ಜಿಲ್ಲೆಯಲ್ಲಿ ಸಾವಿರ ನೀಲಗಿರಿ ಮರ ತೆರವು
ಅಂತರ್ಜಲ ಹೆಚ್ಚಳಕ್ಕಾಗಿ ನೀಲಗಿರಿ ತೆರವು ಅಭಿಯಾನ | ರೈತರಿಂದ ಭಾರೀ ಪ್ರಮಾಣದ ಸ್ಪಂದನೆ
Team Udayavani, Aug 9, 2019, 2:19 PM IST
ಗ್ರಾಮಾಂತರ ಜಿಲ್ಲೆಯ ಗ್ರಾಮವೊಂದರಲ್ಲಿ ನೀಲಗಿರಿ ಮರ ಕಟಾವು ಮಾಡಿದ ರೈತರು.
ದೇವನಹಳ್ಳಿ: ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿದ್ದ ನೀಲಗಿರಿ ಮರಗಳನ್ನು ಜಿಲ್ಲಾಡಳಿತ ನೀಲಗಿರಿ ಮರ ತೆರವು ಅಭಿಯಾನ ಮಾಡುವುದರ ಮೂಲಕ 1000 ನೀಲಗಿರಿ ಮರಗಳ ಕಟಾವು ಮಾಡಿದೆ.
85,474 ಎಕರೆಯಲ್ಲಿ ನೀಲಗಿರಿ: ಜಿಲ್ಲೆಯಲ್ಲಿ ಸುಮಾರು 85,474 ಎಕರೆ ನೀಲಗಿರಿಯಿದೆ. ಅದರಲ್ಲಿ ದೇವನಹಳ್ಳಿಯಲ್ಲಿ 13,543 ಎಕರೆ, ಹೊಸಕೋಟೆ 31,171 ಎಕರೆ, ದೊಡ್ಡಬಳ್ಳಾಪುರ 26,669 ಎಕರೆ ಹಾಗೂ ನೆಲಮಂಗಲ 14,091 ಎಕರೆ ನೀಲಗಿರಿ ಮರ ಹೊಂದಿದೆ. ಹೊಸಕೋಟೆಯಲ್ಲೇ ಹೆಚ್ಚು ಪ್ರಮಾಣ ದಲ್ಲಿದೆ. ಜಿಲ್ಲೆಯಲ್ಲಿ ಅತಿಹೆಚ್ಚು ನೀಲಗಿರಿ ತೋಪು ಇದ್ದು, ಖಾಸಗಿ ಜಮೀನಿನಲ್ಲಿನ ಮರಗಳ ಕಟಾವಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಜಮೀನಿನಲ್ಲಿರುವ ಮರಗಳ ಕಟಾವು ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ನೀಲಗಿರಿ ಕಟಾವಿನ ಅಂಕಿ ಅಂಶ: ನೀಲಗಿರಿ ತೆರವು ಅಭಿಯಾನದಲ್ಲಿ ದೇವನಹಳ್ಳಿಯಲ್ಲಿ 254 ಎಕರೆ, ಹೊಸಕೋಟೆ 228 ಎಕರೆ, ದೊಡ್ಡಬಳ್ಳಾಪುರ 128 ಎಕರೆ ಹಾಗೂ ನೆಲಮಂಗಲ 139 ಎಕರೆ ಪ್ರದೇಶದ ನೀಲಗಿರಿ ಮರಗಳನ್ನು ಬುಡ ಸಮೇತವಾಗಿ ತೆರವು ಮಾಡಲಾಗಿದೆ. 1200 ರಿಂದ 1500 ಅಡಿಗಳ ವರೆಗೂ ಬೋರ್ ವೆಲ್ ಗಳನ್ನು ಕೊರೆಸಿದರೂ ಸಹ ನೀರು ಸಿಗದ ಪರಿಸ್ಥಿತಿ ಇದೆ. ಅಂರ್ತಜಲ ಮಟ್ಟ ಕುಸಿತಕ್ಕೆ ಕಾರಣವಾಗಿರುವ ನೀಲಗಿರಿ ಮರಗಳ ಕಟಾವಿನ ಅನಿರ್ವಾಯವಿದೆ. ನೀಲಗಿರಿ ಮರಗಳು ಯಥೇಚ್ಛ ವಾಗಿರುವುದರಿಂದ ನೀರು ಬತ್ತಿಹೋಗು ತ್ತಿದೆ. ಬಿದ್ದ ಮಳೆಯ ನೀರು ಭೂಮಿ ಸೇರುತ್ತಿಲ್ಲ. ಅಂರ್ತಜಲ ಮಟ್ಟ ಹೆಚ್ಚಳಕ್ಕೆ ನೀಲಗಿರಿ ಮರಗಳು ತೆರವಾಗಬೇಕು. ಒಂದು ನೀಲಗಿರಿ ಮರವು 10-12 ಲೀಟರ್ ನೀರನ್ನು ಹೀರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀಲಗಿರಿ ಸರ್ಕಾರಿ ಬೀಳು ತೋಪು: ರೈತರು ಜಮೀನಿನಲ್ಲಿ ನೀಲಗಿರಿ ಮರ ತೆರವು ಮಾಡದಿದ್ದರೆ, ಪಹಣಿಯಲ್ಲಿ ಸರ್ಕಾರಿ ಬೀಳು ನೀಲಗಿರಿ ತೋಪು ಎಂದು ನಮೂದಿಸಲಾಗುತ್ತದೆ. ಈ ವಿಷಯವನ್ನು ತಹಶೀಲ್ದಾರ್ ಮತ್ತು ನಾಡ ಕಚೇರಿಗಳಲ್ಲಿ ಸೂಚನೆ ಫಲಕಗಳಲ್ಲಿ ಅಳವಡಿಸಲಾಗಿದೆ. ಸೂಚನ ಫಲಕ ಗಮನಿಸಿರವ ರೈತರು ಸ್ವಯಂಕೃತವಾಗಿ ನೀಲಗಿರಿ ಮರಗಳ ಕಟಾವಿಗೆ ಮುಂದಾಗಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.
● ಎಸ್. ಮಹೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.