ವಿದ್ಯಾರ್ಥಿಗಳಿಗೆ ಜಾತಿ ಹೆಸರಿನ ಸನ್ಮಾನ ಸಲ್ಲದು
Team Udayavani, Aug 19, 2019, 3:00 AM IST
ನೆಲಮಂಗಲ: ಪ್ರತಿಭಾವಂತ ದ್ಯಾರ್ಥಿಗಳ ಸಾಧನೆಯಲ್ಲಿ ಜಾತಿ ಪರಿಗಣಿಸುವವರ ಮಧ್ಯೆ ಸಾಮರಸ್ಯದಿಂದ ಅಭಿನಂದನೆ ಸಲ್ಲಿಸಿದ ಯುವಪ್ರತಿಷ್ಠಾನ ಉತ್ತಮ ವೇದಿಕೆ ಸೃಷ್ಟಿಮಾಡಿದೆ ಎಂದು ಆರ್‌ಟಿಒ ಹಿರಿಯ ನಿರೀಕ್ಷಕ ಡಾ.ಧನ್ವಂತರಿ ಎಸ್.ಒಡೆಯರ್ ಹರ್ಷ ವ್ಯಕ್ತಪಡಿಸಿದರು.
ಪಟ್ಟಣದ ಹರ್ಷ ಇಂಟರ್ ನ್ಯಾಷನಲ್ ಶಾಲೆ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ಯುವ ಪ್ರತಿಷ್ಠಾನದಿಂದ ಆಯೋಜಿಸಲಾಗಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಅನೇಕರು ಅತಿ ಹೆಚ್ಚು ಅಂಕಗಳಿಸಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಜಾತಿ ಹಣೆಪಟ್ಟಿಯೊಂದಿಗೆ ಸನ್ಮಾನಿಸುತ್ತಿರುವುದು ಸಮಾಜದ ಸಾಮರಸ್ಯ ಹಾಳುಮಾಡುತ್ತಿದೆ. ಆದರೆ ಇಂತಹವುಗಳಿಗೆ ಕಡಿವಾಣ ಹಾಕಲು ಯುವ ಪ್ರತಿಷ್ಠಾನ ಸಾಮರಸ್ಯ ವೇದಿಕೆ ರೂಪಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.
ವಿವೇಕಾನಂದರ ತತ್ವಗಳು ವಿಶ್ವದ ಜನರು ಭಾರತಾಂಬೆಗೆ ತಲೆಬಾಗುವಂತೆ ಮಾಡಿವೆ. ವಿದ್ಯಾರ್ಥಿಗಳು ವಿವೇಕಾನಂದರ ನುಡಿಗಳನ್ನು ಪಾಲಿಸಬೇಕು ಎಂದು ಹೇಳಿದರು. ಆರೋಗ್ಯ ಭಾರತಿ ಆಸ್ಪತ್ರೆ ಸಂಸ್ಥಾಪಕ ಡಾ.ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಸಮಾಜ ಮುಖೀಯಾಗಿ ತೊಡಗಿಸಿಕೊಂಡಾಗ ಮಾತ್ರ ನಿಮ್ಮ ಭವಿಷ್ಯಉತ್ತಮವಾಗಿರುತ್ತದೆ.
ಗುರಿಯೊಂದಿಗೆ ಪಯಣ ಬೆಳೆಸಿದರೆ ಸಾಧನೆಯ ಅಭಿನಂದನೆ ನಿಮ್ಮ ಕೈ ಸೇರುತ್ತದೆ. ಜಾತಿ, ಮತಗಳಿಲ್ಲದೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಬೇಕಾಗಿರುವುದು ಅನಿವಾರ್ಯ. ಅಂತಹ ಕೆಲಸ ಪ್ರತಿಷ್ಠಾನ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಸ್ವಾಮಿ ವಿವೇಕಾನಂದ ಯುವ ಪ್ರತಿಷ್ಠಾನದ ಗೌರವಾಧ್ಯಕ್ಷ ರಾಹುಲ್ ಮಾತನಾಡಿದರು. ನಿವೃತ್ತ ಐಪಿಎಸ್‌ಅಧಿಕಾರಿ ಎಂ.ಪಿ. ನಾರಾಯಣಗೌಡ, ಪುರಸಭೆ ಸದಸ್ಯಎನ್. ಗಣೇಶ್, ಹರ್ಷ ಸಮೂಹ ಸಂಸ್ಥೆಗಳ ಅಧ್ಯಕ್ಷ ಶಿವಕುಮಾರ್, ವಾಸವಿ ಫರ್ಟಿಲೈಸರ್ ಮಾಲೀಕ ಎಚ್.ಆರ್. ವೆಂಕಟೇಶ್, ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್, ಮುಖ್ಯ ಶಿಕ್ಷಕ ರವಿ ಕುಮಾರ್,
ಸ್ವಾಮಿ ವಿವೇಕಾನಂದ ಯುವ ಪ್ರತಿಷ್ಠಾನದ ಅಧ್ಯಕ್ಷ ಎ.ಜಿ.ಸಂತೋಷ್, ಕಾರ್ಯದರ್ಶಿ ಟಿ.ಕೆ ಮಂಜುನಾಥ್, ಖಜಾಂಚಿ ಪಿ. ಮಂಜುನಾಥ್, ಸಂಚಾಲಕ ವಿಜಯ್ ಹೊಸಪಾಳ್ಯ, ಪ್ರದೀಪ್‌ಕುಮಾರ್, ಪುನೀತ್, ನಿರ್ದೇಶಕ ಪುನೀತ್, ವಿಜಯಕುಮಾರ್, ರಾಮಚಂದ್ರ, ಸಿದ್ಧರಾಜು, ನವೀನ್‌ಕುಮಾರ್ ಮುಖಂಡರಾದ ಸೋಮಶೇಖರ್ ಮತ್ತಿತರರಿದ್ದರು.
ಅಭಿನಂದನೆ: ಸ್ವಾಮಿ ವಿವೇಕಾನಂದಯುವ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ತಾಲೂಕಿನ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ 155 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.