ಕೋವಿಡ್ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಿ
Team Udayavani, Apr 18, 2021, 1:40 PM IST
ದೇವನಹಳ್ಳಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣ, ಸ್ವಾತಂತ್ರ್ಯಅಮೃತ ಮಹೋತ್ಸವ, ಕುಡಿಯುವನೀರು ಸೇರಿ ಜಾನುವಾರುಗಳಿಗೆ ಮೇವು ಒದಗಿಸಲು ರಚಿಸಿರುವ ನೋಡಲ್ ಅ ಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ,ಅಗತ್ಯ ಮಾಹಿತಿಯೊಂದಿಗೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸಿಇಒ ಎಂ.ಆರ್.ರವಿಕುಮಾರ್ ತಿಳಿಸಿದರು.
ತಾಲೂಕಿನ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಬಾರಿ ಉತ್ತಮ ಮಳೆಯಾಗಿದ್ದು, ಮೇವಿನ ಕೊರತೆ ಇಲ್ಲವಾದರೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.
ಕೊರೊನಾ 2ನೇ ಅಲೆಯನ್ನು ತಡೆಗಟ್ಟಲು, ನೇಮಕ ಮಾಡಿರುವ ನೋಡಲ್ ಅಧಿಕಾರಿಗಳು ತಾಲೂಕು ಮಟ್ಟದ ಅಧಿ ಕಾರಿಗಳ ಸಹಕಾರದೊಂದಿಗೆ ಕೋವಿಡ್ ಪರೀಕ್ಷೆ ನಡೆಸಿ, ಪಾಸಿಟಿವ್ ಬಂದವರಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು ಸೇರಿ 45 ವರ್ಷಮೇಲ್ಪಟ್ಟವರಿಗೆ ಲಸಿಕೆ ಹಾಕಿಸಲು ಸೂಕ್ತಕ್ರಮ ಕೈಗೊಳ್ಳಬೇಕು ಎಂದುಹೇಳಿದರು.
ಆ್ಯಂಬುಲೆನ್ಸ್ ಒದಗಿಸಿ: ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಆಶಾ,ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಗ್ರಾಮ ಸಹಾಯಕರನ್ನುನೇಮಿಸಿಕೊಳ್ಳುವ ಮೂಲಕ ಕೊರೊನಾಸೋಂಕು ಹರಡುವಿಕೆ ತಗ್ಗಿಸಲುಮುಂದಾಗಬೇಕು, 60 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಪಡೆಯಲುಸಾರಿಗೆ ವ್ಯವಸ್ಥೆ ಮಾಡಬೇಕು, ಆರೋಗ್ಯಇಲಾಖೆ ಅಗತ್ಯ ಆ್ಯಂಬುಲೆನ್ಸ್ ಸೇವೆಒದಗಿಸಬೇಕು ಎಂದು ಹೇಳಿದರು.
ಬೆಳೆ, ಪ್ರಾಣ ಹಾನಿ ಆಗಿದ್ರೆ ಪರಿಶೀಲಿಸಿ:ಜಿಲ್ಲೆಯಲ್ಲಿ ಅಕಾಲಿಕಮಳೆಯಾಗುತ್ತಿರುವುದರಿಂದ ಬೆಳೆಹಾನಿ ಹಾಗೂ ಪ್ರಾಣಹಾನಿ ಉಂಟಾಗುತ್ತಿದ್ದು, ಈ ಸಂದರ್ಭದಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ,ಪರಿಶೀಲನೆ ನಡೆಸಿ, ಪರಿಹಾರ ಒದಗಿಸುವ ಕಾರ್ಯ ಮಾಡಬೇಕು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ತಾಲೂಕು ಮಟ್ಟದ ಸಭೆ ನಡೆಸಿ: ಅಪರಜಿಲ್ಲಾ ಧಿಕಾರಿ ಡಾ.ಜಗದೀಶ ಕೆ.ನಾಯಕಮಾತನಾಡಿ, ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಲಭ್ಯವಿರುವ ಹಾಸಿಗೆಗಳ ಮಾಹಿತಿಯನ್ನು ಕೇಳಿದರಲ್ಲದೆ, ಕುಡಿಯುವ ನೀರು, ಕೋವಿಡ್-19 ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕುರಿತು ನೇಮಿಸಲಾಗಿರುವ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕು ಮಟ್ಟದಲ್ಲಿಸಭೆ ನಡೆಸಿ, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ವಿವರಿಸಿದರು.
ವಾಚ್ ಆ್ಯಪ್ ಅಪ್‌ಲೋಡ್ ಮಾಡಿ:ಕೋವಿಡ್ ಸೋಂಕು ಹರಡುವಿಕೆ ತಡೆಗಟ್ಟಲು ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆಹಚ್ಚುವ ಕಾರ್ಯ ಶೀಘ್ರವಾಗಿ ನಡೆಸಬೇಕು.ಅಂಗನವಾಡಿ, ಆಶಾ ಕಾರ್ಯಕರ್ತೆಯರುಸ್ಥಳಕ್ಕೆ ಭೇಟಿ ನೀಡಿ, ಫೋಟೋ ತೆಗೆದುಕೊರೊನಾ ವಾಚ್ ಆ್ಯಪ್‌ಗೆ ಅಪ್‌ಲೋಡ್ ಮಾಡಬೇಕು ಎಂದುವಿವರಿಸಿದರು.
ಲಸಿಕೆ ನೀಡಲು ವಾಹನ ಬಳಸಿಕೊಳ್ಳಿ:ಕೊರೊನಾ ಲಸಿಕೆ ಹಾಕಿಸಿಕೊಳ್ಳಲುಇಚ್ಛಿಸುವವರಿಗೆ ಅಧಿ ಕಾರಿಗಳವಾಹನಗಳು, ಕೈಗಾರಿಕಾ ವಲಯದವಾಹನಗಳನ್ನು ಬಳಸಿಕೊಳ್ಳಲುಅವಕಾಶವಿದ್ದು, ಹೋಬಳಿ ಮಟ್ಟದಲ್ಲಿನೇಮಕಗೊಡಿರುವ ಅ ಧಿಕಾರಿಗಳುಸಾರ್ವಜನಿಕರಿಗೆ ಲಸಿಕೆ ಕೊಡಿಸಲುಕ್ರಮ ಕೈಗೊಳ್ಳಬೇಕು ಎಂದು ಸಲಹೆನೀಡಿದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕರಿಯಪ್ಪ, ನೋಡಲ್‌ಅ ಧಿಕಾರಿಗಳು, ಜಿಲ್ಲಾ ಮಟ್ಟದಅ ಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.