ಹಣವಿಲ್ಲ ಎಂದವರು ಮದ್ಯಕ್ಕೆ ಗರಿಗರಿ ನೋಟು ಎಣಿಸಿದರು
Team Udayavani, May 7, 2020, 4:43 PM IST
ಸಾಂದರ್ಭಿಕ ಚಿತ್ರ
ನೆಲಮಂಗಲ: ಲಾಕ್‌ಡೌನ್‌ನಿಂದಾಗಿ ಸಾವಿರಾರು ಜನರು ಉದ್ಯೋಗ, ಅನ್ನ, ಹಣವಿಲ್ಲ ಎಂದು ಪರದಾಡುತ್ತಿದ್ದರು. ಆದರೆ ಸರ್ಕಾರ ಮದ್ಯ ಮಾರಾಟಕ್ಕೆ ಆದೇಶ ನೀಡುತ್ತಿದ್ದಂತೆ 500 ಹಾಗೂ 2 ಸಾವಿರದ ಗರಿಗರಿ ನೋಟು ಹಿಡಿದು ಸಾಲಿನಲ್ಲಿ ನಿಂತಿದ್ದು, ನಿಜಬಣ್ಣ ಬಯಲು ಮಾಡಿದೆ. ಎರಡು ದಿನಗಳಿಂದ ಮದ್ಯದಂಗಡಿ ತೆರೆಯುತಿದ್ದಂತೆ ಸಾಮಾಜಿಕ ಅಂತರ ಮರೆತು ಖರೀದಿಗೆ ಮುಗಿಬಿದ್ದ ಮದ್ಯ ಪ್ರಿಯರು, ಐದಾರು ದಿನಕ್ಕೆ ಬೇಕಾಗುವಷ್ಟು ಮದ್ಯ ಖರೀದಿಸಿದ್ದಾರೆ. ಮದ್ಯ ಖರೀದಿಗೆ ನಿಂತವರು, ತಾಲೂಕು ಆಡಳಿತ ಹಾಗೂ ದಾನಿಗಳಿಂದ ಊಟವಿಲ್ಲ ಎಂದು ಆಹಾರ ಸಾಮಾಗ್ರಿ ಬೇಡಿ ಪಡೆದಿದ್ದರು.
ಮಹಿಳೆಯರಿಗೆ ಆತಂಕ: ನಗರ ಹಾಗೂ ಗ್ರಾಮೀಣ ಪ್ರದೇಶದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಉದ್ಯೋಗವಿಲ್ಲದ ಕಾರಣ ಮದ್ಯಕ್ಕಾಗಿ ಹಣವಿಲ್ಲದೆ ಮನೆ ಸಾಮಾಗ್ರಿಗಳು, ಚಿನ್ನದ ಒಡವೆ ಮಾರಾಟದ ಆತಂಕ ಮಹಿಳೆಯರಲ್ಲಿ ಹೆಚ್ಚಾಗಿದೆ. ಪೂರಕವಾಗಿ ತಾಲೂಕಿನಲ್ಲಿ ಗಿರವಿ ಅಂಗಡಿಗಳು ಬಾಗಿಲು ತೆರೆದಿವೆ.
ಅಕ್ಕಿ ಮಾರಾಟ?: ತಾಲೂಕಿನ ತ್ಯಾಮಗೊಂಡ್ಲು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಎಣ್ಣೆ ಖರೀದಿಗೆ ಪಡಿತರ ಅಕ್ಕಿಯನ್ನು 15-20 ರೂ.ಗಳಿಗೆ ಮಾರಾಟ ಮಾಡಲಾಗುತಿದೆ ಎಂಬ ಮಾತುಗಳು ಸ್ಥಳೀಯರಲ್ಲಿ ಕೇಳಿಬಂದಿವೆ.
ಅಬಕಾರಿ ಯಡವಟ್ಟು: ಗ್ರಾಮಾಂತರ ಜಿಲ್ಲೆ ಕೆಂಪು ವಲಯದಲ್ಲಿದ್ದರೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ ಸಾಮಾಜಿಕ ಅಂತರ ಸೂಚಿಸ ಬೇಕಿದ್ದ ಅಧಿಕಾರಿಗಳು ಮೌನವಾಗಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.