ಕೋವಿಡ್ ಓಡಿಸಲು ಹಬೆ ಚಿಕಿತ್ಸೆ
Team Udayavani, Apr 29, 2021, 1:19 PM IST
ದೊಡ್ಡಬಳ್ಳಾಪುರ: ಕೋವಿಡ್ ಎರಡನೇಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿಅಲೋಪತಿ ಚಿಕಿತ್ಸೆಯಲ್ಲದೇ ವಿವಿಧಚಿಕಿತ್ಸೆಗಳಿಗೆ ಮೊರೆ ಹೋಗುತ್ತಿರುವುದುಸಾಮಾನ್ಯವಾಗಿದೆ.
ಈ ನಡುವೆ, ಜನರು ತಮ್ಮನ್ನು ತಾವುಮಾರಣಾಂತಿಕ ವೈರಸ್ ನಿಂದ ರಕ್ಷಿಸಿಕೊಳ್ಳುವ ಮಾರ್ಗಗಳನ್ನು ಹುಡುಕಿ ಕೊಳ್ಳುತ್ತಿದ್ದಾರೆ, ಅದರಂತೆ ಸ್ಟೀಮ್ ಇನ್ ಹೇಲಿಂಗ್‌ಅಥವಾ ಉಗಿ ಉಸಿರಾಡು ವಿಕೆಯಕಾರಣದಿಂದಾಗಿ ಕೋವಿಡ್ ಸೋಂಕನ್ನುದೂರ ಮಾಡಬಹುದು ಎನ್ನಲಾಗಿದೆ.
ಇದೇ ಪ್ರಯೋಗವನ್ನು ದೊಡ್ಡಬಳ್ಳಾಪುರಪೊಲೀಸರು ಅಳವಡಿಸಿಕೊಂಡಿದ್ದು, ನಗರಠಾಣೆಯಲ್ಲಿ ಸ್ಟೀಮಿಂಗ್ ವ್ಯವಸ್ಥೆಅಳವಡಿಸಲಾಗಿದೆ.ಈ ಪ್ರಯೋಗಕ್ಕೆ ಬೇವಿನಸೊಪ್ಪು, ನೀಲಗಿರಿ, ತುಳಸಿ, ಪುದೀನ ಸೊಪ್ಪನ್ನುಬಳಸಲಾಗಿದ್ದು, ಕುಕ್ಕರ್ ನಲ್ಲಿ ನೀರಿನೊಂದಿಗೆ ಕುದಿಸಿ ಹೊರಬರುವ ಹಬೆಯನ್ನುಪೈಪ್‌ಗ್ಳ ಮೂಲಕ ಪೊಲೀಸರು ಸ್ಟೀಮ್ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಈನೂತನ ವ್ಯವಸ್ಥೆಯಲ್ಲಿ ಸರ್ಕಲ್ ಇನ್ಸ್ ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್, ಸಬ್ ಇನ್ಸ್‌ಪೆಕ್ಟರ್ ಕೆ.ವೆಂಕಟೇಶ್ ಹಾಗೂ ಸಿಬ್ಬಂದಿ ಸ್ಟೀಮ್ ಪಡೆದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.