ಸೋಂಕಿತ ಶವಗಳ ಸಂಸ್ಕಾರವೇ ಸವಾಲು


Team Udayavani, Apr 30, 2021, 1:49 PM IST

The challenge is the burial of the undead

ದೊಡ್ಡಬಳ್ಳಾಪುರ: ತಾಲೂಕು ಸೇರಿದಂತೆ ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿವೆ. ಅಂತೆಯೇ ಕೋವಿಡ್‌ನಿಂದಸಾವನ್ನಪ್ಪುವವರ ಪ್ರಮಾಣವೂ ಹೆಚ್ಚಿದೆ.

ಆದರೆ ಕೋವಿಡ್‌ನಿಯಮಾನುಸಾರ ಅಂತ್ಯಕ್ರಿಯೆ ಮಾಡಲು ತಾಲೂಕುಆಡಳಿತಕ್ಕೆ ಸವಾಲಾಗಿದೆ.ನಗರದ ಡಿ.ಕ್ರಾಸ್‌ ರಸ್ತೆಯ ನಾಗರಕೆರೆ ಅಂಚಿನಲ್ಲಿರುವಸ್ಮಶಾನದಲ್ಲಿ ಕಳೆದ ಬಾರಿಯಿಂದ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಆರಂಭಿಸಲಾಗಿ, ಮೊದಲುಶವಗಳನ್ನು ಹೂಳಲಾಗುತ್ತಿತ್ತು. ಈಗ ಇದೇ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಲು ಮೃತ ದೇಹಗಳನ್ನು ಸುಡಲಾಗುತ್ತಿದೆ. ಆದರೆ ದಿನೇ ದಿನೇ ಹೆಚ್ಚಾಗುತ್ತಿರುವ ಮೃತದೇಹಗಳಿಂದಾಗಿ, ಕೋವಿಡ್‌ ಮಾರ್ಗಸೂಚಿಗಳ ಸುರಕ್ಷತಾನಿಯಮಗಳು ಪಾಲನೆಯಾಗುತ್ತಿಲ್ಲ ಎಂದು ದೂರು,ಅಂತ್ಯ ಸಂಸ್ಕಾರಕ್ಕಾಗಿ ಹೆಚ್ಚಿನ ಹಣ ವಸೂಲಿಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳು ಹಾಗೂ ಶಾಸಕರಸಭೆಯಲ್ಲಿ ನಗರದ ಹೊರವಲಯದಲ್ಲಿ ಚಿತಾಗಾರ ನಿರ್ಮಿಸುವ ಕುರಿತು ಚರ್ಚೆ ನಡೆದಿದ್ದಾದರೂ ಕ್ರಮ ಕೈಗೊಂಡಿಲ್ಲ.

ಅಕ್ರಮ ನಡೆದಿಲ್ಲ: ಹಣ ನೀಡಬೇಡಿ:: ತಹಶೀಲ್ದಾರ್‌ಡಿ.ಕ್ರಾಸ್‌ ರÓಯ  ನಾಗರಕೆರೆ ಅಂಚಿನಲ್ಲಿರುವ ಸ್ಮಶಾನದಲ್ಲಿ ತಾಲೂಕು ಆಡಳಿತ ನೇಮಿಸಿರುವ ತಂಡವೇ ಕೋವಿಡ್‌ ಮೃತದೇಹಗಳ ಅಂತ್ಯಕ್ರಿಯೆ ನಡೆಸುತ್ತಿದ್ದು,ಯಾವುದೇ ಅಕ್ರಮ ನಡೆದಿಲ್ಲ. ಕೊರೊನಾದಿಂದ ಸಾವಿನ ಪ್ರಮಾಣ ಹೆಚ್ಚಿದ್ದು, ಅಂತ್ಯಕ್ರಿಯೆಗೆ ತಾಲೂಕು ಆಡಳಿತವೇವೆಚ ಭ ‌ರಿಸುತ್ತಿದೆ.

ಹೊರಗಿನ ಯಾವುದೇ ಶವಗಳು ಇಲ್ಲಿಸುಟ್ಟಿರುವ ನಿದರ್ಶನಗಳಿಲ್ಲ. ಹಣ ವಸೂಲಿ ಆರೋಪಗಳುಕೇಳಿ ಬಂದಿದ್ದು, ತಂಡಕ್ಕೆ ಹಣ ಪಡೆಯದಂತೆ ಕಟ್ಟುನಿಟ್ಟಿನಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್‌ ಟಿ.ಎಸ್‌.ಶಿವರಾಜ್‌ ಸ್ಪಷ್ಟನೆ ನೀಡಿದ್ದಾರೆ.

ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆಗೆ ವ್ಯವಸ್ಥೆ :ನಗರದಹೊರವಲಯದ ಚಿಕ್ಕತುಮಕೂರು ಸಮೀಪವಿರುವದೇವಾಂಗ ಮಂಡಲಿ ನಿರ್ವಹಿಸುತ್ತಿರುವ ಮುಕ್ತಿಧಾಮದಲ್ಲಿಕೋವಿಡ್‌ನಿಂದ ಮೃತಪಟ್ಟವರನ್ನು ಸುಡಲು ವ್ಯವಸ್ಥೆಮಾಡಲಾಗಿದೆ ಎಂದು ತಹಶೀಲ್ದಾರ್‌ ಟಿ.ಎಸ್‌.ಶಿವರಾಜ್‌ತಿಳಿಸಿದ್ದಾರೆ. ಮುಕ್ತಿಧಾಮದ ವ್ಯವಸ್ಥೆಗಳನ್ನು ಪರಿಶೀಲಿಸಿದಬಳಿಕ ಮಾತನಾಡಿ, ಮುಕ್ತಿಧಾಮದಲ್ಲಿ ಈಗಾಗಲೇ ಬುಧವಾರ ಸಂಜೆ 2 ಕೋವಿಡ್‌ ಮೃತದೇಹಗಳನ್ನುಸುಡಲಾಗಿದೆ. ಇಲ್ಲಿ ಕೋವಿಡ್‌ ಮೃತದೇಹ ಸುಡಲುದೇವಾಂಗ ಮಂಡಲಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್‌ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ಇಲ್ಲಿರುವ 6ರ ಪೈಕಿ2 ಸಿಲಿಕಾನ್‌ ಕಂಟೈನರ್‌ಗಳನ್ನು ಕೋವಿಡ್‌ ಮೃತದೇಹವನ್ನುಸುಡಲು ದೇವಾಂಗ ಮಂಡಲಿ ಅನುಮತಿ ನೀಡಿದ್ದಾರೆ.

ಕೋವಿಡ್‌ ಹೊರತಾದ ಸ್ವಾಭಾವಿಕ ಸಾವುಗಳಿಂದಮೃತಪಟ್ಟಿರುವವರಿಗೆ ಉಳಿದ ಸಿಲಿಕಾನ್‌ ಕಂಟೈನರ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ತಾಲೂಕು ಆಡಳಿತನೇಮಿಸಿರುವ ತಂಡವೇ ಮುಕ್ತಿಧಾಮದ ಆಡಳಿತದೊಂದಿಗೆಸಂಪರ್ಕದಲ್ಲಿದ್ದು, ನಿಯಮಾನುಸಾರ ಅಂತ್ಯಕ್ರಿಯೆನಡೆಸುತ್ತದೆ. ಆ್ಯಂಬುಲೆನ್ಸ್‌ಗಾಗಿ ಯಾರೂ ಹಣಕೊಡಬೇಕಿಲ್ಲ. ದೇವಾಂಗ ಮಂಡಲಿಯ ಮುಕ್ತಿಧಾಮದ ಅಂತ್ಯಕ್ರಿಯೆ ನಿಯಮದಂತೆ ಅಂತ್ಯಕ್ರಿಯೆ ನಡೆಸಲು ಕ್ರಮಕೈಗೊಳ್ಳಲಾಗಿದೆ ಎಂದರು.ಪರಿಶೀಲನೆ ವೇಳೆ ನಗರಸಭೆ ಪೌರಾಯುಕ್ತ ರಮೇಶ್‌ಎಸ್‌.ಸುಣಗಾರ್‌, ದೇವಾಂಗ ಮಂಡಲಿ ಅಧ್ಯಕ್ಷಎಂ.ಜಿ.ಶ್ರೀನಿವಾಸ್‌ ಇತರರಿದ್ದರು.

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

4

Crime: ರೌಡಿಶೀಟರ್‌ ಕೊಲೆ ಯತ್ನ; ಆರೋಪಿಗೆ ಗುಂಡೇಟು

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

11

Lack of Bus stand: ಹೊಸಕೋಟೆ; ಬಸ್‌ ನಿಲ್ದಾಣವಿಲ್ಲದೆ ಪರದಾಟ!

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.