ಭಾರತ-ಚೀನಾ ಗಡಿಯಲ್ಲಿ ಘರ್ಷಣೆ ದುರದೃಷ್ಟಕರ
Team Udayavani, Jun 18, 2020, 6:58 AM IST
ದೇವನಹಳ್ಳಿ: ಪ್ರಪಂಚದಾದ್ಯಂತ ಕೋವಿಡ್-19 ಇರುವುದರಿಂದ ಜನರು ಆತಂಕದಲ್ಲಿದ್ದಾರೆ. ಆದರೆ ಭಾರತ ಹಾಗೂ ಚೀನಾ ಗಡಿಯಲ್ಲಿ ಘರ್ಷಣೆ ದುರದೃಷ್ಟಕರ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಸುದ್ದಿಗಾಗರೊಂದಿಗೆ ಮಾತನಾಡಿದರು.
ಭಾರತ ಮತ್ತು ಚೀನಾ ದೇಶದ ಪ್ರಧಾನಿಗಳಿಗೆ ಮನವಿ ಮಾಡುತ್ತೇನೆ. ಇಂತಹ ಸನ್ನಿವೇಶ ದಲ್ಲಿ ಪರಸ್ಪರ ಅವಿಶ್ವಾಸದಿಂದ ಯುದ್ಧದ ವಾತಾರಣದ ನಿರ್ಮಾಣ ಬೇಡ. ಅಮಾಯಕ ಯೋಧರ ಬಲಿ ಹಾಗೂ ದೇಶಗಳ ನಡುವಿನ ಸಾಮರಸ್ಯ ಹಾಳು ಮಾಡುವುದು ಬೇಡ. 1967ರಲ್ಲಿ ಯುದ್ಧದ ನಂತರ 1996ರಲ್ಲಿ ಅಂದಿನ ಪ್ರಧಾನಿಯಾಗಿದ್ದ ದೇವೇಗೌಡರು, ಅಂದಿನ ಚೀನಾ ಪ್ರಧಾನಿಯನ್ನು ದೆಹಲಿಗೆ ಕರೆಸಿ ಮಾತು ಕತೆ ನಡೆಸಿದ್ದರು.
ಆಗ ಕೆಲವು ಗಡಿ ಸಮಸ್ಯೆ ಮತ್ತು ಇನ್ನಿತರೆ ಒಪ್ಪಂದಗಳನ್ನು ಮಾಡಿಕೊಂಡು ಇಂದಿಗೂ ಇತಿಹಾಸದಲ್ಲಿ ಉಳಿಯುವಂತೆ ಮಾಡಿ ದ್ದಾರೆ. ಆದರೆ ಅದು ಪ್ರಚಾರ ವಾಗಿರಲಿಲ್ಲ. ನಾನು ಆ ಸಮಯದಲ್ಲಿ ಲೋಕಸಭೆ ಸದಸ್ಯನಾಗಿದ್ದೆ. ಐಎಎಸ್ ಅಧಿಕಾರಿ ಟಿ.ಎಸ್. ಸುಬ್ರಮಣ್ಯಂ ಟರ್ನಿಂಗ್ ಪಾಯಿಂಟ್ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ದೇಶಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಕೊಡುಗೆ ಅಪಾರವಿದೆ.
ಚೀನಾ ದಾಳಿ ಮಾಡಿರುವುದನ್ನು ಖಂಡಿಸು ತ್ತೇನೆ. 2 ದೇಶಗಳು ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು. ಶಾಸಕ ಎಲ್.ಎನ್.ನಾರಾಯಣಸ್ವಾಮಿ, ಮಾಜಿ ಶಾಸಕ ಕೋನರೆಡ್ಡಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಶ್ರೀನಿವಾಸ್, ಕಾರ್ಯಾಧ್ಯಕ್ಷ ಆರ್.ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ ಸೇರಿದಂತೆ ಮುಖಂಡರು, ಕಾರ್ಯ ಕರ್ತರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.