ಕನಕಾಂಬರ ಮೊಗ್ಗಿನ ಜಡೆ ನೀಡಿದ್ದಕ್ಕೆ ವಿವಾಹ ರದ್ದು
Team Udayavani, Oct 27, 2017, 6:50 AM IST
ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಭೀಮಕ್ಕನಹಳ್ಳಿಯ ನವಕೋಟಿ ನಾರಾಯಣ ಕಲ್ಯಾಣ ಮಂಟಪದಲ್ಲಿ ಮೊಗ್ಗಿನ ಜಡೆ ಬಗ್ಗೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಮದುವೆಯೇರದ್ದಾಗಿದೆ. ಕಲ್ಯಾಣ ಮಂಟಪದಲ್ಲಿ ವಿಜಯಪುರದ ವಧುವಿನೊಂದಿಗೆ ಹೊಸಕೋಟೆ ತಾಲೂಕಿನ ಭೀಮಾಪುರದ ಯುವಕನ ವಿವಾಹ ನೆರವೇರಬೇಕಾಗಿತ್ತು.
ಬುಧವಾರ ರಾತ್ರಿ ಆರತಕ್ಷತೆ ನಡೆದು ಗುರುವಾರ ಬೆಳಗ್ಗೆ 5 ರಿಂದ 6 ಗಂಟೆಗೆ ಮುಹೂರ್ತ ನಿಗದಿಯಾಗಿತ್ತು. ಆದರೆ,ಮಲ್ಲಿಗೆ ಹೂವಿನ ಬದಲಿಗೆ ವರನ ಕಡೆಯವರು ವಧುವಿಗೆ ಕನಕಾಂಬರ ಹೂವಿನ ಜಡೆ ನೀಡಿದರು. ಈ ಬಗ್ಗೆ ವಧುವಿನ ಕಡೆಯವರು ಆಕ್ಷೇಪಿಸಿ ಕಲ್ಯಾಣ ಮಂಟಪದಿಂದ ಹೊರ ನಡೆದರು.
ವರ ಹಾಗೂ ವರನ ಸಂಬಂಧಿಗಳು ಬಹಳಷ್ಟು ಮನವಿ ಮಾಡಿದರಾದರೂ ವಧುವಿನ ಕಡೆಯವರು ಕಿವಿಗೊಡದೆ ಕಾರಿನಲ್ಲಿ ಹೊರಟೇ ಬಿಟ್ಟರು. ಇದರಿಂದ ವಿಚಲಿತರಾದ ವರನ ಕಡೆಯವರು ಬೇರೆ ಹುಡುಗಿಗಾಗಿ ಹುಡುಕಾಟ ನಡೆಸಿದರೂ ಪ್ರಯೋಜನವಾಗದ ಕಾರಣ ವಿವಾಹ ರದ್ದಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪಲಾಯನ ಮಾಡಲ್ಲ: ನಿಖಿಲ್
BJP; ಹರಕುಬಾಯಿ ನಾಯಕರಿಂದಲೇ ಸೋಲು: ರೇಣುಕಾಚಾರ್ಯ ಆಕ್ರೋಶ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.