ಸ್ಮಶಾನದಲ್ಲಿಯೇ ದಂಪತಿಗಳ ಜೀವನ
Team Udayavani, May 3, 2021, 3:01 PM IST
ದೇವನಹಳ್ಳಿ: ಸರ್ಕಾರ ಕೋಟ್ಯಂತರ ರೂ. ಖರ್ಚುಮಾಡಿ, ಆಶ್ರಯ ಯೋಜನೆಗಳನ್ನು ಸೃಷ್ಟಿಸಿದೆ.ಅದರೂ ತಾಲೂಕಿನ ಕುರುಬರಕುಂಟೆಯಲ್ಲೊಂದುಕುಟುಂಬ ಸ್ಮಶಾನದಲ್ಲಿ ಜೀವನ ಸಾಗಿಸುತ್ತಿರುವುದುಅಚ್ಚರಿ ಮೂಡಿಸಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂ.ಗ್ರಾಮಾಂತರ ಜಿಲ್ಲಾಡಳಿತ ಭವನದಿಂದ 5-6ಕಿ.ಮೀ. ದೂರದಲ್ಲಿರುವ, ದೇವನಹಳ್ಳಿ ಪಟ್ಟಣದಲ್ಲಿಇಂದಿಗೂ ನಿರ್ಗತಿಕರಿಗೆ ಸೂರು ಕಲ್ಪಿಸುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಿಂದುಳಿದಿದ್ದಾರೆ ಎಂಬುವುದಕ್ಕೆ ಇದೊಂದು ಜ್ವಲಂತ ಸಾಕ್ಷಿ.
ನೆಲಮಂಗಲ ತಾಲೂಕಿನ ಸೋಲೂರುಗ್ರಾಮದವರಾದ ಜ್ಯೋತಿ(40) ಮತ್ತು ಪತಿಪ್ರಭಾಕರ್ ಕಳೆದ 2 ವರ್ಷದಿಂದ ಸ್ಮಶಾನದಜಾಗಗಳನ್ನೇ ಸೂರನ್ನಾಗಿಸಿಕೊಂಡಿದ್ದಾರೆ. ಈ ಹಿಂದೆಒಂದು ವರ್ಷ ದೇವನಹಳ್ಳಿ ಬಿಬಿ ರಸ್ತೆಯಲ್ಲಿರುವ ಸ್ಮಶಾನ ವೊಂದರಲ್ಲಿ ಇದ್ದೆವು. ಅಲ್ಲಿ ಸ್ಮಶಾನ ಅಭಿವೃದ್ಧಿಗೊಳಿಸುವಾಗ ಖಾಲಿ ಮಾಡಿಕೊಂಡು ಬೆಂಗಳೂರು ಜಿಪಂ, ತಾಪಂ, ಆವತಿ ಗ್ರಾಪಂ ವ್ಯಾಪ್ತಿಗೆ ಸೇರಿದಕುರುಬರಕುಂಟೆ ರಸ್ತೆಯಲ್ಲಿನ ಚಿರಶಾಂತಿ ಧಾಮದಲ್ಲಿ ನೆಲೆಸಿದ್ದೇವೆ.
ಪ್ಲಾಸ್ಟಿಕ್, ಪೇಪರ್ ಆಯ್ದುಕೊಂಡು ಜೀವನ ಸಾಗಿಸುತ್ತಿದ್ದೇವೆ ಎನ್ನುತ್ತಾರೆ.ನಿರಂತರ ಬದಲಾಗುವ ಸರ್ಕಾರಗಳುಬಡವರಿಗೆ, ಹಿಂದುಳಿದವರಿಗೆ, ನಿರ್ಗತಿಕರಿಗೆಅನೇಕ ಯೋಜನೆ, ಸೌಲಭ್ಯಗಳನ್ನು ಒದಗಿಸುತ್ತಿದ್ದು,ನಿಜವಾದ ಫಲಾನುಭವಿ ಗುರ್ತಿಸುವಲ್ಲಿವಿಫಲವಾಗಿದೆ. ಸುಮಾರು 2-3 ವರ್ಷಗಳಿಂದಸ್ಮಶಾನದ ಜಾಗದಲ್ಲಿ ಜೀವನ ಸಾಗಿಸುತ್ತಿರುವು ಈ ಕುಟುಂಬಕ್ಕೆ ಆಧಾರ್ ಕಾರ್ಡ್, ಪಡಿತರ ಚೀಟಿ,ಮತದಾರ ಗುರುತಿನ ಚೀಟಿಯನ್ನೂ ನೀಡಿಲ್ಲ.
ಪೇಪರ್ ಆಯ್ದು ಅದರದಲ್ಲಿ ಬರುವ ಪುಡಿಗಾನಲ್ಲಿಅಂದು ದಿನಸಿ ತಂದು ಜೀವನ ಸಾಗಿಸಬೇಕಿದೆ.ಸ್ಮಶಾನಕ್ಕೆ ಬರುವವರು ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುತ್ತಾರೆ. ಅವರು ಇವರಸಂಕಷ್ಟವನ್ನು ವಿಚಾರಿಸುತ್ತಿಲ್ಲ. ಮುಕ್ತಿಧಾಮ ಗಳನ್ನುನಿರ್ವಹಿಸುವವರೂ ಗಮನಹರಿಸಿಲ್ಲ. ಕೂಡಲೇಅವರನ್ನು ಗುರ್ತಿಸಿ ಸೌಲಭ್ಯಗಳನ್ನು ಒದಗಿ ಸುವಜವಾಬ್ದಾರಿ ಸ್ಥಳೀಯ ಜಿಲ್ಲಾ ಡಳಿತದ್ದಾಗಿದೆ.
ಎಸ್.ಮಹೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.