ತಂಬಾಕು ಮಾರಾಟ ಅಂಗಡಿಗಳ ಮೇಲೆ ದಾಳಿ
Team Udayavani, Dec 12, 2019, 4:01 PM IST
ದೇವನಹಳ್ಳಿ: ತಾಲೂಕಿನ ಕಾರಹಳ್ಳಿ ಗ್ರಾಮದ ಸುತ್ತಮುತ್ತಲೂ ಜಿಲ್ಲಾ ತಂಬಾಕು ನಿಯಂತ್ರಣ ಸಲಹೆಗಾರ್ತಿ ಡಾ.ವಿದ್ಯಾರಾಣಿ ನೇತೃತ್ವದಲ್ಲಿ ದಾಳಿ ನಡೆಸಿ, 17 ಪ್ರಕರಣ ದಲ್ಲಿ 3200 ರೂ. ದಂಡ ವಿಧಿಸಲಾಯಿತು.
ತಂಬಾಕು ಉತ್ಪನ್ನಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದ ಹಾಗೂ ತಂಬಾಕು ಆರೋಗ್ಯಕ್ಕೆ ಹಾನಿಕಾರಕ ಚಿಹ್ನೆ ನಾಮ ಫಲಕದಲ್ಲಿ ಹಾಕುವಂತೆ ಅಂಗಡಿ ಮಾರಾಟಗಾರರಿಗೆ ಅರಿವು ಮೂಡಿಸಲಾಯಿತು.ಈ ವೇಳೆ ಮಾತನಾಡಿದ ವಿದ್ಯಾರಾಣಿ ಕಾರಹಳ್ಳಿ ಸುತ್ತಮುತ್ತಲು ಅಂಗಡಿ, ಬೇಕರಿ, ಇನ್ನಿತರೆ ಪ್ರದೇಶಗಳಲ್ಲಿ 17 ಪ್ರಕರಣದಲ್ಲಿ 3200 ರೂ. ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.
ಅಂಗಡಿಯ ಮುಂದೆ ದೂಮಪಾನ ನಿಷೇಧ ಪ್ರದೇಶ ಎಂದು ನಾಮಫಲಕವನ್ನು ಅಳವಡಿಸುವಂತೆ ಈ ಹಿಂದೆ ಸೂಚಿಸಲಾಗಿತ್ತು. ಧೂಮಪಾನ ನಿಷೇಧಿತ ಪ್ರದೇಶವೆಂದು ಅಳವಡಿಸದ ಅಂಗಡಿಗಳಿಗೂ ದಂಡವನ್ನು ವಿಧಿಸಲಾಗಿದೆ ಎಂದು ಹೇಳಿದರು.
ತಂಬಾಕು ನಿಯಂತ್ರಣ ಕಾಯ್ದೆ ರಾಜ್ಯ ಹೈಕೋರ್ಟ್ ಆದೇಶದಂತೆ ತಂಬಾಕು ಉತ್ಪನ್ನ ಮಾರಾಟ ನಿಯಂತ್ರಣಕ್ಕೆ ಉನ್ನತಮಟ್ಟದ ಜಾಗೃತ ದಳ ನೇಮಕಮಾಡಿ ಮಾರಾಟಕ್ಕೆ ಕಡಿವಾಣ ಹಾಕಲು ಈಗಾಗಲೇ ಸಮಿತಿ ರಚಿಸಿದೆ. ಧೂಮಪಾನದಿಂದ ಹಲವಾರು ತೊಂದರೆಗಳಿಗೆ ಜನ ಒಳಗಾಗುತ್ತಿದ್ದಾರೆ. ಧೂಮಪಾನ ಮಾಡುವವರು ಶೇ.10 ಹೊಗೆ ಸೇದುತ್ತಾರೆ ಉಳಿದ 90ರಷ್ಟು ಹೊಗೆಯನ್ನು
ಹೊರಹಾಕುವುದರಿಂದ ಇತರರು ಆ ಹೊಗೆಗೆ ತುತ್ತಾಗಿ ರೋಗ ರುಜಿನುಗಳಿಗೆ ತುತ್ತಾಗುತ್ತಾರೆ. ಧೂಮಪಾನದಿಂದ ಕ್ಯಾನ್ಸರ್‌ನಂತಹ ರೋಗಗಳು ಬರುವಂತಾಗಿದೆ ಎಂದು ವಿವರಿಸಿದರು. ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಆಸ್ಪತ್ರೆ, ಸರ್ಕಾರಿ ಕಚೇರಿ, ಸಂಘ ಸಂಸ್ಥೆಗಳನ್ನು ಧೂಮಪಾನ ನಿಷೇಧ ಪ್ರದೇಶಗಳು ಎಂದು ಘೋಷಿಸಿ ದೂಮಪಾನ ನಿಷೇಧ ನಾಮ ಫಲಕಗಳನ್ನು ಖಡ್ಡಾಯವಾಗಿ ಬಿತ್ತರಿಸಬೇಕು.
ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ 100 ಗಜ ವರೆಗೆ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆ ಸಂಪೂರ್ಣ ವಾಗಿ ನಿಷೇಧಿಸಿ ಬಗ್ಗೆ ಕುರಿತು ನಾಮ ಫಲಕಗಳನ್ನು ಪ್ರದರ್ಶಿಸಬೇಕು. ದೇಶದಲ್ಲಿ ಪ್ರತಿ ವರ್ಷ 10 ಲಕ್ಷಕ್ಕಿಂತಲೂ ಹೆಚ್ಚಿನ ಜನರು ತಂಬಾಕು ಸೆವನೆಯಿಂದ ಸಾವನ್ನಪ್ಪುತ್ತಿದ್ದಾರೆ. ಪ್ರತಿ ದಿನ 2500 ಜನರು ತಂಬಾಕಿನಿಂದ ತೊಂದರೆಗೆ ಈಡಾಗುತ್ತಿದ್ದಾರೆ. ಇದರ ಸೇವೆಯಿಂದ ಕ್ಯಾನ್ಸ್‌ರ್‌ಹಾಗೂ ಹಲವಾರು ತೊಂದರೆಗಳಿಗೆ ತುತ್ತಾಗುತ್ತಿದ್ದಾರೆ ಎಂದರು.
ಈ ವೇಳೆಯಲ್ಲಿ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ವೆಂಕಟೇಶ್ ಸೇರಿದಂತೆ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thekkatte: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಗೋ ಕಳವು ಪ್ರಕರಣ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
Siddapura: ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.