ಶೌಚ ನಿರ್ವಹಣೆಯ ನೂತನ ಘಟಕಕ್ಕೆ ಚಾಲನೆ
ಒಳಚರಂಡಿ ವ್ಯವಸ್ಥೆಗೆ ಹೊಸ ಆಯಾಮ, ರಾಜ್ಯದ ಮೊದಲ ಘಟಕ
Team Udayavani, May 29, 2019, 11:25 AM IST
ನೆಲಮಂಗಲ: ಪಟ್ಟಣ ಪುರಸಭೆಗೆ ಸೂಕ್ತವಾದ ಒಳಚರಂಡಿ ವ್ಯವಸ್ಥೆಯಿಲ್ಲದೆ ಜನರು ಪರದಾಡುವುದನ್ನು ಮನಗಂಡ ಖಾಸಗಿಕಂಪನಿ ಕೆಮ್‌ವೆಲ್ ಫಾರ್ಮಸ್ಟಿಕಲ್ಸ್ ಕಂಪನಿಯ ಸಹಯೋಗದೊಂದಿಗೆ ಶೌಚ ನಿರ್ವಹಣೆ ಘಟಕವನ್ನು ನಿರ್ಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕರೀಗೌಡ ಹೇಳಿದರು.
ತಾಲೂಕಿನ ಮೈಲನಹಳ್ಳಿ ಸಮೀಪ ತ್ಯಾಜ್ಯ ವಿಲೇವಾರಿ ಘಟಕದ ಬಳಿ ನಿರ್ಮಿಸಲಾಗಿರುವ ನೂತನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ಪಂದನೆ: ಪುರಸಭೆ ನಗರಸಭೆಯಾಗುವ ಮೂಲಕ ಒಳಚರಂಡಿ ವ್ಯವಸ್ಥೆಮಾಡುತ್ತಾರೆ ಎಂಬ ಆಸೆಯಲ್ಲಿದ್ದ ಪಟ್ಟಣದ ಜನರಿಗೆ ನಿರಾಸೆಯಾಗುತ್ತಿದ್ದಂತೆ ಜಿಲ್ಲಾಧಿಕಾರಿ ಕರೀಗೌಡರು ಒಳಚರಂಡಿ ಬದಲಾಗಿ ಶೌಚ ನಿರ್ವಹಣೆ ಘಟಕವನ್ನು ಸ್ಥಾಪಿಸುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ.
ಕೆಮ್ ವೆಲ್ನ ಮಾನವ ಸಂಪನ್ಮೂಲಧಿಕಾರಿ ಮಂಜುನಾಥ್ ಮಾತನಾಡಿ,ಪಟ್ಟಣದ ಜನರಿಗೆ ಅನುಕೂಲವಾಗಲು ನಿರ್ಮಾಣವಾಗಿರುವ ಶೌಚ ನಿರ್ವಹಣೆ ಘಟಕವನ್ನು ಟಿ.ಬೇಗೂರಿನಲ್ಲಿರುವ ಕೆಮ್‌ವೆಲ್ ಫಾರ್ಮಸ್ಟಿಕಲ್ಸ್ ಕಂಪನಿಯು ತನ್ನ ಸಿ.ಎಸ್.ಆರ್ ಅನುದಾನದಲ್ಲಿ ಕಂಪನಿಯ ಮೇಲಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ನಿರ್ಮಿಸಲಾಗಿದ್ದು, ಬರೋಬ್ಬರಿ 23 ಲಕ್ಷ ವೆಚ್ಚದಲ್ಲಿ ಘಟಕ ನಿರ್ಮಾಣಮಾಡಲಾಗಿದೆ ಎಂದು ತಿಳಿಸಿದರು.
ನಿರ್ವಹಣೆ: ಪಟ್ಟಣದ ಜನರಿಗೆ ಅನುಕೂಲವಾಗಲು ನಿರ್ಮಿಸಿರುವ ಘಟಕವು ಸುಮಾರು 6 ಸಾವಿರ ಲೀಟರ್ ಸಾಮರ್ಥ್ಯವನ್ನು ಹೊಂದಿದ್ದು, ಇಡೀ ನೆಲಮಂಗಲ ಪಟ್ಟಣದ ಶೌಚಾಲಯದ ತ್ಯಾಜ್ಯ ವಿಂಗಡಣೆಯಾಗುತ್ತದೆ. ಈ ಘಟಕ ಸಂಪೂರ್ಣವಾಗಿ ಗುರುತ್ವಾಕರ್ಷಣ ಶಕ್ತಿಯ ಬಲದಿಂದ ಕಾರ್ಯನಿರ್ವಸಲಿದ್ದು, ಕೇವಲ ಒಬ್ಬ ವ್ಯಕ್ತಿಯಿಂದ ಘಟಕವನ್ನು ನಿರ್ವಹಣೆ ಮಾಡಬಹುದಾಗಿದೆ. ಪಟ್ಟಣದ ಪ್ರತಿಯೊಂದು ಕುಟುಂಬದವರು ಪುರಸಭೆ ಅಡಿಯಲ್ಲಿ ಈ ಘಟಕವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಇನ್ನೂ ದಿನಕ್ಕೆ 6000 ಲೀಟರ್‌ಘಟಕ ಸಾಮರ್ಥ್ಯ ವನ್ನು ಹೊಂದಿರುವುದರಿಂದ ಇಡೀ ಪಟ್ಟಣದ ತ್ಯಾಜ್ಯ ನಿರ್ವಹಣೆಯಾಗಲಿದೆ ಎಂದು ಹೇಳಿದರು.
ಉಪಯೋಗ: ಶೌಚ ನಿರ್ವಹಣೆ ಘಟಕದಿಂದ ಹೊರಬರುವ ತ್ಯಾಜ್ಯವನ್ನು ಒಣಗಿಸಿ ಗೊಬ್ಬರವಾಗಿ ಪರಿವರ್ತಿಸಿ ಮರಗಿಡಗಳಿಗೆ ಬಳಕೆ ಮಾಡಲಿದ್ದು, ಶೌಚ ತ್ಯಾಜ್ಯದಿಂದ ಹೊರಬರುವ ಶುದ್ದೀಕರಣವಾದ ನೀರನ್ನುಗಿಡಗಳಿಗೆ, ಪಾರ್ಕ್, ರಸ್ತೆಯಪಕ್ಕದ ಸಸಿಗಳಿಗೆ ಬಳಸಬಹುದು ಎಂದು ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್ ತಿಳಿಸಿದರು.
ತಹಶೀಲ್ದಾರ್ ಕೆ.ಎನ್ ರಾಜಶೇಖರ್, ಕೆಮ್‌ವೆಲ್ ಮತ್ತು ರೆಸ್ಸೀ ಫಾರ್ಮಸ್ಟಿಕಲ್ಸ್ನ ಉತ್ಪಾದನಾ ವಿಭಾಗದ ಮುಖ್ಯಸ್ಥ ಆರಿಫಾ ಖಾನ್, ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ನಾಗರಾಜು, ಹೆಚ್.ಆರ್ ಮುಖ್ಯ ನಿರ್ವಹಣಾಧಿಕಾರಿ ಮಂಜುನಾಥ್, ತಾಂತ್ರಿಕ ವಿಭಾಗದ ರಾಮರಾಧ್ಯ, ಪರಿಸರ ಅಭಿಯಂತರ ಯೋಗೀಶ್, ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್, ಬಸವರಾಜು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.