ಜಿಲ್ಲೆಯಲ್ಲಿ 36 ಡಿಗ್ರಿಗೆ ಏರಿದ ತಾಪಮಾನ
Team Udayavani, Mar 23, 2021, 1:32 PM IST
ದೇವನಹಳ್ಳಿ: ಜಿಲ್ಲೆಯಲ್ಲಿ ಈ ಬಾರಿಯೂ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಸೂರ್ಯ ಜನ ನೆತ್ತಿ ಸುಡುವುದರ ಜೊತೆಗೆ ಮೈಬೆವರನ್ನು ಇಳಿಸುತ್ತಿದ್ದಾನೆ.ಇದರಿಂದ ಜನರು ಸುಸ್ತು ಆಗಿ, ದಾಹ ನೀಗಿಸಲುಕೊಳ್ಳಲು ತಪ್ಪು ಪಾನೀಯ, ಗಬ್ಬಿನ ಹಾಲು, ಎಳೆನೀರಿಗೆ ಮೊರೆಹೋಗಿದ್ದಾರೆ.
ಬೆಳಗ್ಗೆ 7.30ಕ್ಕೆ ಮೈಸುಡಲು ಆರಂಭಿಸುವ ಬಿಸಿಲು ಸಂಜೆ ಐದು ಆದ್ರೂ ತಗ್ಗುವುದೇ ಇಲ್ಲ. ಮೈಚರ್ಮದ ಜೊತೆ ಬಾಯಿ ಒಣಗುವಅನುಭವವಾಗುತ್ತದೆ. ಬಿಸಿಲಿನ ತೀವ್ರತೆಗೆ ಜನರುತಂಪು ಪಾನೀಯ, ಪಾನಕ, ಮಜ್ಜಿಗೆ, ಎಳೆನೀರು ಕಡೆವಾಲುತ್ತಿದ್ದಾರೆ.
ಮಜ್ಜಿಗೆಗೆ ಸಾಕಷ್ಟು ಬೇಡಿಕೆ: ಬೇಕರಿ, ಹೋಟೆಲ್‌ಗಳಲ್ಲಿ ತಂಪು ಪಾನೀಯಗಳ ಮಾರಾಟ ಗಣನೀಯವಾಗಿ ಹೆಚ್ಚಿದೆ. ಮಜ್ಜಿಗೆಗೆ ಸಾಕಷ್ಟು ಬೇಡಿಕೆಕಂಡು ಬರುತ್ತಿದೆ. ಬಿಸಿಲಿನ ತಾಪ ಹೆಚ್ಚಾದಂತೆರೋಗ-ರುಜಿನ ಮನೆ ಮಾಡುತ್ತವೆ. ರಸ್ತೆ ಬದಿಯಲ್ಲಿಮಜ್ಜಿಗೆ, ಹೆಸರುಬೇಳೆ, ಕೋಸಂಬರಿ, ಕಲ್ಲಂಗಡಿ, ಕಬ್ರೂಜ ಇತರೆ ಹಣ್ಣು ಮಾರಾಟದ ಅಂಗಡಿಗಳು ತಲೆ ಎತ್ತುತ್ತಿವೆ.
ರಸ್ತೆಗೆ ಇಳಿಯಲು ಹಿಂದೇಟು: ಮಾರ್ಚ್ ನಲ್ಲೇ ಬಿಸಿಲಿನ ತಾಪಮಾನ 34 ರಿಂದ 36ಡಿಗ್ರಿಗೆ ಏರಿದೆ. ಇನ್ನೂ ಏಪ್ರಿಲ್, ಮೇನಲ್ಲಿ ಇದರಪ್ರಮಾಣ ಎಷ್ಟು ಇರುತ್ತದೆ ಎಂದು ಹೇಳಲುಅಸಾಧ್ಯ. ಈಗಿನ ಬಿಸಿಲಿಗೆ ಜನ ಮಧ್ಯಾಹ್ನದ ವೇಳೆರಸ್ತೆಗೆ ಇಳಿಯಲು ಹಿಂದೇಟು ಹಾಕುತ್ತಿದ್ದಾರೆ.ಹೊರಗಿನ ಕೆಲಸಗಳನ್ನು ಸಾಧ್ಯವಾದಷ್ಟು ಬೆಳಗ್ಗೆಅಥವಾ ಸಂಜೆ ನಂತರ ಮುಗಿಸಿಕೊಳ್ಳಲು ಮುಂದಾಗುತ್ತಿದ್ದಾರೆ.
ಎಳನೀರೇ ಬೆಸ್ಟ್: ಬೇಸಿಗೆಯಲ್ಲಿ ದಾಹ ನೀಗಿಸಿಕೊಳ್ಳಲು ಜನ ಹೆಚ್ಚಾಗಿ ಎಳನೀರನ್ನೇ ಆಯ್ಕೆಮಾಡಿಕೊಳ್ಳುತ್ತಿದ್ದಾರೆ. ದಾಹ ನೀಗುವುದರಜೊತೆಗೆ ಆರೋಗ್ಯವೂ ವೃದ್ಧಿಯಾಗುತ್ತದೆ ಎಂಬಕಾರಣಕ್ಕೆ ಬೆಲೆ ಹೆಚ್ಚಾದ್ರೂ ಖರೀದಿಸಿಕುಡಿಯುತ್ತಿದ್ದಾರೆ. ಸದ್ಯ ಒಂದು ಎಳನೀರಿನ ಬೆಲೆ 30 ರಿಂದ 35 ರೂ. ಇದೆ.
ಬೇಸಿಗೆಯಲ್ಲಿ ಎಳೆನೀರಿಗೆ ಹೆಚ್ಚಿನ ಬೇಡಿಕೆಇರುತ್ತದೆ. 35 ವರ್ಷಗಳಿಂದ ಇದೇವ್ಯಾಪಾರ ಮಾಡುತ್ತಿದ್ದೇನೆ. ಆಸ್ಪತ್ರೆಗೆ ಬರುವರೋಗಿಗಳಿಗೆ, ವೃದ್ಧರಿಗೆ 25 ರೂ. ಬೆಲೆ ನಿಗದಿಮಾಡಿದ್ದೇವೆ. ತಾಲೂಕು, ಜಿಲ್ಲೆಯಲ್ಲಿನ ತೆಂಗಿನತೋಟಗಳಿಂದ ಎಳೆನೀರನ್ನು ಖರೀದಿಸಿತರಲಾಗುತ್ತಿದೆ. ಜನರು ಸಹ ಎಳನೀರನ್ನೇಹೆಚ್ಚು ಕೇಳುತ್ತಾರೆ. – ಮುನಿರಾಜು, ಎಳೆನೀರು ವ್ಯಾಪಾರಿ, ದೇವನಹಳ್ಳಿ
ಈ ಬಾರಿ ಬಿಸಿಲಿನ ತಾಪಮಾನಹೆಚ್ಚಾಗಿದೆ. ಮಧ್ಯಾಹ್ನದ ವೇಳೆ ನೆತ್ತಿಸುಡುತ್ತದೆ. ಮನೆಯಿಂದ ಹೊರ ಹೋಗಲುಹಿಂದೇಟು ಹಾಕುವಂತಾಗಿದೆ. ಬಿಸಿಲಿನತಾಪಕ್ಕೆ ತಲೆನೋವಿನ ಬಾಧೆ ಹೆಚ್ಚಾಗುತ್ತದೆ.ಊಟವೂ ಸರಿಯಾಗಿ ಸೇರುವುದಿಲ್ಲ.ಹೀಗಾಗಿ ಎಳೆ ನೀರು ಕುಡಿಯುವುದರಿಂದಸುಸ್ತು ಕಡಿಮೆ ಆಗಿ, ಆರೋಗ್ಯಕಾಪಾಡಿಕೊಳ್ಳಬಹುದು. – ವೆಂಕಟೇಶ್, ನಾಗರಿಕ
ನರೇಗಾ ಯೋಜನೆಯಲ್ಲಿ ಉದ್ಯೋಗಚೀಟಿ ಹೊಂದಿದವರಿಗೆ ತೆಂಗಿನ ತೋಟಮಾಡುವವರಿಗೆ ಪ್ರೋತ್ಸಾಹವನ್ನು ಇಲಾಖೆಯಿಂದ ನೀಡಲಾಗುತ್ತಿದೆ. ಪ್ರತಿ ಬೇಸಿಗೆ ವೇಳೆಯಲ್ಲಿ ಎಳೆನೀರಿಗೆ ಹೆಚ್ಚಿನ ಬೇಡಿಕೆ ಉಂಟಾಗುತ್ತದೆ. ಎಳೆನೀರು ತೋಟ ಮಾಡುವ ರೈತರುನರೇಗಾ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು. – ಮಹಂತೇಶ್ ಮುರುಗೋಡ್, ಉಪ ನಿರ್ದೇಶಕ, ಜಿಲ್ಲಾ ತೋಟಗಾರಿಕಾ ಇಲಾಖೆ
– ಎಸ್.ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.