![Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು](https://www.udayavani.com/wp-content/uploads/2024/12/mumbai4-415x234.jpg)
ವೈದ್ಯರಿಗೆ ಆದೇಶಕಿಂತ ವೈರಸ್ ಆತಂಕವೇ ಹೆಚ್ಚು
ಬಾಗಿಲು ಮುಚ್ಚಿದ ಕ್ಲಿನಿಕ್‌ಗಳು; ವೈದ್ಯರಿಲ್ಲದೆ ರೋಗಿಗಳ ಪರದಾಟ
Team Udayavani, Apr 18, 2020, 2:02 PM IST
![ವೈದ್ಯರಿಗೆ ಆದೇಶಕಿಂತ ವೈರಸ್ ಆತಂಕವೇ ಹೆಚ್ಚು](https://www.udayavani.com/wp-content/uploads/2020/04/Doctro-620x465.jpg)
ಸಾಂದರ್ಭಿಕ ಚಿತ್ರ
ನೆಲಮಂಗಲ: ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳನ್ನು ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೆ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಆದೇಶ ಹೊರಡಿಸಿದ್ದರೂ, ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳು ಬಾಗಿಲು ಮುಚ್ಚಿದ್ದು ರೋಗಿಗಳು ಪರದಾಡುವಂತಾಗಿದೆ. ಜತೆಗೆ ವೈದ್ಯರೂ ಕೂಡ ಕೋವಿಡ್ -19 ಸೋಂಕು ತಗುಲುವ ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ 5 ಕೋವಿಡ್ -19 ಪ್ರಕರಣಗಳಿವೆ. 728 ಜನ ಕ್ವಾರಂಟೈನ್‌ನಲ್ಲಿ ನಿಗಾವಹಿಸಲಾಗಿದೆ. ಕೆಮ್ಮು, ನೆಗಡಿ, ಜ್ವರ ಕಂಡರೆ ಸ್ಥಳೀಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಎಲ್ಲಾ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳು ಕಾರ್ಯ ನಿರ್ವಹಿಸುವಂತೆ ಸರಕಾರ ಸೂಚಿಸಿದೆ. ಆದರೂ ಬಹುತೇಕ ಕ್ಲಿನಿಕ್‌ಗಳು ಬಾಗಿಲು ಮುಚ್ಚಿವೆ.
ವೈದ್ಯರಿಲ್ಲ: ಜಿಲ್ಲೆಯ 200ಕ್ಕೂ ಹೆಚ್ಚು ಕ್ಲಿನಿಕ್‌ಗಳಲ್ಲಿ ಶೇ.80ರಷ್ಟು ವೈದ್ಯರಿಲ್ಲ ಎಂಬ ನೆಪದಿಂದ ಬಾಗಿಲು ಮುಚ್ಚಿವೆ.
ಚಿಕಿತ್ಸೆ ನೀಡದ ಆರೋಪ: ತಾಲೂಕು ಸರಕಾರಿ ಆಸ್ಪತ್ರೆಗೆ ಕೋಡಿಪಾಳ್ಯದ ರೋಗಿಯೊಬ್ಬರು, ನಾನು ದೆಹಲಿಯಿಂದ ಬಂದಿದ್ದೇನೆ. ಜ್ವರ ಬಂದಿದೆ ಚಿಕಿತ್ಸೆನೀಡುವಂತೆ ಮನವಿ ಮಾಡಿದರೂ ಪರೀಕ್ಷೆ ಮಾಡದೆ ಮಾತ್ರೆ ನೀಡಿ ಕಳುಹಿಸಿದ ನಂತರ ಎರಡು ತಾಲೂಕಿನಲ್ಲಿ ಓಡಾಡಿದ ಆ ವ್ಯಕ್ತಿಯಲ್ಲಿ
ಕೋವಿಡ್ -19 ಪಾಸಿಟಿವ್ ಬಂದಿದೆ.
ಚಿಕಿತ್ಸೆ ನೀಡದ ವೈದ್ಯರ ಪರವಾನಗಿ ರದ್ದು
ಖಾಸಗಿ ವೈದ್ಯಕೀಯ ಸೇವೆ ಆರಂಭಿಸದಿದ್ದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಮುಚ್ಚಿರುವ ಸ್ಕ್ಯಾನಿಂಗ್ ಲ್ಯಾಬೋರೇಟರಿಗಳ ವಿರುದ್ಧ ಪಿಸಿಪಿಎನ್‌ಡಿಟಿ ಕಾಯ್ದೆಯಡಿ ಪರವಾನಗಿ ರದ್ದುಗೊಳಿಸಲಾಗುವುದು. ರದ್ದು ಮಾಡಿದ ಪರವಾನಗಿ ಆದೇಶ ಹಿಂಪಡೆಯುವುದಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಎಚ್ಚರಿಸಿದ್ದಾರೆ.
ಪಿಪಿಇ ಕಿಟ್‌ಗೆ ಖಾಸಗಿ ವೈದ್ಯರ ಮನವಿ
ಕ್ಲಿನಿಕ್‌ಗಳಲ್ಲಿ ರೋಗಿಗಳು ಮುಂಜಾಗ್ರತೆಯಿಲ್ಲದೆ ಬರುವುದರಿಂದ ಕೋವಿಡ್ -19 ಸೋಂಕು ತಗುಲು ಆತಂಕವಿದೆ. ಹೀಗಾಗಿ ನಮಗೆ ಪಿಪಿಇ ಕಿಟ್ ಹಾಗೂ ಸುರಕ್ಷತೆ ಸೌಲಭ್ಯ ನೀಡಿದರೆ ಸೇವೆ ಮಾಡುತ್ತೇವೆ ಎಂದು ಕೆಲ ಖಾಸಗಿ ಚಿಕಿತ್ಸೆ ನೀಡದ ವೈದ್ಯರ ಪರವಾನಗಿ ರದು ಕ್ಲಿನಿಕ್ ವೈದ್ಯರು ಮನವಿ ಮಾಡಿದ್ದಾರೆ.
ಕ್ಲಿನಿಕ್‌ಗಳಲ್ಲಿ ರೋಗಿಗಳು ಮುಂಜಾಗ್ರತೆಯಿಲ್ಲದೆ ಬರುವುದರಿಂದ ಕೋವಿಡ್ -19 ಸೋಂಕು ತಗುಲು ಆತಂಕವಿದೆ. ಹೀಗಾಗಿ ನಮಗೆ ಪಿಪಿಇ ಕಿಟ್ ಹಾಗೂ ಸುರಕ್ಷತೆ ಸೌಲಭ್ಯ ನೀಡಿದರೆ ಸೇವೆ ಮಾಡುತ್ತೇವೆ ಎಂದು ಕೆಲ ಖಾಸಗಿ ಚಿಕಿತ್ಸೆ ನೀಡದ ವೈದ್ಯರ ಪರವಾನಗಿ ರದು ಕ್ಲಿನಿಕ್ ವೈದ್ಯರು ಮನವಿ ಮಾಡಿದ್ದಾರೆ
●ಕೊಟ್ರೇಶ್.ಆರ್
ಟಾಪ್ ನ್ಯೂಸ್
![Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು](https://www.udayavani.com/wp-content/uploads/2024/12/mumbai4-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು](https://www.udayavani.com/wp-content/uploads/2024/12/mumbai4-150x84.jpg)
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
![Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ](https://www.udayavani.com/wp-content/uploads/2024/12/chik-150x87.jpg)
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
![9](https://www.udayavani.com/wp-content/uploads/2024/12/9-26-150x80.jpg)
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
![8](https://www.udayavani.com/wp-content/uploads/2024/12/8-26-150x80.jpg)
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
![0055](https://www.udayavani.com/wp-content/uploads/2024/12/0055-150x90.jpg)
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.