ರಂಗ ಚಟುವಟಿಕೆ ಗ್ರಾಮೀಣ ಭಾಗಕ್ಕೂ ವಿಸ್ತರಿಸಲಿ


Team Udayavani, Apr 9, 2022, 2:36 PM IST

ರಂಗ ಚಟುವಟಿಕೆ ಗ್ರಾಮೀಣ ಭಾಗಕ್ಕೂ ವಿಸ್ತರಿಸಲಿ

ದೊಡ್ಡಬಳ್ಳಾಪುರ: ರಂಗ ಚಟುವಟಿಕೆಗಳು ಒಂದು ಪ್ರದೇಶಕ್ಕೆ ಸೀಮಿತವಾಗದೇ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸ ಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳು ಭಾವೈಕ್ಯತೆಗೆ ನಾಂದಿಯಾಗಬೇಕಿದ್ದು,ಕಲಾವಿದರಲ್ಲಿ ಪರಸ್ಪರ ಸೌಹಾರ್ದತೆ ಬೆಸೆಯಬೇಕು ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ ಅಧ್ಯಕ್ಷ ಹುಲಿಕಲ್‌ ನಟರಾಜ್‌ ತಿಳಿಸಿದರು.

ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘದ ವತಿಯಿಂದ ನಡೆದ ನಾಟ್ಯರಾಣಿ ಶಾಂತಲಾ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಶಾಂತಲಾ ಉತ್ಸವ ಮೊದಲಾದ ಸಾಂಸ್ಕೃತಿಕ ಉತ್ಸವಗಳನ್ನು ಆಯೋಜಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿರಬೇಕು. ಕಲಾಭವನ ನವೀಕರಣಕ್ಕೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ತಾಲೂಕು ಕಲಾವಿದರ ಸಂಘದ ಗೌರವ ಅಧ್ಯಕ್ಷ ಎಸ್‌.ರಾಮಮೂರ್ತಿ ಮಾತನಾಡಿ, ನಾಟ್ಯರಾಣಿ ಶಾಂತಲೆ ಅಪ್ರ ತಿಮ ಭರತನಾಟ್ಯ ಕಲಾವಿದೆಯಾಗಿದ್ದರು. ಜೊತೆಗೆ ಶಿಲ್ಪಕಲೆ ಬಗ್ಗೆಯೂ ಅಪಾರ ಜ್ಞಾನ ಹೊಂದಿದ್ದರು. ಇಂತಹ ಕಲಾವಿ ದೆಯ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಅರ್ಥ ಪೂರ್ಣವಾಗಿದೆ.ದೊಡ್ಡಬಳ್ಳಾಪುರ- ಚಿಕ್ಕಬಳ್ಳಾಪುರ ಊರುಗಳಿಗೂ ಹೊಯ್ಸಳ ವಂಶದ ಪ್ರಭಾವವಿದ್ದು, ಇಲ್ಲಿನ ಕಲೆ ಪರಂ ಪರೆಗಳಿಗೆ ಸ್ಫೂರ್ತಿಯಾಗಿದೆ ಎಂದರು.

ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್‌.ರಾಮಾಂಜಿನಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಲಾವಿದರ ಸಂಘದ ಗೌ.ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ತಾಲೂಕು ಕಲಾವಿ ದರ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಚಂದ್ರಶೇಖರ್‌, ಉಪಾಧ್ಯಕ್ಷರಾದ ಕೆ.ನರಸಿಂಹಯ್ಯ, ಎಚ್‌.ಪ್ರಕಾಶ್‌ ರಾವ್‌, ಖಜಾಂಚಿ ಎಚ್‌.ಮುನಿಪಾಪಯ್ಯ, ಜಂಟಿ ಕಾರ್ಯದರ್ಶಿ ಟಿ.ಆರ್‌.ಮುದ್ದುಕೃಷ್ಣಪ್ಪ, ಸಹ ಕಾರ್ಯದರ್ಶಿ ನಾಗದೇನಹಳ್ಳಿ ಮಂಜುನಾಥ್‌, ಹಿರಿಯ ಕಲಾವಿದರಾದ ಎಂ.ವೆಂಕಟರಾಜು, ಮುನಿರಾಜು, ಎನ್‌ .ವೆಂಕಟೇಶ್‌, ನಾಟಕ ನಿರ್ದೇಶಕರಾದ ಟಿ.ವಿ.ಕೃಷ್ಣಪ್ಪ, ಬಸವರಾಜಯ್ಯ, ಆನಂದಮೂರ್ತಿ ಇತರರಿದ್ದರು. ಕಾರ್ಯಕ್ರಮದ ಅಂಗವಾಗಿ ತಾಲೂಕು ಕಲಾವಿದರಿಂದ ರಂಗಗೀತೆ, ಭಕ್ತಿಗೀತೆ ಗೀತಗಾಯನ ಮೊದಲಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಟಾಪ್ ನ್ಯೂಸ್

renukaacharya

BJP; ಹರಕುಬಾಯಿ ನಾಯಕರಿಂದಲೇ ಸೋಲು: ರೇಣುಕಾಚಾರ್ಯ ಆಕ್ರೋಶ

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

Exam 2

SSLC ಪರೀಕ್ಷೆ ನೋಂದಣಿ: ನ.30ರವರೆಗೆ ಅವಧಿ ವಿಸ್ತರಣೆ

R Ashok (2)

R. Ashok; ಪಾಪ, ನಿಖಿಲ್‌ ಅದೃಷ್ಟವೇ ಸರಿಯಿಲ್ಲ…

1-dkkk

HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್‌

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

renukaacharya

BJP; ಹರಕುಬಾಯಿ ನಾಯಕರಿಂದಲೇ ಸೋಲು: ರೇಣುಕಾಚಾರ್ಯ ಆಕ್ರೋಶ

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

Exam 2

SSLC ಪರೀಕ್ಷೆ ನೋಂದಣಿ: ನ.30ರವರೆಗೆ ಅವಧಿ ವಿಸ್ತರಣೆ

R Ashok (2)

R. Ashok; ಪಾಪ, ನಿಖಿಲ್‌ ಅದೃಷ್ಟವೇ ಸರಿಯಿಲ್ಲ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.