ಬೇಸಿಗೆ ತಾಪಮಾನಕ್ಕೆ ಮತ್ಸ್ಯೋದ್ಯಮ ತತ್ತರ

Team Udayavani, May 22, 2023, 11:24 AM IST

tdy-6

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಲ್ಲಿ ಮೀನುಗಾರಿಕೆ ಇದೆ. ಸಾಮಾನ್ಯ ವಾಗಿ ಪ್ರತಿದಿನ ಜಿಲ್ಲೆಯಲ್ಲಿ 50-60 ಟನ್‌ ಮೀನು ಉತ್ಪಾದನೆಯಾಗುತ್ತಿದೆ. ಬೇಸಿಗೆ ಹಿನ್ನೆಲೆಯಲ್ಲಿ ಕೆರೆ ನೀರು ಕುಸಿದು ಮೀನುಗಳಿಗೆ ಹಾನಿಯಾದ ಹಿನ್ನೆಲೆ ಯಲ್ಲಿ ಸಾಕಾಣಿಕೆದಾರರು ಬೇಗನೆ ಮೀನು ಗಳನ್ನು ಹಿಡಿಯುತ್ತಿದ್ದಾರೆ. ಇದರಿಂದ ಬೇಡಿಕೆಗಿಂತ ಪೂರೈಕೆ ಹೆಚ್ಚಾಗುತ್ತಿದೆ. ಇದರಿಂದ ಸಾಕಾಣಿಕೆದಾರರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ.

ಬಯಲುಸೀಮೆ ಜಿಲ್ಲೆಗಳಲ್ಲಿ ಒಂದಾದ ಬೆಂಗ ಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ಬಾರಿ ಉತ್ತಮ ಮಳೆಯಾದ್ದರಿಂದ ಕೆರೆಗಳಲ್ಲಿ ನೀರು ಬರುವಂತಾಗಿದೆ. ದೇವನಹಳ್ಳಿ ತಾಲೂಕಿ ನಲ್ಲಿ ನಾಗವಾರ, ಹೆಬ್ಟಾಳ, ಶುದ್ಧಿ ಕರಿಸಿದ ನೀರು ಕೆರೆಗಳಿಗೆ ಬಿಟ್ಟಿದ್ದರಿಂದ ಕೆರೆಗಳಲ್ಲಿ ನೀರು ಇರುವಂತಾಗಿದೆ. ಬೆಂಗಳೂರು ಗ್ರಾಮಾಂ ತರ ಜಿಲ್ಲೆಯ ನಾಲ್ಕು ತಾಲೂಕುಗಳಾದ ದೇವನ ಹಳ್ಳಿ , ಹೊಸಕೋಟೆ, ನೆಲ ಮಂಗಲ ಮತ್ತು ದೊಡ್ಡ ಬಳ್ಳಾಪುರದಲ್ಲಿ ಮೀನು ಗಾರಿಕೆ ಇದೆ. ಬೇಸಿಗೆ ಸೆಖೆ ಜನರನ್ನು ಕಾಡುತ್ತಿದೆ. ಮಾಂಸಾ ಹಾರ ಸೇವನೆಯಿಂದ ಜನರು ಕೊಂಚ ದೂರ ಉಳಿದಿದ್ದಾರೆ. ಮೀನಿನ ಉತ್ಪನ್ನಗಳ ಬಳಕೆ ಕೂಡಾ ಕಡಿಮೆಯಾಗಿದೆ. ಇದರಿಂದ ಬೇಡಿಕೆ ಎಲ್ಲೆಡೆ ಕುಸಿತ ಬಂದಿದೆ. ಬೇಡಿಕೆಗಿಂತ ಪೂರೈಕೆ ಹೆಚ್ಚಿದ ಪರಿ ಣಾಮ ಮೀನಿನ ದರ ಇಳಿಕೆಯಾಗಿದೆ. ಮಳೆಯ ಪರಿಣಾಮ ಕೆರೆ ಗಳಿಗೆ ನೀರು ಬಂದು ಮೀನುಗಾರಿಕೆ ಗರಿಗೆದರಿದ್ದು ಆದರೆ ಈ ಬಾರಿ ಬೇಸಿಗೆಯಲ್ಲಿ ತಾಪ ಮಾನಕ್ಕೆ ಮತ್ಸ್ಯೋದ್ಯಮ ತತ್ತರಿಸಿದೆ. ಕೆರೆಗಳಲ್ಲಿ ನೀರು ಇಳಿದ ಪರಿಣಾಮ ಬೇಗನೆ ಮೀನು ಹಿಡಿಯ ಲಾಗು ತ್ತಿದೆ. ಉತ್ಪಾದನೆ ಹೆಚ್ಚಿ ಬೇಡಿಕೆ ಕುಸಿತವಾಗುತ್ತಿದೆ.

ಮತ್ಸ್ಯದರ್ಶಿನಿ ಮೀನಿನ ಉತ್ಪಾದನೆಗಳ ಕ್ಯಾಂಪಿಂಗ್‌ ಪ್ರಾರಂಭ: ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಕೋರ್ಟ್‌ ರಸ್ತೆಯಲ್ಲಿ ಮೀನುಗಾರಿಕೆ ಇಲಾಖೆ ಸಹ ಯೋಗ ದೊಂದಿಗೆ ಮತ್ಸ್ಯದರ್ಶಿನಿ ಎಂಬ ಮೀನಿನ ಉತ್ಪಾದನೆಗಳ ಕ್ಯಾಂಪಿಂಗ್‌ ಪ್ರಾರಂಭ ವಾಗಿದೆ. ಈ ಮೂಲಕ ಮೀನುಗಳಿಗೆ ಮಾರುಕಟ್ಟೆ ನೀಡುವ ಜತೆ ಮೀನುಗಳಿಗೆ ಆಹಾರದ ಉತ್ತೇಜನ ನೀಡುವ ಕೆಲಸವಾಗಿದೆ. ಉತ್ತಮ ಸ್ಪಂದನೆ ದೊರೆಯುತ್ತಿದೆ. ಸಿಗಡಿ ಮೀನು ಆರೋಗ್ಯಕ್ಕೆ ಅನುಕೂಲಕರ ಆಹಾರವಾದ್ದರಿಂದ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸಾಕಾಣಿಕೆ ಹೆಚ್ಚಿದ್ದು ಬೇಸಿಗೆ ಹಿನ್ನೆಲೆಯಲ್ಲಿ ಅದರ ಬೇಡಿಕೆ ಕುಸಿದು ಪ್ರತಿ ಕೆಜಿಗೆ 500-400 ದರ ಇಳಿದಿದೆ.

ಮಳೆಗಾಲ ನಂತರ ಬೇಸಿಗೆ ಕಾಲದವರೆಗೂ ಮೀನು ಗಳಲ್ಲಿ ಹೆಚ್ಚಿನ ತೂಕ ಬರುವಂತೆ ಬೆಳೆಸಲಾಗುತ್ತದೆ. ವಾರಕ್ಕೊಮ್ಮೆ ಮೀನು ಹಿಡಿಯ ಲಾಗುತ್ತದೆ. ಬೇಸಿಗೆ ಕಾಲದಲ್ಲಿ ಮೀನುಗಳು ನೀರಿನ ಪ್ರಮಾಣ ಇಳಿಕೆ ಹಾಗೂ ಬಿಸಿಲಿನ ತಾಪಕ್ಕೆ ಸಾಯುವ ಸಾಧ್ಯತೆ ಇದ್ದು, ಒಂದು ಕೆಜಿಗೂ ಹೆಚ್ಚು ತೂಗುವ ಮೀನು ಹಿಡಿಯಲಾಗುತ್ತದೆ. ವಾರಕ್ಕೆ 2-3 ಬಾರಿ ಮೀನು ಹಿಡಿಯು ವುದರಿಂದ ಉತ್ಪಾದನೆಯಲ್ಲಿ ಹೆಚ್ಚಳವಾಗುತ್ತದೆ. ಸದ್ಯಕ್ಕೆ ಮೀನಿನ ಉತ್ಪಾದನೆ 70 ಟನ್‌ ದಾಟಿದೆ.

ಬೇಸಿಗೆ ಸಂದರ್ಭದಲ್ಲಿ ತಾಪಮಾನ ಹೆಚ್ಚಾಗುವುದರಿಂದ ಮೀನು ಮಾರಾಟಗಾರರಿಗೆ ಸಾಕಷ್ಟು ತೊಂದರೆ ಎದುರಿಸಬೇಕಾಗುತ್ತದೆ. ಮೀನುಗಳ ದರದಲ್ಲಿ ಕಳೆದ ದಿನಗಳಿಂದ ಕುಸಿತವಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಮೀನು ಮಾರುಕಟ್ಟೆಗೆ ಬರುತ್ತಿದೆ. ಬೇಸಿಗೆ ಕಾಲದಲ್ಲಿ ಕೆರೆಗಳಲ್ಲಿ ನೀರು ಕಡಿಮೆ ಯಾಗುತ್ತದೆ. ಮೀನು ಮಾರಾಟಕ್ಕೆ ಉತ್ತಮ ಮಾರುಕಟ್ಟೆ ಒದಗಿಸಬೇಕು. – ಆಂಜಿನಪ್ಪ, ಮೀನು ಮಾರಾಟಗಾರ

ಬೇಸಿಗೆ ಕಾಲದಲ್ಲಿ ಮೀನು ಬೇಡಿಕೆ ಕುಸಿತಗೊಳ್ಳುತ್ತದೆ. ತಾಪಮಾನ ಹೆಚ್ಚಾಗುವುದರಿಂದ ಕೆರೆಗಳಲ್ಲಿ ನೀರು ಇಳಿಮುಖವಾಗುತ್ತದೆ. ವಾರಕ್ಕೆ 2-3 ಬಾರಿ ಕೆರೆಗಳಲ್ಲಿ ಮೀನುಗಳನ್ನು ಹಿಡಿದು ಮಾರಾಟ ಮಾಡಲಾಗುತ್ತದೆ. ಪೂರೈಕೆ ಹೆಚ್ಚಿದೆ. ಜಿಲ್ಲೆಯಲ್ಲಿ ಮೀನು ಮಾರಾಟ ಮತ್ತು ಸಾಕಾಣಿಕೆಗೆ ಹೆಚ್ಚಿನ ಪ್ರೋತ್ಸಾಹ ವನ್ನು ನೀಡಲಾಗುತ್ತಿದೆ. – ನಾಗರಾಜ್‌, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ

ಟಾಪ್ ನ್ಯೂಸ್

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

2-mudhol

Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Special Train ಮಕರ ಸಂಕ್ರಾಂತಿ:  ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

1-horoscope

Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

13-ghati-1

Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ

Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ

Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ

Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು

Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು

Road Mishap: ಬೈಕ್‌ ವ್ಹೀಲಿಂಗ್‌ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು

Road Mishap: ಬೈಕ್‌ ವ್ಹೀಲಿಂಗ್‌ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

2-mudhol

Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Special Train ಮಕರ ಸಂಕ್ರಾಂತಿ:  ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.