ಆನೇಕಲ್: ಕಾಳೇಶ್ವರಿ- ರಾಗಿಹಳ್ಳಿ ರಸ್ತೆಯಲ್ಲಿ ಕಂಡ ಹುಲಿ; ಗ್ರಾಮಸ್ಥರಲ್ಲಿ ಮನೆಮಾಡಿದ ಆತಂಕ
Team Udayavani, Dec 23, 2021, 4:28 PM IST
ಆನೇಕಲ್: ಅರಣ್ಯದಲ್ಲಿ ಹಾದು ಹೋಗುವ ಕಾಳೇಶ್ವರಿ- ರಾಗಿಹಳ್ಳಿ ರಸ್ತೆಯಲ್ಲಿ ಹುಲಿ ಒಂದು ರಸ್ತೆ ದಾಟುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಈ ಭಾಗದ ಜನರಲ್ಲಿ ಆತಂಕ ಮೂಡಿಸಿದೆ.
ಬುಧವಾರ ರಾತ್ರಿ 10 ಗಂಟೆ ಸುಮಾರಿನಲ್ಲಿ ಕಾಳೇಶ್ವರಿ ಅರಣ್ಯ ಕಾವಲು ದ್ವಾರದ ಮೂಲಕ ರಾಗಿಹಳ್ಳಿ ಕಡೆಗೆ ಕಾರಿನಲ್ಲಿ ಹೊರಟಿದ್ದವರಿಗೆ ಎಡ ಭಾಗದ ಪೊದೆಯಿಂದ ಬಲ ಭಾಗಕ್ಕೆ ಹುಲಿ ಒಂದು ರಸ್ತೆ ದಾಟಿ ಹೋಗುವುದನ್ನು ಕಂಡು ತಮ್ಮ ಮೊಬೈಲ್ ನಲ್ಲಿ ಸರೆಹಿಡಿದು ಕೊಂಡಿದ್ದಾರೆ. ಸದ್ಯ ಈ ದೃಶ್ಯ ವೈರಲ್ ಆಗಿದ್ದು ರಾಗಿಹಳ್ಳಿ ಸುತ್ತ ಮುತ್ತಲ ಗ್ರಾಮದ ಜನರು , ಈ ಭಾಗದಲ್ಲಿ ಬೈಕ್ ಗಳಲ್ಲಿ ಸಂಚರಿಸುವ ಸವಾರರು ತೀವ್ತ ಆತಂಕ್ಕೆ ಒಳಗಾಗಿದ್ದಾರೆ.
ಕಳೆದ ಏಳು ವರ್ಷಗಳ ಹಿಂದೆ ಬನ್ನೇರುಘಟ್ಟ ಜೈವಿಕ ಉದ್ಯಾನ ವನದ ಸಫಾರಿ ರಸ್ತೆಯಲ್ಲಿ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕರಿಗೆ ಹುಲಿ ಕಂಡು ಬಂದಿತ್ತು. ಆದಾದ ಬಳಿ ಎರಡು ಮೂರುವರ್ಷಗಳು ಜೈವಿಕ ಉದ್ಯಾನದ ಸಫಾರಿಯಲ್ಲಿನ ಹುಲಿ ಆವರಣದ ಬೇಲಿ ಬಳಿ ಓಡಾಡುತ್ತ ಸಾಕು ಹುಲಿ ಜೊತೆ ಕಾದಾಡಿ ಸುದ್ದಿ ಆಗಿತ್ತು.
ಕಳೆದ ಆರು ವರ್ಷಗಳಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ನಾಲ್ಕು ವಲಯಗಳಲ್ಲಿ ಹುಲಿ ಸಂಚರಿಸುತ್ತಿದ್ದು, ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ಕೊಂಡಿದೆ ಎಂಬುದನ್ನು ಈ ಭಾಗದ ವನ್ಯಜೀವಿ ಆಸಕ್ತರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಕೆರೆಗೆ ಬಿದ್ದು ವ್ಯಕ್ತಿ ಸಾವು
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್ಬುಕ್ ಬಳಸುವಂತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.