Tax policy: ಸರ್ಕಾರದ ತೆರಿಗೆ ನೀತಿ ಜನರಿಗೆ ಹೆಚ್ಚಿನ ಹೊರೆ
Team Udayavani, Oct 28, 2023, 2:26 PM IST
ದೇವನಹಳ್ಳಿ: ಗ್ರಾಮ ಪಂಚಾಯಿತಿಗಳು ಆರ್ಥಿಕವಾಗಿ ಸದೃಢಗೊಳ್ಳಲು ಸರ್ಕಾರ ತೆರಿಗೆ ನೀತಿಯಿಂದಾಗಿ ಜನ ಫಜೀತಿ ಬೀಳುವಂತಾಗಿದೆ. ಇದರಿಂದ ಗ್ರಾಮೀಣ ಜನರಿಗೆ ಹೆಚ್ಚಿನ ಹೊರೆ ಬೀಳುವಂತೆ ಆಗಿದ್ದು ಇದರಿಂದ ಸಮಸ್ಯೆ ಎದುರಿಸುವ ಸ್ಥಿತಿ ಎದುರಾಗಿದೆ.
ಮಳೆ ಇಲ್ಲದೆ ಬರಗಾಲದ ಸ್ಥಿತಿ ಅನುಭವಿಸುತ್ತಿದ್ದು, ಮತ್ತೂಂದೆಡೆ ಆರ್ಥಿಕ ಸಂಕಷ್ಟವನ್ನು ಜನರು ಎದುರಿಸುತ್ತಿದ್ದು ಇದರ ನಡುವೆ ಸರಕಾರ ತೆರಿಗೆ ಹೊರೆಯನ್ನು ಜನರ ಮೇಲೆ ಏರಿದೆ.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಸ್ತುಗಳ ದರವು ಹಾಗೂ ದಿನನಿತ್ಯ ಬಳಸುವ ಎಲ್ಲಾ ಪದಾರ್ಥಗಳು ಬೆಲೆ ಏರಿಕೆಯಾಗುತ್ತಿದೆ. ಮಧ್ಯಮ ವರ್ಗದ ಜನ ಜೀವನ ನಡೆಸುವುದು ದುಬಾರಿಯಾಗುತ್ತಿದೆ. ಅದರ ನಡುವೆಯೂ ಸರ್ಕಾರ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಪಂಚಾಯಿತಿಗಳಿಗೆ ನಿಗದಿ ಪಡಿಸಿರುವ ತೆರಿಗೆ ಹೆಚ್ಚಿಸಿರುವುದು ಸಾರ್ವಜನಿಕರಲ್ಲಿ ನುಂಗಲಾರದ ತುತ್ತಾಗಿದೆ. ಪ್ರತಿಯೊಂದರಲ್ಲೂ ಹೆಚ್ಚಳವಾಗುತ್ತಿರುವುದು ಸರ್ಕಾರದ ದ್ವಂದ್ವ ನೀತಿಗಳಿಂದ ಜನ ಕಂಗೆಟ್ಟಿದ್ದಾರೆ.
ತೆರಿಗೆ ಸಂಗ್ರಹಕ್ಕಾಗಿ ಅಧಿಕಾರಿಗಳು, ಸಿಬ್ಬಂದಿ ಪರದಾಟ: ಗ್ರಾಮ ಪಂಚಾಯಿತಿಗಳಲ್ಲಿ ಆರ್ಥಿಕವಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಪಂಚಾಯ್ತಿಗಳಿಗೆ ನಿಗದಿಪಡಿಸಿರುವ ತೆರಿಗೆ ಸಂಗ್ರಹ ಗುರಿ ಸಾಧಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಅಧಿಕಾರಿಗಳಿಗೆ ತರಾಟೆ: ಸರ್ಕಾರದ ಆದೇಶಗಳನ್ನು ಮುಂದೆ ಇಟ್ಟುಕೊಂಡು ತೆರಿಗೆ ವಸೂಲಿಗೆ ಸಾರ್ವಜನಿಕರ ಮನೆ ಬಾಗಿಲಿಗೆ ಹೋಗುತ್ತಿರುವ ಸಿಬ್ಬಂದಿಯನ್ನು ಜನರು ವಿವಿಧ ರೀತಿಯ ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಮಳೆ ಇಲ್ಲದೆ. ಬರಗಾಲ ಬಂದಿದೆ. ಸಂಕಷ್ಟ ಎದುರಿಸುತ್ತಿದ್ದೇವೆ. ಈ ಸಮಯದಲ್ಲಿ ಸರ್ಕಾರ ನಿಗದಿ ಪಡಿಸಿರುವ ತೆರಿಗೆ ಕಟ್ಟುವಂತೆ ಮನೆ ಬಾಗಿಲಿಗೆ ಬಂದರೆ ಹೇಗೆ ಕಟ್ಟಬೇಕು. ಕೆಲಸಗಳಿಲ್ಲದೆ ಇದ್ದೇವೆ. ತೆರಿಗೆ ಎಲ್ಲಿಂದ ತಂದು ಕಟ್ಟುವುದು ಎಂದು ಸಿಬ್ಬಂದಿಗೆ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಸಿಬ್ಬಂದಿ ಸರ್ಕಾರದ ಆದೇಶ ಮತ್ತು ಗುರಿಯನ್ನು ಸಾಧಿಸಲು ಹೆಣಗಾಡುವಂತೆ ಆಗಿದೆ.
ಜನರಿಗೆ ತೆರಿಗೆಯ ಹೊರೆ: ಗ್ರಾಪಂ ವ್ಯಾಪ್ತಿಗಳಲ್ಲಿ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ ಚರಂಡಿಗಳ ನಿರ್ಮಾಣಕ್ಕೆ ಮಹಾತ್ಮ ಗಾಂಧಿ ಜಿಯೋ ಖಾತ್ರಿ ಯೋಜನೆ ಅಡಿಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿ ಜನರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ಇನ್ನುಳಿದ ಸೌಲಭ್ಯಗಳನ್ನು ಒದಗಿಸಲು ಆರ್ಥಿಕವಾಗಿ ಸಂಪನ್ಮೂಲ ಕ್ರೂಢಿಕರಣಕ್ಕಾಗಿ ಗ್ರಾಮಗಳಲ್ಲಿ ವಸತಿ, ವಸತಿಯೇತರ, ಕೈಗಾರಿಕೆ ಇತರೆ ಉದ್ದೇಶ ಅಭಿವೃದ್ಧಿ ಹೊಂದಿದ ಭೂ ಪರಿವರ್ತನೆಯ ಜಮೀನು ಮತ್ತು ನಿವೇಶನಗಳಿಗೆ ಉಪನೋಂದಣಾಧಿಕಾರಿ ಇಲಾಖೆ ವಿಧಿಸಿರುವ ಭೂಮಿಯ ಮೌಲ್ಯ ಆಧಾರದಲ್ಲಿ ತೆರಿಗೆ ಸಂಗ್ರಹಿಸಲು ಸೂಚನೆಯನ್ನು ನೀಡಿದೆ. ಇದರಿಂದ ಸಾಕಷ್ಟು ಜನರಿಗೆ ತೆರಿಗೆಯ ಹೊರೆ ಬೀಳುತ್ತಿದೆ.
ಶಿಥಿಲಗೊಂಡ ಮನೆಗಳು: ಗ್ರಾಪಂ ವ್ಯಾಪ್ತಿಯಲ್ಲಿ ಖಾತೆ ಹೊಂದಿರುವ ಬಹಳಷ್ಟು ಮನೆಗಳು ಶಿಥಿಲ ವಾಗಿದೆ. ಮನೆಗಳನ್ನು ಬಿಟ್ಟು ಕಂದಾಯ ಇಲಾಖೆಯಲ್ಲಿ ದಾಖಲೆ ಇರುವ ಭೂಮಿ ಯಲ್ಲಿ ವಾಸದ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ವಿದ್ಯುತ್ ಮೀಟರ್ ಬದಲಾ ವಣೆಗಾಗಿ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಲು ಗ್ರಾಪಂಗೆ ಹೋದರೆ ತೆರಿಗೆ ಹಣ ಕಟ್ಟಬೇಕಾಗುತ್ತದೆ ಎಂದು ಹಳೆಯ ಮನೆಯ ತೆರಿಗೆ ಕಟ್ಟಿ ರಸೀದಿ ಪಡೆದುಕೊಂಡು ಅದೇ ರಸೀದಿಗಳನ್ನು ಬಳಸಿಕೊಂಡು ಹಳೆಯ ಆರ್‌ಆರ್ ಸಂಖ್ಯೆಗಳನ್ನು ಹೊಸ ಮನೆಗಳಿಗೆ ಅಳ ವಡಿಸಿಕೊಂಡಿದ್ದಾರೆ. ಗ್ರಾಪಂಗಳಿಗೆ ಬರಬೇಕಾಗಿರುವ ತೆರಿಗೆ ಹೇಗೆ ಹೆಚ್ಚು ಸಮಸ್ಯೆ ಬೀಳುತ್ತಿದೆ. ಹಳೆ ಮನೆಗಳು ಶಿಥಿಲವಾಗಿರುವ ಕಾರಣಕ್ಕೆ ಕೆಲವರು ತೆರಿಗೆಯನ್ನು ಕಟ್ಟುತ್ತಿಲ್ಲ. ಒಂದು ಮನೆಗೆ ಆರ್‌ಸಿಸಿ ಛಾವಣಿ, ಕಾಂಕ್ರೀಟ್ ಇಟ್ಟಿಗೆ ಗೋಡೆ, ಮಾರ್ಬಲ್, ನೆಲಹಾಸು ತೇಗದ ಮರದ ಕಿಟಕಿ ಬಾಗಿಲುಗಳು ಇಟ್ಟಿದ್ದರೆ.
ವಸತಿ ಕಟ್ಟಡಕ್ಕೆ ಶೇ 0.10, ವಾಣಿಜ್ಯ ಕಟ್ಟಡಕ್ಕೆ ಶೇ 0.50, ವಸತಿಯೇತರ ಕಟ್ಟಡಕ್ಕೆ ಶೇ 0.40, ಕೃಷಿ ಆಧಾರಿತ ಉತ್ಪಾದನಾ ಘಟಕಗಳ ಕಟ್ಟಡಗಳಿಗೆ ಶೇ 0.30ಯಷ್ಟು ತೆರಿಗೆಯನ್ನು ವಿಧಿಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಕಂದಾಯ ಇಲಾಖೆಯಲ್ಲಿ ಕಟ್ಟಿರುವ ಮನೆಗಳಿಗೆ ಎರಡು ಪಟ್ಟು ತೆರಿಗೆ: ಗ್ರಾಮ ಠಾಣೆಯನ್ನು ಬಿಟ್ಟು ಕಂದಾಯ ಇಲಾಖೆಯಲ್ಲಿ ದಾಖಲೆ ಹೊಂದಿರುವ ಜಮೀನಿನಲ್ಲಿ ಮನೆ ಕಟ್ಟಿದ್ದರೆ, ಮೂರು ಪಟ್ಟು ಕಂದಾಯ ಕಟ್ಟಿಸಿಕೊಂಡು ಅವರಿಗೆ ಸೌಲಭ್ಯ ಕೊಡಲಾಗುತ್ತದೆ. ಅಂತಹ ಮನೆಗಳ ಅಳತೆಯನ್ನು ಪಂಚಾಯಿತಿಯಲ್ಲಿ ದಾಖಲು ಮಾಡಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ದುಪ್ಪಟ್ಟು ತೆರಿಗೆ ಕಟ್ಟಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಸಿಬ್ಬಂದಿ ಹೇಳುತ್ತಾರೆ.
ಮಳೆ ಇಲ್ಲದೆ ಬರಗಾಲದಿಂದ ಕಂಗೆಟ್ಟಿದ್ದೇವೆ. ಸಾಲ ಮಾಡಿ ಕೃಷಿ ಚಟು ವಟಿಕೆಗಳನ್ನು ನಡೆಸುತ್ತಿದ್ದೇವೆ. ಒಂದು ಕಡೆ ಬರಗಾಲ ಮತ್ತೂಂದು ಕಡೆ ಆರ್ಥಿಕ ಸಂಕಷ್ಟ ಇರುವ ವೇಳೆಯಲ್ಲಿ ಸರ್ಕಾರ ತೆರಿಗೆ ನಿಗದಿಪಡಿಸಿ ಇರುವುದರಿಂದ ಸಾಕಷ್ಟು ಸಮಸ್ಯೆ ಎದುರಿಸುವಂತೆ ಆಗಿದೆ. ವಸತಿ ಕಟ್ಟಡಗಳಿಗೆ ತೆರಿಗೆ ಒಂದು ದರ ಮಾಡಿದ್ದಾರೆ. ● ನಾರಾಯಣಪ್ಪ, ಗ್ರಾಮಸ್ಥ
ಸಾರ್ವಜನಿಕರು ತೆರಿಗೆ ಕಟ್ಟುವ ಮೂಲಕ ಗ್ರಾಪಂಗಳನ್ನು ಆರ್ಥಿಕವಾಗಿ ಸದೃಢ ಗೊಳಿಸಲು ತೆರಿಗೆ ಸಂಗ್ರಹದ ಗುರಿಯನ್ನು ನೀಡಿದೆ. ರಾಜ್ಯ ಸರ್ಕಾರ ಆದೇಶದಲ್ಲಿ ಪಾರ ದಕ್ಷತೆ ಇದೆ. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಪ್ರದೇಶವಾರು ನಿಗದಿ ಪಡಿಸಿ ರುವ ಭೂಮಿಯ ಮೌಲ್ಯ ಆಧಾರ ದಲ್ಲಿ ತೆರಿಗೆ ನಿಗದಿಯಾಗಿರುತ್ತದೆ. ಕಂಪ್ಯೂಟರ್ ರಸೀದಿಯನ್ನು ನೀಡಲಾಗುತ್ತದೆ. ● ಶ್ರೀನಾಥ್‌ಗೌಡ, ಇಓ ತಾಪಂ ದೇವನಹಳ್ಳಿ
– ಎಸ್.ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.