Theft: ಯಂಟಗನಹಳ್ಳಿ ಗ್ರಾಪಂ ಕಚೇರಿಯಲ್ಲಿ ಕಳ್ಳತನ
Team Udayavani, Nov 20, 2023, 2:56 PM IST
ನೆಲಮಂಗಲ: ಬೆಂ,ಮಂಗಳೂರಯ ಹೆದ್ದಾರಿ 75ಕ್ಕೆ ಹೊಂದಿಕೊಂಡಂತ್ತಿರುವ ಯಂಟಗನಹಳ್ಳಿ ಗ್ರಾಪಂ ಕಚೇರಿಯ ಬೀಗ ಹೊಡೆದ ಖದೀಮರು ಕೆಲ ದಾಖಲಾತಿಗಳನ್ನು ಕಳ್ಳತನ ಮಾಡಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಯಂಟಗನಹಳ್ಳಿ ಗ್ರಾಪಂ ಕಚೇರಿಗೆ ಅಧಿಕಾರಿಗಳು ಶನಿವಾರ ಸಂಜೆ ಕಚೇರಿ ಸಮಯ ಮುಗಿದ ಬಳಿಕ ಬೀಗ ಹಾಕಿ ಮನೆಗೆ ಹೋಗಿದ್ದರು. ಭಾನುವಾರ ಬೆಳಗ್ಗೆ ರಾಷ್ಟ್ರಧ್ವಜ ಹಾರಿಸಲು ಸಿಬ್ಬಂದಿ ಕಚೇರಿಗೆ ಬಂದಾಗ ಬೀಗ ಹೊಡೆದು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ತಕ್ಷಣ ಅಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಬೆರಳಚ್ಚು ತಜ್ಞರ ಪರಿಶೀಲನೆ ನಡೆಸಿ ಖದೀಮರು ಬಿಟ್ಟು ಹೋಗಿರುವ ಕೆಲ ಸಾಕ್ಷಿಗಳನ್ನು ಕಲೆಹಾಕಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ಜಗದೀಶ್, ಇನ್‌ಸ್ಪೆಕ್ಟರ್ ರಾಜೀವ್ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆಹಾಕಿದರು.
ಪೈಲ್ ಚೆಲ್ಲಾಪಿಲ್ಲಿ: ಯಂಟಗನಹಳ್ಳಿ ಗ್ರಾಪಂ ಕಚೇರಿಗೆ ಖದೀಮರು ಹಣಕ್ಕಾಗಿ ಬಂದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಕೆಲ ಪೈಲ್‌ಗಳನ್ನು ಹುಡುಕಿರುವುದು ಕಂಡುಬಂದಿದೆ, ಕಚೇರಿಯಲ್ಲಿ ಪೈಲ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ನರೇಗಾ ಹಾಗೂ ಕೆಲವು ಆಸ್ತೀ ಖಾತೆಗೆ ಸೇರಿದ ಪೈಲ್‌ಗಳನ್ನು ತೆಗೆದುಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಪಂಚಾಯತಿ ಪಿಡಿಒ , ಕಾರ್ಯದರ್ಶಿ ಸೇರಿದಂತೆ ಅನೇಕ ಅಧಿಕಾರಿಗಳ ಮೇಲೆ ಮೇಲಾಧಿಕಾರಿಗಳಿಂದ ಇಲಾಖೆ ತನಿಖೆ ನಡೆಯುತ್ತಿದ್ದು ಈ ಕಳ್ಳತನ ಅನೇಕ ಸಾಕ್ಷಿಗಳ ನಾಶಕ್ಕೆ ಪ್ರಯತ್ನಮಾಡಿದ್ದಾರೆ ಎಂಬ ಅನುಮಾನಗಳಿಗೆ ಘಟನಾಸ್ಥಳದಲ್ಲಿ ಮೂಡಿವೆ.
ಬಲ್ಲವರಿಂದಲೇ ಕಳವು: ಕಚೇರಿಯಲ್ಲಿ ಪೈಲ್‌ಗಳ ಮಾಹಿತಿ, ಸಿಸಿಟಿವಿಯ ಮಾಹಿತಿ, ಕಚೇರಿಯ ಬೀರು, ಡ್ರಾಯರ್‌ಗಳ ಕೀ ಇರುವ ಮಾಹಿತಿ ಬಲ್ಲವರೇ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದ್ದು ಸಿಸಿಟಿವಿಯ ಡಿವಿಆರ್ ಸಹ ತೆಗೆದುಕೊಂಡು ಹೋಗಿದ್ದಾರೆ. ಈಗಾಗಲೆ ಹಲವು ಭಾರಿ ಪಂಚಾಯತಿ ಕಚೇರಿಗೆ ಭೇಟಿ ನೀಡಿ ಕಚೇರಿಯ ಸಂಪೂರ್ಣ ಮಾಹಿತಿ ಹೊಂದಿರುವ ತಂಡದ ಕೈಚಳಕ ಇದಾಗಿದೆ, ಅದರಲ್ಲೂ ಕಾರ್ಯದರ್ಶಿ ಬೀರು ಮುಟ್ಟ ದಿರುವ ಖದೀಮರ ಕೈಚಳಕ ಅನುಮಾನ ಮೂಡಿಸಿದೆ.
ಸದಾ ಹೆದ್ದಾರಿಯಲ್ಲಿ ನೂರಾರು ವಾಹನಗಳು ಓಡಾಡುತಿದ್ದರೂ ಹೆದರದೆ ಕಳ್ಳತನ ಮಾಡಲು ಮುಂದಾಗಿರುವ ಕಳ್ಳರು ಘಟನಾಸ್ಥಳಕ್ಕೆ ಹಾಗೂ ಕಚೇರಿಗೆ ಹೊಸಬರಲ್ಲ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ, ಒಟ್ಟಾರೆ ಪೊಲೀಸರ ತನಿಖೆಯಿಂದ ಮಾತ್ರ ನಿಜವಾದ ಖದೀಮರು ಕೈಚಳಕದ ಮಾಹಿತಿ ತಿಳಿಯಬೇಕಾಗಿದೆ.
ಕಾರ್ಯದರ್ಶಿ ಬೀರು ಸೇಫ್: ಅನೇಕ ತನಿಖೆಗಳನ್ನು ಎದುರಿಸುತ್ತಿರುವ ಕಾರ್ಯದರ್ಶಿ ಮೂರು ದಿನಗಳಿಂದ ರಜೆಯಲ್ಲಿದ್ದು ಗ್ರಾಮಪಂಚಾಯಿತಿ ಕಚೇರಿಯಲ್ಲಿರುವ ಕಾರ್ಯದರ್ಶಿಯ ಬೀರು ಬಿಟ್ಟು ಉಳಿದ ಎಲ್ಲಾ ಬೀರುಗಳ ಹುಡುಕಾಟ ನಡೆಸಿದ್ದಾರೆ. ಗ್ರಾಮ ಪಂಚಾಯಿತಿ ಕಚೇರಿ ಕಳ್ಳತನವನ್ನು ಕೆಲ ಸಿಬ್ಬಂದಿಗಳ ಸಹಕಾರದಿಂದ ಮಾಡಿದ್ದಾರೆ ಸಿಬ್ಬಂಧಿಗಳ ಸೂಕ್ತ ತನಿಖೆಯಾಗಬೇಕು ಎಂದು ಸ್ಥಳೀಯ ಮುಖಂಡರು ಒತ್ತಾಯಿಸಿದ್ದಾರೆ.
ಪೊಲೀಸರ ಮೇಲೆ ಭರವಸೆ : ಪಂಚಾಯಿತಿ ಕಚೇರಿಯಲ್ಲಿ ಹಣವಿರುವುದಿಲ್ಲ,ಚಿನ್ನಬೆಳ್ಳಿ ಮೊದಲೇ ಇರುವುದಿಲ್ಲ ದಾಖಲಾತಿಗಳಿರುವ ಪೈಲ್ ನಾಶಕ್ಕೆ ಯಾರೋ ಮೊದಲೆ ಯೋಜನೆ ರೂಪಿಸಿ ಕಳ್ಳತನ ಮಾಡಿರುವಂತೆ ಕಂಡುಬರುತ್ತಿದ್ದು ನಮ್ಮ ಪೊಲೀಸರ ಮೇಲೆ ಸಂಪೂರ್ಣ ನಂಬಿಕೆಯಿದೆ, ಶೀರ್ಘದಲ್ಲಿ ಖದೀಮರು ಪತ್ತೆಯಾಗುವ ವಿಶ್ವಾಸವಿದೆ ಎಂದು ಗ್ರಾಮಪಂಚಾಯಿತಿ ಸದಸ್ಯ ಮಹದೇವಪುರ ಚಿಕ್ಕಣ್ಣ ತಿಳಿಸಿದರು.
ಗ್ರಾಮಪಂಚಾಯಿತಿಗೆ ಕಳ್ಳರು ಬಂದಿರುವುದು ಅಚ್ಚರಿಯ ಸಂಗತಿ, ಪೊಲೀಸರು ಮಾಹಿತಿ ಪಡೆದು ಪರಿಶೀಲನೆ ಮಾಡಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಂಡು ಖದೀಮರನ್ನು ಶೀಘ್ರದಲ್ಲಿ ಸೆರೆಹಿಡಿಯಬೇಕು ಎಂದು ಒತ್ತಾಯಿಸುತ್ತೇನೆ, ತಪ್ಪಿತಸ್ಥರಿಗೆ ಸೂಖ್ತ ಶಿಕ್ಷೆಯಾಗಬೇಕು. -ರಾಹುಲ್‌ಗೌಡ, ಯಂಟಗನಹಳ್ಳಿ ಗ್ರಾಪಂ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.