ಸ್ವಚ್ಛತೆ ಅರಿವಿಗಾಗಿ ಬೀದಿನಾಟಕ
Team Udayavani, Mar 4, 2019, 6:54 AM IST
ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿ ಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಮೋಪರಹಳ್ಳಿ ಗ್ರಾಮದಲ್ಲಿ ಸ್ವತ್ಛತಾ ಮಿಷನ್ ಯೋಜನೆಯಡಿ ನೆಲಮಂಗಲ ವಿಕಾಸ ನಾಟಕ ಸಂಸ್ಥೆ ಕಲಾವಿದರು ಸ್ವತ್ಛತೆ ಕುರಿತ ಬೀದಿ ನಾಟಕ ಪ್ರದರ್ಶಿಸಿದರು.
ಇತ್ತೀಚಿನ ದಿನಗಳಲ್ಲಿ ಪರಿಸರಕ್ಕೆ ಆಗು ತ್ತಿರುವ ಅನಾಹುತಗಳನ್ನು ತಪ್ಪಿಸುವ, ಸ್ವತ್ಛತೆಯ ಬಗ್ಗೆ ಅರಿವು, ನೀರಿನ ಮಹತ್ವ,ಆರೋಗ್ಯದ ಕಾಳಜಿ, ಹಸಿ ಕಸ, ಒಣ ಕಸದ ವಿಲೇವಾರಿ, ಶಿಕ್ಷಣದ ಮಹತ್ವ ಹೀಗೆ ಹಲವಾರು ವಿಚಾರಗಳ ಕುರಿತು ಗ್ರಾಮೀಣ ಜನರಿಗೆ ಮನಮುಟ್ಟುವಂತೆ ನಾಟಕದ ಮೂಲಕ ತಿಳಿವಳಿಕೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನಾರಾಯಣಮ್ಮ, ಡೆಂ à ರೋಗ ಹಾಗೂ ಸ್ವತ್ಛತೆ, ನೈರ್ಮಲ್ಯದ ಬಗ್ಗೆ ನಾಟಕದ ಮೂಲಕ ಗ್ರಾಮೀಣ ನಾಗರಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಾಧ್ಯಾಪಕ ಡಾ.ಎಂ.ಚಿಕ್ಕಣ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಧಾರವಾಹಿಗಳು ಹಾಗೂ ಸಿನಿಮಾಗಳು ಜನರಲ್ಲಿನ ಈ ರೀತಿಯ ನಾಟಕ ಪ್ರದರ್ಶಗಳನ್ನು ವೀಕ್ಷಿಸುವ ಮನೋಭಾವನೆಯನ್ನುದೂರ ಮಾಡಿವೆ. ಆದರೆ, ಈ ರೀತಿಯ ನಾಟಕಗಳು ನಿಜಕ್ಕೂ ಒಳ್ಳೆಯ ಸಂದೇಶಗಳನ್ನು ನೀಡುತ್ತವೆ. ನಾಟಕ ನೋಡುವವರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿರುವುದು ತೀರಾ ಬೇಸರದ ಸಂಗತಿ ಎಂದು ವಿಷಾದಿಸಿದರು. ಈ ವೇಳೆ ಸ್ಥಳೀಯ ಮುಖಂಡರಾದ ಮುನಿಶಂಕರ್, ಚಂದ್ರ ಶೇಖರ, ನಾಗರಾಜ್,ರಾಮಣ್ಣ ಮುಂತಾದವರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.