Temple tank: ಕಲ್ಯಾಣಿಗಳ ಕಲ್ಯಾಣ ಕಾರ್ಯ ಚುರುಕು


Team Udayavani, Aug 27, 2023, 3:22 PM IST

tdy-11

ದೇವನಹಳ್ಳಿ: ಇತ್ತೀಚಿನ ದಿನಗಳಲ್ಲಿ ಕಲ್ಯಾಣಿಗಳು ನಶಿಸಿಹೋಗುತ್ತಿವೆ. ನಮ್ಮ ಹಿರಿಯರು ಕಲ್ಯಾಣಿಗಳನ್ನು ನಿರ್ಮಿಸಿ ಅಂತರ್ಜಲ ಹೆಚ್ಚಿಸಿ ಸಹಕಾರಿಯಾಗಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಇರುವ ಕಲ್ಯಾಣಿಗಳನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಂತರ್ಜಲ ಹೆಚ್ಚಿಸಲು ಬೆಂಗಳೂರು ಗ್ರಾಮಾಂತರ ಜಿಪಂ ಮುಂದಾಗಿದೆ.

ಬಯಲುಸೀಮೆ ಪ್ರದೇಶವಾಗಿರುವುದರಿಂದ ಮತ್ತು ಯಾವುದೇ ನದಿ ಮೂಲಗಳು ಇರುವು ದರಿಂದ ಕೇವಲ ಮಳೆಯಾಶ್ರಿತವಾಗಿದ್ದು ಜನರು ನಂಬಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಳೆ ಕೊರತೆಯಿಂದ ಕೆರಗಳಲ್ಲಿನ ನೀರು ಸಹ ಇಲ್ಲದಂತಾಗುತ್ತಿದೆ. ಜಿಲ್ಲೆಯಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕಲ್ಯಾಣಿಗಳನ್ನು ಅಭಿವೃದ್ಧಿಪಡಿಸಿ ಹೂಳು ಎತ್ತಿಸಿ ಕಲ್ಯಾಣಿಗಳಿಗೆ ಕಲ್ಯಾಣಿಗಳಿಗೆ ಜಿಪಂ ಹೊಸ ಜೀವ ನೀಡುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಾಡಪ್ರಭು ಕೆಂಪೇಗೌಡರು ಮತ್ತು ಟಿಪ್ಪು ಸುಲ್ತಾನ್‌ ಆಡಳಿತಾವಧಿಯಲ್ಲಿ ಅನೇಕ ಜಲ ಸಂಪನ್ಮೂಲ ನಿರ್ಮಾಣಗೊಂಡಿದ್ದು, ಧಾರ್ಮಿಕ ಶ್ರದ್ಧಾ ಕೇಂದ್ರ ಗಳಾಗಿದ್ದ ಹಾಗೂ ಕುಡಿಯುವ ನೀರಿನ ಮೂಲಗಳಾಗಿದ್ದ ಕಲ್ಯಾಣಿಗಳು ಕಾಲಕ್ರಮೇಣ ನಿಲ್ಯìಕ್ಷಕ್ಕೆ ಒಳಗಾಗಿದ್ದವು. ಜೀವಜಲ ಇದ್ದರೂ ತ್ಯಾಜ್ಯ ರಾಶಿಯಲ್ಲಿ ಬಹುತೇಕ ಮುಚ್ಚಿಹೋಗಿದ್ದವು. ಇದೀಗ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ (ನರೇಗಾ) ಜಿಲ್ಲೆಯಾದ್ಯಂತ ಅನೇಕ ಕಲ್ಯಾಣಿಗಳಿಗೆ ಪುನರುಜ್ಜೀವನಗೊಂಡಿದೆ. ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಕಲ್ಯಾಣಿಗಳ ಅಭಿವೃದ್ಧಿಗೊಂಡಿವೆ.

ಜಲ ಸಂರಕ್ಷಣೆಗೆ ಒತ್ತು: ಇದೀಗ ನರೇಗಾ ಯೋಜನೆ ಅಡಿ ಕಾರ್ಯ ಕೈಗೆತ್ತಿಕೊಳ್ಳುವ ಮೂಲಕ ಜಲಸಂರಕ್ಷಣೆಗೆ ಆದ್ಯ ತೆ ನೀಡಲಾಗಿದೆ. ಬಹುತೇಕ ಕಲ್ಯಾಣಿ ಗಳು ಕಸದಲ್ಲಿಯೇ ಮುಚ್ಚಿಕೊಂಡಿವೆ. ಶೇ.70ರಷ್ಟು ಹೂಳು ತುಂಬಿಕೊಂಡಿವೆ. ಕಸದ ಗಿಡಗಳು ಬೆಳೆದುಕೊಂಡಿದ್ದು, ನಿರುಪಯುಕ್ತ ತಾಣ ವಾಗಿಯೇ ಉಳಿದುಕೊಂಡಿವೆ. ಇಂಥ ಕಲ್ಯಾಣಿಗಳನ್ನು ಹಂತಹಂತವಾಗಿ ನವೀಕರಣ ಮಾಡಲಾಗುತ್ತದೆ. ಮೊದಲನೇ ಹಂತದಲ್ಲಿ ಕಲ್ಯಾಣಿ ಯೊಳಗಿನ ಹೂಳು, ಗಿಡಗಂಟಿಗಳನ್ನು ಸ್ವತ್ಛಗೊಳಿಸಲಾಗುತ್ತಿದೆ. ಎರಡನೆ ಹಂತದಲ್ಲಿ ನೀರಿನ ಸೆಲೆಗಳು ಬತ್ತದ ರೀತಿಯಲ್ಲಿ ಹಾಗೂ ಕಲ್ಯಾಣಿ ಸುತ್ತಮುತ್ತ ಹಾಗೂ ಹೊರಭಾಗದಲ್ಲಿ ಸೌಂದಯೀìಕರಣ ಮಾಡುವುದಕ್ಕೆ ಆದ್ಯತೆ ನೀಡಲಾಗುತ್ತಿದೆ.

ತಿಮ್ಮಸಂದ್ರದ ಕಲ್ಯಾಣಿ ದುರಸ್ತಿ: ಲಕ್ಕೊಂಡಹಳ್ಳಿ ಗ್ರಾಪಂನಲ್ಲಿ ತಿಮ್ಮಸಂದ್ರ ಗ್ರಾಮದ ದುರಸ್ತಿಗೊಂಡಿರುವ ಕಲ್ಯಾಣಿ, ಹೊಸಕೋಟೆ ತಾಲೂಕು ಲಕ್ಕೊಂಡಹಳ್ಳಿ ಗ್ರಾಮದ ಪುರಾತನ ಕಲ್ಯಾಣಿ ವಿಸ್ತೀರ್ಣ 35 ವಿಸ್ತೀರ್ಣ, 30 ಚದರ ಅಡಿ ವಿಸ್ತೀರ್ಣ, 40 ಅಡಿ ಆಳದ 12 ಲಕ್ಷ ಲೀ. ನೀರು ಸಂಗ್ರಹ ಸಾಮರ್ಥ್ಯದ ಕಲ್ಯಾಣಿಗೆ 2022-23ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಕಾಯಕಲ್ಪ ದೊರಕಿಸಲಾಗಿದೆ. ಒಟ್ಟು ಅಂದಾಜು ಮೊತ್ತ 10 ಲಕ್ಷ ರೂ.ವೆಚ್ಚದ ಯೋಜನೆ ಇದಾಗಿದೆ.

ನವೀಕರಣ ಕಾಮಗಾರಿ: 1920ರ ಮಾನವ ದಿನಗಳನ್ನು ಸೃಜಿಸಲಾಗಿದ್ದು, 4.67,216 ರೂ.ಮೊತ್ತ ಸಾಮಗ್ರಿಗಳಿಗೆ ಹಾಗೂ 5.54 ಲಕ್ಷ ರೂ.ಕೂಲಿಗಳಿಗೆ ನೀಡಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಶೇ.60ರಷ್ಟು ದಿನಗೂಲಿ ಹಾಗೂ 40 ವಸ್ತುಗಳ ಖರೀದಿ ಅನುಪಾತದಲ್ಲಿ ನವೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ಕಲ್ಯಾಣಿ ಒಳಾಂಗಣ ಕಾಮಗಾರಿ ಮುಗಿದ ಬಳಿಕ, ಅದರ ಸುತ್ತಮುತ್ತ ಅವರಣ ಗೊಡೆ ನಿರ್ಮಾಣ ಮಾಡುವುದಕ್ಕೆ ಆದ್ಯತೆ ನೀಡಲಾಗಿದೆ. ಕಲ್ಯಾಣಿಗಳಲ್ಲಿರುವ ಸುತ್ತಮುತ್ತಲಿನ ಪರಿಸರವನ್ನು ಸುಂದರಗೊಳಿಸುವ ಯೋಜನೆಯಲ್ಲಿ ಪಂಚಾಯಿತಿ ಮಾಡಿರುವುದು ಗಮನಾರ್ಹ.

ಜಲಮೂಲಗಳು ಭರ್ತಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಅಭಿವೃದ್ಧಿಗೊಂಡ ಕಲ್ಯಾಣಿ ಅಂತರ್ಜಲವೃದ್ಧಿ ಕಲ್ಯಾಣಿಗಳು ಅಂತರ್ಜಲ ಮರುಪೂರ್ಣ ಘಟಕಗಳಾಗಿವೆ. ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಗೋಕಟ್ಟೆ, ಚೆಕ್‌ಡ್ಯಾಂ, ಬ್ಯಾರೇಜ್‌ ಸೇರಿ ಮತ್ತಿತರ ಜಲಮೂಲಗಳು ಭರ್ತಿಯಾಗಿವೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿ ಕೃಷಿ ಚಟುವಟಿಕೆ, ಜನ ಜಾನುವಾರುಗಳು, ಮೀನುಗಾರಿಕೆ, ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗಿವೆ.

ಕಲ್ಯಾಣಿಗಳಲ್ಲಿ ನಿರ್ವಹಣೆ ಕೊರತೆ:

ಕಳೆದ ಎರಡು ವರ್ಷಗಳಲ್ಲಿ ನರೇಗಾ ಯೋಜನೆಯಡಿ ಒಟ್ಟು 63 ಕಲ್ಯಾಣಿಗಳನ್ನು ನವೀಕರಣ ಮಾಡುವುದಕ್ಕೆ ಯೋಜಿಸಲಾ ಗಿತ್ತು. ಹೊಸಕೋಟೆ ತಾಲೂಕಿನಲ್ಲಿ ಅತೀ ಹೆಚ್ಚು 38 ಕಲ್ಯಾಣಿಗಳನ್ನು ಗುರುತಿಸಲಾಗಿತ್ತು. ದೇವನಹಳ್ಳಿ ತಾಲೂಕಿನಲ್ಲಿ 9, ನೆಲಮಂಗಲ ತಾಲೂಕಿನಲ್ಲಿ 16 ಕಲ್ಯಾಣಿಗಳನ್ನು ಗುರುತಿಸ ಲಾಗಿದೆ. ಶತಮಾನ ಗಳ ಹಿಂದೆ ವೈಜ್ಞಾನಿಕವಾಗಿ ನಿರ್ಮಾಣ ಗೊಂಡಿ ರುವ ಕಲ್ಯಾಣಿಗಳಲ್ಲಿ ಇಂದಿಗೂ ನೀರ ಸೆಲೆ ಉಕ್ಕುತ್ತಿದೆ. ನಿರ್ವಹಣೆ ಕೊರತೆಯಿಂದ ಎಲ್ಲವೂ ಪಾಳು ಬಿದ್ದಿದ್ದವು. ಹೂಳು ತುಂಬಿಕೊಂಡು ಶಿಥಿಲಾವಸ್ಥೆಯಲ್ಲಿದ್ದ ಬಾವಿಗಳಲ್ಲಿ ಗಿಡಗಂಟಿ, ಪೊದೆಗಳು ಬೆಳೆದು ಬಿಕೋ ಎನ್ನುತ್ತಿದ್ದವು.

ಜಲ ಮೂಲಗಳು ಸಂರಕ್ಷಣೆ ನಿಟ್ಟಿನಲ್ಲಿ ಇಂತಹ ಕಲ್ಯಾಣಿಗಳನ್ನು ಭದ್ರಪಡಿಸಿ ವರ್ಷವಿಡೀ ನೀರು ನಿಲ್ಲುವಂತೆ ನೋಡಿಕೊಂಡರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುವುದಿಲ್ಲ. -ಟಿ.ಕೆ. ರಮೇಶ್‌, ಉಪ ಕಾರ್ಯದರ್ಶಿ 

-ಮಹೇಶ್‌

ಟಾಪ್ ನ್ಯೂಸ್

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

9-bng

Channapatna: ಸಾಲಕ್ಕೆ ಹೆದರಿ ದಂಪತಿ ನೇಣಿಗೆ ಶರಣು

7

Arrested: ಪಾಕ್‌ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್‌ಪಿನ್‌ ಸೆರೆ

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

5-ptr

Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು

simha roopini kannada movie

Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್‌ ರಾಜ್‌ ನಿರ್ದೇಶನ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.