ಟಿಎಪಿಸಿಎಂಎಸ್:ಕೆಕೆಎಂ-ಎಂಬಿಟಿ ತಂಡಕ್ಕೆ ಗೆಲುವು
Team Udayavani, Nov 16, 2020, 3:31 PM IST
ನೆಲಮಂಗಲ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ಕೆ.ಕೇಶವಮೂರ್ತಿ ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂಬಿಟಿ ರಾಮಕೃಷ್ಣಯ್ಯ ಅವರ ತಂಡ ಬಹುಮತ ಪಡೆದು ಗೆಲುವಿನ ನಗೆ ಬೀರಿದೆ.
ಅವಿರೋಧ ಆಯ್ಕೆ: 13 ಸದಸ್ಯ ಬಲದ ಸಂಘದ ನೂತನ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿತರಗತಿಯ ಏಳು ಮಂದಿ ಸದಸ್ಯರ ಪೈಕಿ ತ್ಯಾಮ ಗೊಂಡಲು ಹೋಬಳಿಯ ಪರಿಶಿಷ್ಟ ಜಾತಿ ಮೀಸಲು ಸ್ಥಾನ ಹನುಮಂತಯ್ಯ, ಬಿಸಿಎಂ “ಎ’ಮೀಸಲು ಸ್ಥಾನದಿಂದ ಮಹಮದ್ ಸಿರಾಜ್ ಅಹಮದ್, ಸೋಂಪುರ ಹೋಬಳಿಯ ಮಹಿಳಾ ಮೀಸಲು ಸ್ಥಾನದಿಂದ ಜಿ.ಮಂಜುಳಾ, ಹೆಚ್. ಎಂ.ಸಿಂಧು, ಕಸಬಾ ಹೋಬಳಿಯ ಬಿಎಸಿ ಎ ಸ್ಥಾನದಿಂದ ಎ.ಪಿಳ್ಳಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಚುನಾವಣೆ: ಸಂಘ ಎ ತರಗತಿಯ 06 ಸ್ಥಾನಗಳಿಗೆ ಹಾಗೂ ಕಸಬಾ ಹೋಬಳಿಯ 01 ಸಾಮಾನ್ಯ ಸ್ಥಾನ, 01 ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆನ.15ರಂದು ಪ ಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಚುನಾವಣೆಯಲ್ಲಿ ತಾಲೂಕಿನ ರೈತರು ಹಾಗೂ ವಿವಿಎಸ್‌ಎಸ್‌ಎನ್ ಸಂಘಗಳ ಪ್ರತಿನಿಧಿಗಳು ಮತದಾನದಲ್ಲಿ ಭಾಗವಹಿಸಿ ತಮ್ ಹಕ್ಕು ಚ ಲಾಯಿಸಿದ್ದರು.
“ಎ “ತರಗತಿಯಲ್ಲಿ 8 ಮಂದಿ ಅಂತಿಮ ಕಣದಲ್ಲಿದ್ದು, ಕೆ.ಆರ್.ಗುರುಪ್ರಕಾಶ್ 13 ಮತ, ಜಗಜ್ಯೋತಿ ಬಸವೇಶ್ವರ ಡಿ.ಜೆ.11 ಮತ,ವೀರಮಾರೇಗೌಡ, ಶಿವರಾಮಯ್ಯ ಮೋಹನ್ ಕುಮಾರ್ ಅವರು ತಲಾ 12 ಮತ, ಎಚ್. ನಾಗಭೂಷಣ್ 13 ಮತ ಪಡೆದುಕೊಂಡು ಗೆಲುವು ಸಾಧಿಸಿದರೆ, ಕಸಬಾ ಹೋಬಳಿಯಸಾಮಾನ್ಯ ಕ್ಷೇತ್ರದಲ್ಲಿ ಜಿ.ಸಂಪತ್ 423 ಮತ, ಪರಿಶಿಷ್ಟ ಪಂಗಡದಿಂದ ಸ್ಪರ್ಧಿಸಿದ್ದ ಬಿಎನ್. ನರಸಿಂಹಮೂರ್ತಿ 383 ಮತ ಪಡೆದುಕೊಂಡುಗೆಲುವು ಸಾಧಿಸಿದ್ದಾರೆ.
ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ತಂಡದ ಮುಖಂಡರಾದ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಕೇಶವಮೂರ್ತಿ ಮಾತನಾಡಿ, ಸಂಘದ ಹೆಸರೇ ಹೇಳುವಂತೆ ಪರಸ್ಪರ ಸಹಕಾರವಿದ್ದರೆ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯ. ನಮ್ಮ ತಂಡದಲ್ಲಿ ಜಾತಿ ಮತ ಭೇದವಿಲ್ಲದೆ ನಿಸ್ವಾರ್ಥವಾಗಿರುವಅಭ್ಯರ್ಥಿಗಳನ್ನುಆಯ್ಕೆಮಾಡಿ ಕೊಂಡು ಪಕ್ಷಭೇದವಿಲ್ಲದೇ ತಂಡ ರಚಿಸಿ ಚುನಾವಣೆ ಎದುರಿಸಲಾಗಿದೆ. ನಾನು ಕಾಂಗ್ರೆಸ್‌ಪಕ್ಷದಲ್ಲಿದ್ದು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂಬಿಟಿ ರಾಮಕೃಷ್ಣಯ್ಯ ಅವರು ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದು, ಪಕ್ಷಾತೀತವಾಗಿ ಸಂಘಟನೆ ಮಾಡಲಾಗಿದೆ ಎಂದರು.
ಸಂಘ90ಲಕ್ಷ ರೂ.ಗಳಲಾಭಾಂಶದಲ್ಲಿದ್ದು, ಸಂಘದ ಸಂಪೂರ್ಣಯೋಜನೆಗಳನ್ನು ಪ್ರಾಮಾಣಿಕವಾಗಿ ರೈತರಿಗೆ ತಲುಪಿಸುವಲ್ಲಿ ನಮ್ಮ ತಂಡದ ಸದಸ್ಯರು ಪ್ರಾಮಾಣಿಕವಾಗಿ ಶ್ರಮಿಸಲಿದ್ದಾರೆ. ವಿಧಾನಪರಿಷತ್ ಸದಸ್ಯಬಿಎಂಎಲ್ ಕಾಂತರಾಜು ವಿರುದ್ಧವಾಗಿ ತಂಡಕಟ್ಟಲಾಗಿದೆ. –ಕೆ.ಕೇಶವಮೂರ್ತಿ, ಮಾಜಿ ಅಧ್ಯಕ್ಷ, ನೆಲಮಂಗಲ ತಾಲೂಕು ಪಂಚಾಯತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.