ಚಿತ್ರಮಂದಿರಗಳು ಬೆಸ್ಕಾಂ ಬಿಲ್ ಕಟ್ಟಲೂ ಪರದಾಟ
ವಾರಕ್ಕೆ ಸೀಮಿತವಾದ ಕನ್ನಡ ಚಿತ್ರಗಳ ಪ್ರದರ್ಶನ
Team Udayavani, Feb 14, 2021, 11:00 PM IST
ನೆಲಮಂಗಲ: ಕೋವಿಡ್ ನಿಂದ ಸ್ಥಗಿತವಾಗಿದ್ದ ಚಿತ್ರಮಂದಿರಗಳು ಹೊಸ ರೂಪದೊಂದಿಗೆ ಆರಂಭ ವಾದರೂ ಪ್ರೇಕ್ಷಕರ ಕೊರತೆಯಿಂದ ಕನ್ನಡ ಸಿನಿಮಾಗಳ ಪ್ರದರ್ಶನ ವಾರಕ್ಕೆ ಸೀಮಿತವಾಗುತ್ತಿವೆ.
ತಾಲೂಕಿನಲ್ಲಿ ರೂಪ ಹಾಗೂ ಶಾಂತಲಾ ಎಂಬ ಎರಡು ಚಿತ್ರ ಮಂದಿರಗಳಿವೆ. 2 ವರ್ಷಗಳ ಹಿಂದೆ ಮಾಲೀ ಕರ ಕಾನೂನು ಹೋರಾಟದಲ್ಲಿ ಶಾಂತಲಾ ಚಿತ್ರ ಮಂದಿರ ಸ್ಥಗಿತವಾಗಿತ್ತು. ಈಗ, ನ್ಯಾಯಾಲಯ ಕನ್ನಡ ಸಿನಿಮಾಗಳ ಬೆಂಬಲಕ್ಕಾಗಿ ತಮ್ಮ ವ್ಯಾಪ್ತಿಗೆ ತೆಗೆದು ಸಿನಿಮಾಗಳ ಪ್ರದರ್ಶ ನ ನಡೆಸಲಾಗುತ್ತಿದೆ. ಈಗ, ರೂಪ ಚಿತ್ರ ಮಂದಿರದಲ್ಲಿ ಮಾತ್ರ ಚಿತ್ರಗಳು ಪ್ರದರ್ಶನವಾಗುತ್ತಿವೆ.
ಕೊರೊನಾದಿಂದ 2020 ಮಾ.13ರಂದು ಚಲನ ಚಿತ್ರಗಳನ್ನು ಬಂದ್ ಮಾಡಲಾಯಿತು. ಆ ನಂತರ 2021ರ ಜ.14ರಂದು ರೂಪ ಚಿತ್ರ ಮಂದಿರವನ್ನು ಆರಂಭಿಸಲಾಗಿದೆ. ರೂಪ ಚಿತ್ರ ಮಂದಿರದಲ್ಲಿ 1003 ಸೀಟು , ಶಾಂತಲಾ ಚಿತ್ರ ಮಂದಿರದಲ್ಲಿ 738 ಸೀಟುಗಳಿದ್ದು ಪ್ರೇಕ್ಷ ಕರ ಕೊರತೆ ಎದುರಾಗಿದ್ದು ನಷ್ಟ ಅನುಭವಿ ಸುವಂತಾಗಿದೆ.
ಹೊಸ ರೂಪ: ತಾಲೂಕಿ ನಲ್ಲಿ 35ವರ್ಷಗಳಿಂದ ರೂಪ ಹಾಗೂ ಶಾಂತಲಾ ಚಿತ್ರ ಮಂದಿರಗಳಲ್ಲಿ ಸಿನಿಮಾಗಳು ನಡೆಯುತ್ತಿದ್ದು 2000ಕ್ಕೂ ಹೆಚ್ಚು ಕನ್ನಡ ಚಿತ್ರಗಳು ಪ್ರದರ್ಶನವಾಗಿವೆ. ಕೊರೊನಾ ಲಾಕ್ ಡೌನ್ ನಂತರ ರೂಪ ಚಿತ್ರ ಮಂದಿರದ ಸೀಟು, ಶೌಚಾಲಯ, ಕಟ್ಟಡಕ್ಕೆ ಬಣ್ಣ, ಸೌಂಡ್ ಸೇರಿ ವಿವಿಧ ಸೌಲ ಭ್ಯ ಕಲ್ಪಿಸುವ ಮೂಲಕ ಹೊಸ ರೂಪದಲ್ಲಿ ಆರಂಭವಾಗಿದೆ.
ರೂಪ ಚಿತ್ರ ಮಂದಿರದಲ್ಲಿ 8ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದು ಪ್ರೇಕ್ಷಕರ ಕೊರ ತೆಯಿಂದ ಶಾಂತಲಾ ಚಿತ್ರ ಮಂದಿರ ಆರಂಭ ವಾಗಿಲ್ಲ.
ಶತ ದಿನ ಕಾಣದ ಸಿನಿಮಾಗಳು :
ರೂಪ ಹಾಗೂ ಶಾಂತಲಾ ಚಿತ್ರ ಮಂದಿರಗಳಲ್ಲಿ ಈಗಾಗಲೇ 2ಸಾವಿರಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಯಾಗಿದ್ದು, ಕರುಳಿನ ಕೂಗು, ಅಣ್ಣ ತಂಗಿ, ತಾಯಿ ಇಲ್ಲದ ತಬ್ಬಲಿ, ಯಜಮಾನ, ಜೋಗಿ, ರಾಜಕುಮಾರ, ಹುಡುಗರು, ಗಜ, ಆಪ್ತರಕ್ಷಕ, ಗೂಗ್ಲಿ,ವಿಷ್ಣುವರ್ಧನ, ದಿ ವಿಲನ್ ಸೇರಿದಂತೆ ವಿವಿಧ ಕನ್ನಡ ಸಿನಿಮಾಗಳು ತಿಂಗಳು ಕಾಲ ಪ್ರದರ್ಶನ ಕಂಡರೆ ತಾಲೂಕಿನ ಇತಿಹಾಸದಲ್ಲಿಯೇ ಒಂದು ಸಿನಿಮಾ ಕೂಡ ಶತದಿನ ಕಂಡಿ ಲ್ಲದಿರುವುದು ದುರ್ದೈವದ ಸಂಗತಿ. ಕೊರೊನಾದಿಂದ ಸ್ಥಗಿತವಾ ಗಿದ್ದ ಚಿತ್ರಮಂದಿರದಲ್ಲಿ ಬೆಸ್ಕಾಂ ಬಿಲ್ ಕಟ್ಟಲು ಸಮಸ್ಯೆ ಎದುರಾಗಿದ್ದು ಪ್ರೇಕ್ಷಕರ ಕೊರತೆಯಿಂದ ಮುಂದಿನ ದಿನಗಳಲ್ಲಿಯೂ ಬೆಸ್ಕಾಂ ಹಾಗೂ ಕಂದಾಯ ಕಟ್ಟಲು ಸಮಸ್ಯೆಯಾಗುತ್ತಿದ್ದು ಸರ್ಕಾರ ಸಹಾಯಕ್ಕೆ ಮುಂದಾಗಬೇಕಾಗಿದೆ.
ಈಗ 4ರಲ್ಲಿ ಮಾತ್ರ ಪ್ರದರ್ಶನ
2 ದಶಕಗಳ ಹಿಂದೆ ದೊಡ್ಡಬಳ್ಳಾಪುರದಲ್ಲಿ 6 ಚಿತ್ರಮಂದಿರಗಳಿದ್ದವು. ಗ್ರಾಮಾಂತರ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಚಿತ್ರಮಂದಿರಗಳಿದ್ದ ನಗರವಾಗಿತ್ತು. 2 ದಶಕದ ಹಿಂದೆ ನಗರದ ಕರೇನಹಳ್ಳಿಯ ರಾಜೇಶ್ವರಿ ಮಿನಿ ಚಿತ್ರಮಂದಿರ ಮುಚ್ಚಲಾಯಿತು. ನಗರದಲ್ಲಿ 60ರ ದಶಕದಲ್ಲಿ ಮೊದಲು ಆರಂಭಗೊಂಡ ಅತಿ ಹಳೆಯ ಚಿತ್ರಮಂದಿರವಾಗಿದ್ದ ಶ್ರೀ ಲಕ್ಷ್ಮೀ ಚಿತ್ರಮಂದಿರ 1990ರಲ್ಲಿ ಮತ್ತೆ ನವೀಕರಣಗೊಂಡು ಕಾರ್ಯ
ನಿರ್ವಹಿಸುತ್ತಿತ್ತು. ಈಗ್ಗೆ 2 ವರ್ಷಗಳ ಹಿಂದೆ ಈ ಚಿತ್ರಮಂದಿರದಲ್ಲಿಯೂ ಸಂಪೂರ್ಣ ಪ್ರದರ್ಶನ ನಿಲ್ಲಿಸಲಾಗಿದೆ.
ಪ್ರಸ್ತುತ ನಗರದಲ್ಲಿ 4 ಚಿತ್ರಮಂದಿರಗಳು ಮಾತ್ರ ಸಕ್ರಿಯವಾಗಿದ್ದು, ಇದರಲ್ಲಿ ಪ್ರಸನ್ನ ಚಿತ್ರಮಂದಿರದ ಮಾಲೀಕತ್ವ ಬದಲಾಗಿ ಈಗ ವೈಭವ್ ಹೆಸರಿನಲ್ಲಿ ಅತ್ಯಾಧುನೀಕರಣಗೊಂಡಿದೆ. ಉಳಿದಂತೆ ನಗರದ ಹಳೆಯ ಚಿತ್ರಮಂದಿರಗಳಾದ ಸೌಂದರ್ಯ ಮಹಲ್(1964) ಮತ್ತು ರಾಜ್‌ಕಮಲ್(1968)ನಂತರ 1990ರಲ್ಲಿ ಆರಂಭಗೊಂಡ ಸೊಬಗು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಗಳಾಗುತ್ತಿವೆ. ರಾಜ್ ಕಮಲ್ ಚಿತ್ರಮಂದಿರ ಕೊರೊನಾ ನಂತರ ಇದೇ ಫೆ.12ರಿಂದ ಮಂಗಳವಾರ ರಜಾದಿನ ಚಲನಚಿತ್ರದೊಂದಿಗೆ ಆರಂಭವಾಗುತ್ತಿದೆ.
ದೇವನಹಳ್ಳಿಯಲ್ಲಿ ಚಿತ್ರಮಂದಿರಗಳೇ ಇಲ್ಲ
ದೇವನಹಳ್ಳಿ: ಸಿನಿಪ್ರಿಯರಿಗೆ ಮನರಂಜನೆ ಉಣಿಸಿಬಡಿಸುತ್ತಿದ್ದ ಚಿತ್ರಮಂದಿರಗಳು ಪ್ರೇಕ್ಷಕರಿಲ್ಲದೆ, ಜಿಲ್ಲೆಯಲ್ಲಿ ಅವನತಿಯ ಹಾದಿ ಸಾಗುತ್ತಿದೆ.
ಹಲವು ದಶಕಗಳು ಉರುಳಿದರೂ ಚಿತ್ರ ಮಂದಿರಗಳು ತನ್ನದೇ ಆದ ಚಲನ ಚಿತ್ರಗಳ ಮೂಲಕ ಪ್ರೇಕ್ಷಕರ ಗಮನಸೆಳೆಯುತ್ತಿದ್ದವು. ಇತ್ತಿಚಿನ ದಿನಗಳಲ್ಲಿ ಮಾಧ್ಯಮ, ಮೊಬೈಲ್ ಹಾಗೂ ಟಿವಿ ದೃಶ್ಯಮಾಧ್ಯಮಗಳು, ವೆಬ್ ಚಾನೆಲ್‌ಗಳು ಸೇರಿದಂತೆ ಹಲವಾರು ರೀತಿಯಲ್ಲಿ 15-20 ದಿನ ಚಿತ್ರ ಬಿಡುಗಡೆಯಾದ ನಂತರ ಟಿವಿ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವುದರಿಂದ ಚಿತ್ರ ಮಂದಿರದ ಕಡೆ ಪ್ರೇಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.
ಹೈಟೆಕ್ ಮಾಲ್‌ಗಳು ಪ್ರಾರಂಭವಾಗಿರುವುದರಿಂದ ಶ್ರೀಮಂತರು ಚಿತ್ರಮಂದಿರಗಳ ಕಡೆ ಬರುವುದಿಲ್ಲ. ಮಧ್ಯಮ ಮತ್ತು ಬಡ ವರ್ಗದ ಜನ ಚಿತ್ರಮಂದಿರಗಳಿಗೆ ಹೋಗುತ್ತಾರೆ. ಯೂಟೂಬ್ ಚಾನೆಲ್‌ಗಳಲ್ಲಿ ಸಿನಿಮಾ ಟ್ರೇಲರ್ ಸಾಂಗ್ ಇತರೆ ಸೀನ್‌ಗಳನ್ನು ವೀಕ್ಷಣೆ ಮಾಡುತ್ತಿರುವುದರಿಂದ ಇಡೀ ಚಲನಚಿತ್ರದ ಕಥೆ, ನಿರ್ದೇಶನ ಹೀಗೆ ಇರುತ್ತೇ ಎಂಬುವುದನ್ನು ಊಹಿಸಿಕೊಂಡು ಚಿತ್ರಮಂದಿರಗಳತ್ತ ವಿಕ್ಷಣೆಗೆ ಪ್ರೇಕ್ಷಕರು ತಿರುಗಿಯೂ ನೋಡುತ್ತಿಲ್ಲ.
ದೇವನಹಳ್ಳಿಯಲ್ಲಿ ಚಿತ್ರಮಂದಿರಗಳೇ ಇಲ್ಲ: ದೇವನಹಳ್ಳಿ ನಗರದಲ್ಲಿ ವೆಂಕಟೇಶ್ವರ ಮತ್ತು ವಿನಾಯಕ ಚಿತ್ರಮಂದಿರಗಳು ಇದ್ದವು. ಆದರೆ, ವೆಂಕಟೇಶ್ವರ ಚಿತ್ರ ಮಂದಿರದ ಜಾಗ ನ್ಯಾಯಾಲಯದಲ್ಲಿ ಪ್ರಕರಣ ಇದ್ದು,ಅದು ಬಗೆಹರಿದಿದೆ. ಇಬ್ಬರು ಒಡಂಬಡಿಕೆಮಾಡಿಕೊಂಡಿದ್ದರು. ಆದರೆ, ಇಬ್ಬರಲ್ಲೂ ಒಡಂಬಡಿಕೆ ಇತ್ಯರ್ಥವಾಗಿಲ್ಲ. ವಿನಾಯಕ ಚಿತ್ರಮಂದಿರದ ನಿರ್ವಹಣೆ ಕೊರತೆಯಿಂದಾಗಿ ಶುದ್ಧಕುಡಿಯುವ ನೀರಿನ ಘಟಕ ಮಾಡಿಕೊಳ್ಳಲಾಗಿತ್ತು. ಇವೆರಡೂ ಚಿತ್ರಮಂದಿರಗಳು ಮುಚ್ಚಿದ ನಂತರ ಚಿತ್ರಮಂದಿರಗಳೇ ಇಲ್ಲದ ಏಕೈಕ ನಗರ ದೇವನಹಳ್ಳಿಯಾಗಿದೆ.
ದೇವನಹಳ್ಳಿ ಮತ್ತು ನೆಲಮಂಗಲದಲ್ಲಿ ತಲಾ 2 ಚಿತ್ರಮಂದಿರಗಳು ಮುಚ್ಚಿವೆ. ದೇವನಹಳ್ಳಿಯ ನಾಗರೀಕರು ಹಾಗೂ ಸಿನಿ ಪ್ರಿಯರು ವಿಜಯಪುರ, ಯಲಹಂಕ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಹಾಗೂ ಬೆಂಗಳೂರು ಸೇರಿದಂತೆ ಮಾಲ್‌ಗಳಲ್ಲಿ ಸಿನಿಮಾ ನೋಡುವಂತೆ ಆಗಿದೆ. ಕೊರೊನಾ ವೈರಸ್‌ನಿಂದ ಕಳೆದ 9 ತಿಂಗಳು ಚಿತ್ರಮಂದಿರಗಳು ಮುಚ್ಚಿದ್ದವು. ಲಕ್ಷಾಂತರ, ಕೋಟ್ಯಂತರ ವ್ಯವಹಾರ ನಡೆಸುತ್ತಿದ್ದ ಚಿತ್ರಮಂದಿರದ ಮಾಲೀಕರು ತಮ್ಮ ನೌಕರರಿಗೆ ಸಂಬಳ ನೀಡಲು ಕಷ್ಟವಾಗುತ್ತಿದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು. ಚಿತ್ರಮಂದಿರಗಳು ಪ್ರಾರಂಭವಾಗಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರಲು ಮುಂದಾಗುತ್ತಿಲ್ಲ
ಬಾಗಿಲು ಮುಚ್ಚುವ ಆತಂಕ : ಪ್ರೇಕ್ಷಕರ ಸಂಖ್ಯೆ ಕಡಿಮೆಯಿದ್ದರೂ ನ್ಯಾಯಾಲಯದಿಂದ ಚಿತ್ರ ಮಂದಿರ ನಡೆಸಲಾಗುತ್ತಿದೆ. ಆದರೆ, ಕಾನೂನು ಹೋರಾಟ ಅಂತ್ಯವಾಗಿ ಮಾಲೀ ಕರಿಗೆ ಚಿತ್ರ ಮಂದಿರ ವರ್ಗಾವಣೆ ಯಾದರೆ ಪ್ರೇಕ್ಷ ಕರಿಲ್ಲದೆ ಚಿತ್ರ ಮಂದಿರ ಬಂದ್ ಮಾಡುವ ಆತಂಕ ಎದುರಾಗಿದೆ. ಈಗಲಾದರೂ ಪ್ರೇಕ್ಷಕರು ಕನ್ನಡ ಸಿನಿ ಮಾ ಗಳನ್ನು ನೋಡಲು ಮುಂದಾಗದಿದ್ದರೆ ಚಿತ್ರ ಮಂದಿರಗಳು ಬಾಗಿಲು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಕೇರಳ, ತಮಿಳುನಾಡಿನ ವ್ಯವಸ್ಥೆ ಜಾರಿಗೊಳಿಸಿ
ದೊಡ್ಡಬಳ್ಳಾಪುರ: ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ನಗರದ ಚಿತ್ರಮಂದಿರಗಳು ಪುನಾರಂಭ ವಾದರೂ ಪ್ರೇಕ್ಷಕರ ಕೊರತೆ ಎದುರಿ ಸುತ್ತಾ ಇನ್ನೂ ಚೇತರಿಸಿಕೊಳ್ಳುತ್ತಿವೆ.
ಅ.15ರಿಂದ ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ್ದರೂ ಒಂದು ತಿಂಗಳ ನಂತರ ನಗರದಲ್ಲಿ ಚಿತ್ರಮಂದಿರಗಳು ಆರಂಭವಾಗಿದ್ದು, ಈಗ ಶೇ.100 ರಷ್ಟು ಪ್ರೇಕ್ಷಕರಿಗೆ ಅವಕಾಶವಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ.
ಹೊಸ ತಂತ್ರಜ್ಞಾನದ ಅಳವಡಿಕೆ: ಸೌಂದರ್ಯ ಮಹಲ್ ಹಾಗೂ ವೈಭವ್ ಚಿತ್ರಮಂದಿರಗಳಲ್ಲಿ ಶುಚಿತ್ವ ಹಾಗೂ ಮೂಲ ಸೌಕರ್ಯಗಳಿಗೆ ಒತ್ತು ನೀಡುವುದರೊಂದಿಗೆ ಇಂದಿನ ಆಧುನಿಕತೆಗೆ ತಕ್ಕಂತೆ ಡಿಜಿಟಲ್ ತಂತ್ರ ಜ್ಞಾನ ವ್ಯವಸ್ಥೆ, 4ಕೆ ಪ್ರೊಜೆಕ್ಟರ್, ಡಾಲ್ಬಿ ಆಟ್‌ಮೋಸ್ ಸೌಂಡ್ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿವೆ. ಆದರೂ ಪ್ರೇಕ್ಷಕರ ಕೊರತೆಯಿದೆ.
ಶೇಕಡವಾರು ಒಪ್ಪಂದ: ಚಿತ್ರಮಂದಿರದ ದುಬಾರಿ ಬಾಡಿಗೆಗಳು ಸಣ್ಣ ನಿರ್ಮಾಪಕರಿಗೆ ಹೊರೆಯಾಗಲಿದ್ದು, ನಿರ್ಮಾಪಕ ಅಥವಾ ಹಂಚಿಕೆದಾ ರರು ಚಿತ್ರಮಂದಿರದ ಮಾಲೀಕರೊಂದಿಗೆ ವಾರದಲ್ಲಿ ಚಿತ್ರದ ಗಳಿಕೆಆಧಾರದ ಮೇಲೆ ಶೇಕಡವಾರು ಹಂಚಿಕೊಂಡರೆ ಇಬ್ಬರಿಗೂ ಅನುಕೂಲ. ಕರ್ನಾಟಕ ಚಿತ್ರ ಪ್ರದರ್ಶಕರ ಮಂಡಳಿಯಿಂದ ಶೇಕಡಾವಾರು ಹಂಚಿಕೆ ಪಟ್ಟಿ ನೀಡಿದ್ದು, ಅನುಸರಿಸಲು ಮನವಿ ಮಾಡಲಾಗಿದೆ. ನೆರೆಯ ಆಂಧ್ರ, ಕೇರಳ, ತಮಿಳುನಾಡಿ ನಲ್ಲಿ ಇದೇ ವ್ಯವಸ್ಥೆಯಿದೆ. ಸ್ಟಾರ್ ನಟರ ಚಿತ್ರ ಬಿಡುಗಡೆಯಾಗಿ ಪ್ರೇಕಕರು ಚಿತ್ರಮಂದಿರಕ್ಕೆ ಬರುವಂತಾದರೆ ಚಿತ್ರಮಂದಿರಗಳ ಮೊದಲಿನ ಸ್ಥಿತಿಗೆಬರಲಿವೆ ಎನ್ನುತ್ತಾರೆ ಚಿತ್ರಮಂದಿರದ ಮಾಲೀಕರು.
ಭರ್ತಿಯಾಗದ ಚಿತ್ರಮಂದಿರಗಳು :
ವಿಜಯಪುರ: ವರ್ಷದ ಹಿಂದಿನ ಅಂದರೆ ಕೋವಿಡ್, ಲಾಕ್‌ಡೌನ್‌ಗೂ ಮೊದಲು ಚಿತ್ರಮಂದಿರಗಳ ಪರಿಸ್ಥಿತಿ ಕೊಂಚಮಟ್ಟಿಗೆ ಉತ್ತಮ ಎಂದೇ ಹೇಳಬಹುದು. ಆದರೆ, ನಿಜಕ್ಕೂ ಒಳ್ಳೆಯ ಚಿತ್ರಗಳಿಗೇ ಕೊರತೆಯೇ. ಇನ್ನು ಲಾಕ್ ಡೌನ್ ತೆರವಾದ ತಕ್ಷಣದಲ್ಲೂ ಚಿತ್ರಮಂದಿರಗಳಿಗೆ ಜನ ಹೋಗಲು ಹೆದರುತ್ತಿದ್ದಾರೆ.
ದಶಕಗಳ ಹಿಂದೆ ಒಂದೇ ಚಿತ್ರವನ್ನು ಚಿತ್ರಮಂದಿರಕ್ಕೇ ಹೋಗಿ 3-4 ಸಲ ನೋಡಿದ ಅನುಭವವನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದರು. ಆ ಚಿತ್ರವನ್ನು ಮನಸಾರೆ ನೋಡಿ ದಣಿಯುವಷ್ಟರಲ್ಲಿ ನೆಚ್ಚಿನ ನಟನ ಮತ್ತೂಂದು ಚಿತ್ರ ತೆರೆಗೆ ಬರುತ್ತಿತ್ತು. ಅದೇ ಕಾಲ ಕ್ರಮೇಣ ವರ್ಷಕ್ಕೆ 2ಚಿತ್ರಗಳನ್ನು ನೀಡುತ್ತಿದ್ದ ನಾಯಕರು, 2-3 ವರ್ಷಕ್ಕೆ ಒಂದು ಚಿತ್ರ ಕೊಡಲು ಆರಂಭಿಸಿದ್ದೇ ಜನ ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡುವ ಆಸಕ್ತಿ ಕಳೆದು ಕೊಂಡರು. ಅದಲ್ಲದೆ “ಒಳ್ಳೆಯ ಸಿನಿಮಾ’ ಎಂದು ಎನಿಸಿಕೊಂಡು ಪ್ರೇಕ್ಷಕರ ಗಮನ ಸೆಳೆಯುವ ಚಿತ್ರಗಳೇ ಇಲ್ಲವಾಯ್ತು.
ಹೊಸ ಚಿತ್ರಗಳು ಬಿಡುಗಡೆಯಾದ ತಿಂಗಳಿಗೇ ಟಿವಿಯ ಯಾವುದೋ ಒಂದು ಚಾನೆಲ್ ನಲ್ಲಿ ಹಾಕುತ್ತಾರೆ. ಮನೆಯÇÉೇ ನೋಡಿದರಾಯ್ತು. ಈಗಿನ ಸಿನಿಮಾಗಳೆಲ್ಲಾ ಸಮಯ, ಹಣ ವ್ಯರ್ಥ ಮಾಡಿ ನೋಡುವಷ್ಟು ಮಟ್ಟಿಗೆ ಏನು ಇರುವುದಿಲ್ಲ ಎಂಬ ವಿಚಾರ ಜಾಣ ಪ್ರೇಕ್ಷಕರ ಲೆಕ್ಕಾಚಾರ ಸಿನಿಮಾ ನೋಡುಗರ ಸಂಖ್ಯೆ ಇಳಿಮುಖ ವಾಗುತ್ತಿದೆ. ಕೊರೊನಾ ಸಂದರ್ಭದಲ್ಲಿ ಸಿಬ್ಬಂದಿಗೆ ಸಂಬಳ ಕೊಡಲು ಸಹ ಆಗಿರಲಿಲ್ಲ. ಸದ್ಯದ ಕಲೆಕ್ಷನ್ ನೋಡಿದರೆ, ಮಾಲಿಕರು ಹಾಗೂ ಬಾಡಿಗೆದಾರರಿಗೆ ಹೊರೆಯಾಗುತ್ತಿದೆ. ಎಂ.ಸತೀಶ್‌ಕುಮಾರ್, ಗೌರಿಶಂಕರ್ (ಚಿತ್ರಮಂದಿರದ ಮಾಲಿಕರು, ವಿಜಯಪುರ)
ರೂಪ ಚಿತ್ರ ಮಂದಿರವನ್ನು ಆರಂಭ ಮಾಡಲಾಗಿದ್ದು ಕನ್ನಡ ಸಿನಿಮಾಗಳನ್ನು 4ಆಟಗಳಲ್ಲಿ ಪ್ರದರ್ಶನ ಕಾಣುತ್ತಿವೆ. ಪ್ರೇಕ್ಷಕರ ಕೊರತೆ ಎದುರಾಗಿದ್ದು ಚಿತ್ರ ಮಂದಿರ ನಿರ್ವಹಣೆಗೂ ಸಮಸ್ಯೆ ಎದುರಾಗಿದೆ. ನಾರಾ ಯಣ್ ( ಸಿಬ್ಬಂದಿ )
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.