ನಾಲ್ಕು ದಿನಗಳ ಕೃಷಿ ಮೇಳಕ್ಕೆ ಅದ್ದೂರಿ ತೆರೆ
ರಾಜ್ಯಮಟ್ಟದ ಕೃಷಿ ಪ್ರಶಸ್ತಿ ವಿಜೇತರಿಗೆ ರಾಜ್ಯಪಾಲ ಗೆಹಲೋತ್‌ರಿಂದ ಪ್ರಶಸ್ತಿ ಪ್ರದಾನ
Team Udayavani, Nov 15, 2021, 11:34 AM IST
ಬೆಂಗಳೂರು: ನಾಲ್ಕು ದಿನಗಳ ಕಾಲ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ನಡೆದ ಕೃಷಿ ಮೇಳ-2021ಕ್ಕೆ ಭಾನುವಾರ ಅದ್ಧೂರಿ ತೆರೆ ಬಿತ್ತು. ಸಮಾರೋಪದಲ್ಲಿ ರಾಜ್ಯಮಟ್ಟದ ಕೃಷಿ ಪ್ರಶಸ್ತಿ ವಿಜೇತರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಪ್ರಶಸ್ತಿ ಪ್ರದಾನ ಮಾಡಿ ಕೃಷಿ ಮಾಡಲು ಹುರಿದುಂಬಿಸಿದರು.
ಇನ್ನು ಭಾನುವಾರವಾಗಿದ್ದರಿಂದ ಮತ್ತು ಮಳೆ ಬಿಡುವು ನೀಡಿದ್ದರಿಂದ ಲಕ್ಷಾಂತರ ಜನರು ಕೃಷಿ ಮೇಳದ ಅನುಭವ ಪಡೆದರು. ಕೃಷಿ ಉಪಕರಣಗಳು, ನೂತನ ತಳಿಗಳು, ಆಧುನಿಕ ತಂತ್ರಜ್ಞಾನ, ಬಿತ್ತನೆ-ಬೀಜ, ತಾರಸಿ ಕೃಷಿ ಸೇರಿದಂತೆ ನೂತನ ಕೃಷಿ ಮಾದರಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಪ್ರತಿ ಮಳಿಗೆಗಳ ಮುಂದೆ ಜನರು ಕಿಕ್ಕಿರಿದು ತುಂಬಿದ್ದರು.
ಇದನ್ನೂ ಓದಿ:- ಮಕ್ಕಳ ಮನಸ್ಸು ನಿಷ್ಕಲ್ಮಷ: ಸಿದ್ಧಲಿಂಗ ಸ್ವಾಮೀಜಿ
ಅದೇ ರೀತಿ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಬೆಳೆದಿರುವ ರಾಗಿ, ಭತ್ತ, ಜೋಳ, ನವಣೆ, ಸಾಮೆ, ಆರ್ಕ, ಬರಗು, ಸುಗಂಧ ದ್ರವ್ಯಗಳ ಗಿಡಗಳು, ಔಷಧೀಯ ಸಸ್ಯಗಳು, ಹೈಡ್ರೋಫೋನಿಕ್ಸ್ ತಂತ್ರಜ್ಞಾನ, ಇಸ್ರೇಲ್ ಕೃಷಿ ಪದ್ಧತಿ, ಜೇನು ಕೃಷಿ ಸೇರಿದಂತೆ ಎಲ್ಲೆಡೆಯೂ ಜನ ಸಾಗರವೇ ತುಂಬಿತ್ತು. ಎಳೆ ಬಿಸಿಲು ಮತ್ತು ತುಸು ತಂಗಾಳಿ ಬೀಸುತ್ತಿದ್ದರಿಂದ ಜನರು ಆರಾಮಾಗಿ ಮೇಳವನ್ನು ಸಖತ್ ಎಂಜಾಯ್ ಮಾಡಿದರು.
ಜಾತ್ರೆಯಂತಾದ ಮೇಳ: ಮೊದಲ ಮೂರು ದಿನ ಜಿಟಿ ಜಿಟಿ ಮಳೆಯಲ್ಲೇ ನಡೆದ ಮೇಳ, ಕೊನೆಯ ದಿನವಾದ ಭಾನುವಾರ ಮಾತ್ರ ಜಾತ್ರೆಯ ಕಳೆ ಬಂದಿತ್ತು. ಮೇಳದ ಪ್ರತಿ ಬೀದಿಗಳಲ್ಲಿ ಕಡಲೆಪುರಿ, ಆಟಿಕೆಗಳು, ವಸ್ತ್ರಗಳು, ಬ್ಯಾಗ್‌ಗಳು, ಮನೆಬಳಕೆ ವಸ್ತುಗಳು, ಬಲೂನುಗಳು, ಭಜ್ಜಿ-ಬೋಂಡ, ಸ್ವೀಟ್ ಕಾರ್ನ್ ಸೇರಿದಂತೆ ಹತ್ತಾರು ಬಗೆಯ ತಿಂಡಿ-ತಿನಿಸುಗಳ ಮಾರಾಟವಾಗುತ್ತಿತ್ತು. ನಗರದ ಜನತೆಗೆ ಒಂದು ರೀತಿಯಲ್ಲಿ ಜಾತ್ರೆಯ ಅನುಭವ ಪಡೆದರು.
ರಾಜ್ಯಪಾಲರ ಭೇಟಿ - ಬೆಳೆಗಳ ವೀಕ್ಷಣೆ ನಿಷೇಧ: ಮಧ್ಯಾಹ್ನ 2.30ಕ್ಕೆ ರಾಜ್ಯಪಾಲರ ಕಾರ್ಯಕ್ರಮದ ಸಮಯ ನಿಗದಿಯಾಗಿತ್ತು. ಭೇಟಿ ವೇಳೆ ಈ ಬಾರಿ ಬಿಡುಗಡೆ ಮಾಡಿರುವ ಹತ್ತು ನೂತನ ತಳಿಗಳ ಬೆಳೆಯನ್ನು ಕೂಡ ರಾಜ್ಯಪಾಲರು ವೀಕ್ಷಣೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಶಿಷ್ಟಾಚಾರ ಪಾಲನೆ ಮಾಡುವ ಉದ್ದೇಶದಿಂದ ಭದ್ರತಾ ಸಿಬ್ಬಂದಿ ಮಧ್ಯಾಹ್ನ ಒಂದು ಗಂಟೆಯಿಂದಲೇ ತೋಟದ ಬೆಳೆಗಳ ವೀಕ್ಷಣೆಗೆ ಪ್ರವೇಶ ನಿಷೇಧಿಸಿದರು. ಸುಮಾರು ಎರಡು ಗಂಟೆಗಳ ಸಮಯ ಸಾರ್ವಜನಿಕರ ವೀಕ್ಷಣೆಗೆ ನಿಷೇಧ ಹೇರಿದ್ದರಿಂದ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು.
8 ಲಕ ಜನ, ವರ್ಚುಯಲ್‌ನಲ್ಲಿ 38 ಲಕ್ಷ ಜನ ಭೇಟಿ:-
ಮೇಳಕ್ಕೆ ಭಾನುವಾರ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2.64 ಲಕ್ಷ ಜನರು ಭೌತಿಕವಾಗಿ ಮತ್ತು 18.29 ಲಕ್ಷ ಜನರು ವರ್ಚುಯಲ್ ವೇದಿಕೆಯಲ್ಲಿ ಮೇಳವನ್ನು ವೀಕ್ಷಣೆ ಮಾಡಿದ್ದಾರೆ. ಒಟ್ಟಾರೆ ನಾಲ್ಕು ದಿನಗಳಲ್ಲಿ ಭೌತಿಕವಾಗಿ 8 ಲಕ್ಷ ಹಾಗೂ ವರ್ಚುಯಲ್‌ನಲ್ಲಿ 38.11 ಲಕ್ಷ ಮಂದಿ ಮೇಳವನ್ನು ವೀಕ್ಷಣೆ ಮಾಡಿದ್ದಾರೆ. ಈ ಮೂಲಕ ಕೃಷಿ ವಿಶ್ವವಿದ್ಯಾಲಯದ ನಿರೀಕ್ಷೆಗೂ ಮೀರಿ ದೊಡ್ಡ ಸಂಖ್ಯೆಯಲ್ಲಿ ಜನರು ಮೇಳವನ್ನು ವೀಕ್ಷಣೆ ಮಾಡಿದ್ದಾರೆ.
ಮೊದಲನೇ ದಿನ ಭೌತಿಕವಾಗಿ 60 ಸಾವಿರ ಮತ್ತು ಆನ್‌ಲೈನ್‌ನಲ್ಲಿ 1.55 ಸಾವಿರ, 2ನೇ ದಿನ ಮೇಳಕ್ಕೆ 1.76 ಲಕ್ಷ ಭೇಟಿ, ಆನ್‌ಲೈನ್‌ನಲ್ಲಿ 5.2 ಲಕ್ಷ, 3ನೇ ದಿನ 3 ಲಕ್ಷ ಮತ್ತು ಆನ್‌ಲೈನ್‌ನಲ್ಲಿ 12.96 ಲಕ್ಷ ಜನ ಭೇಟಿ ನೀಡಿದ್ದರು. ಕಳೆದ ವರ್ಷ ವರ್ಚುವಲ್ ವೇದಿಕೆಯಲ್ಲಿ ಮೇಳ ನಡೆಸಲಾಗಿತ್ತು. ಆನ್‌ಲೈನ್‌ನಲ್ಲಿ ಕೇವಲ 1.25 ಲಕ್ಷ ಮಂದಿಯಷ್ಟೇ ಭಾಗವಹಿಸಿದ್ದರು. ಇನ್ನು 2019ರಲ್ಲಿ ನಡೆದಿದ್ದ ಕೃಷಿ ಮೇಳದಲ್ಲಿ 14 ಲಕ್ಷ ಭೇಟಿ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.