ಮೊಬೈಲ್ ಕರೆ ಮೂಲಕವೇ ಮಾಹಿತಿ ನೀಡುವಕಾರ್ಯ ಮಾಡುತ್ತಿದ್ದಾರೆ.
ವಿದ್ಯಾಗಮ ಯೋಜನೆಯಡಿ ನಡೆಸಲಾದ ಚಟುವಟಿಕೆಗಳ ಪುನರಾವರ್ತನೆ ಕೆಲಸಕ್ಕೆ ಶಿಕ್ಷಕರು ಮುಂದಾಗಿದ್ದಾರೆ. ವಿದ್ಯಾರ್ಥಿಗಳು ಗೂಗಲ್ ಮೀಟ್ ಮೂಲಕ ಪಠ್ಯೇತರ ಚಟುವಟಿಕೆ ನಡೆಸುತ್ತಿದ್ದಾರೆ. ಆಫ್‌ಲೈನ್‌ನಲ್ಲಿ ಶಿಕ್ಷಕರು ಪಠ್ಯ ಚಟುವಟಿಕೆ ಗಳನ್ನು ಮುಂದುವರಿಸಲು ಅವಕಾಶಕಲ್ಪಿಸಲಾಗಿದೆ.
ಪಠ್ಯದ ವಿಷಯವಾಗಿ ಶಾಲಾ ಮಕ್ಕಳಿಗೆ ಗೊಂದಲ, ಅನುಮಾನಗಳಿಗೆ ತಕ್ಷಣವೇ ಸ್ಪಂದಿಸುವಂತೆ ಶಿಕ್ಷಕರಿಗೆ ಮಾರ್ಗದರ್ಶನ ನೀಡಲಾಗಿದೆ. ಆನ್‌ಲೈನ್ ಪರೀಕ್ಷೆ ಪ್ರಶ್ನೆಪತ್ರಿಕೆ ಮಾದರಿ ರೂಪಿಸಿ, ಮಕ್ಕಳು ಉತ್ತರಿಸುವಂತೆ ಮಾಡಲಾಗುತ್ತಿದೆ. ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. – ಗಂಗಮಾರೇಗೌಡ, ಉಪನಿರ್ದೇಶಕ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ
ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯು ದಿಕ್ಸೂಚಿಯಾಗಿದೆ. ಆನ್‌ಲೈನ್ ಶಿಕ್ಷಣಕ್ಕಿಂದ ಶಾಲೆಯ ಒಳಗಡೆ ಮುಖಾಮುಖೀಯಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡುವುದರಲ್ಲಿ ಹೆಚ್ಚು ಪರಿಣಾಮಕಾರಿಯಾಗಲಿದೆ. ವಿದ್ಯಾಗಮ ಯೋಜನೆ ಇದ್ದಾಗ ಮಕ್ಕಳನ್ನು ಒಂದೆಡೆ ಸೇರಿಸಿ, ಪಾಠ ಪ್ರವಚನ ಮಾಡಲಾಗುತ್ತಿತ್ತು. – ಪ್ರತಿಮಾ, ಶಿಕ್ಷಕಿ, ಸರ್ಕಾರಿ ಪ್ರೌಢ ಶಾಲೆ, ಸಾದಹಳ್ಳಿ
ಎಸ್.ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.