ಕಂಪನಿಯ ಪ್ರಯೋಗದ ಚೆಲ್ಲಾಟಕ್ಕೆ ಟೊಮೆಟೋ ಬೆಳೆ ನಾಶ
Team Udayavani, Aug 3, 2023, 3:11 PM IST
ದೊಡ್ಡಬಳ್ಳಾಪುರ: ಟೊಮೆಟೋ ಬೆಳೆಗೆ ಉಚಿತ ಔಷಧಿ ನೀಡುತ್ತೇವೆ ಎಂದು ಹೇಳಿದ ಕಂಪನಿ ಮಾತ ನಂಬಿ ಬೆಳೆದಿದ್ದ ಟೊಮೆಟೋ ಕೈಗೆ ಸಿಗದೇ ಹಾಳಾಗಿ ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ ಎಂದು ತಾಲೂಕಿನ ದೊಡ್ಡತುಮಕೂರು ಗ್ರಾಮದ ರೈತ ಗಿಡ್ಡೆಗೌಡ ದೂರಿದ್ದಾರೆ.
ತಾಲೂಕಿನ ದೊಡ್ಡತುಮಕೂರು ಗ್ರಾಮದ ಗಿಡ್ಡೆ ಗೌಡ ಅವರು ಒಂದು ಎಕರೆ ಜಮೀನಿನಲ್ಲಿ ಟೊಮೆಟೋ ಬೆಳೆ ಬೆಳೆದಿದ್ದರು. ಹುಲು ಸಾಗಿ ಬೆಳೆ ದಿದ್ದ ಟೊಮೆಟೋ ಫಸಲು ಕೊಡಲು ಪ್ರಾರಂಭಿ ಸಿತ್ತು. ಇದೇ ಸಮಯಕ್ಕೆ ಖಾಸಗಿ ಕ್ರಿಮಿನಾಶಕ ಔಷಧಿ ಕಂಪನಿಯ ಪ್ರತಿನಿಧಿ ಗಿಡ್ಡೆಗೌಡ ಅವರನ್ನು ಭೇಟಿ ಮಾಡಿ, ಉಚಿತವಾಗಿ ಕ್ರಿಮಿನಾಶಕ ಔಷಧಿ ಕೊಡುತ್ತೇವೆ ಗಿಡಗಳಿಗೆ ಸಿಂಪರಣೆ ಮಾಡಿ ದರೆ ಭರ್ಜರಿ ಫಸಲು ಬರುತ್ತದೆ ಎಂದು ಹೇಳಿದ್ದಾರೆ. ಉಚಿತ ಔಷಧಿಯ ಅಮಿಷಕ್ಕೆ ಒಳಗಾದ ಗಿಡ್ಡೆಗೌಡ ಅವರು ಕಂಪನಿಯ ಕ್ರಿಮಿನಾಶಕ ಸಿಂಪರಣೆ ಮಾಡಿಸಿದ್ದಾರೆ. ಪರಿಣಾಮ ಟೊಮೆಟೋ ಬೆಳೆ ನಾಶವಾಗಿದೆ. ತರಕಾರಿ ಮಾರುಕಟ್ಟೆಯಲ್ಲಿ ಬಡವರು ಖರೀದಿಸಲು ಸಾಧ್ಯವಾಗಷ್ಟು ಬೆಲೆ ಇರುವ ಟೊಮೆಟೋ ಗಿಡಗಳಿಗೆ ಉತ್ತಮ ಇಳುವರಿ ನೆಪದಲ್ಲಿ ಖಾಸಗಿ ಕಂಪನಿಯವರು ನೀಡಿದ ಔಷಧಿ ಸಿಂಪಡಣೆ ಮಾಡಿ ದ್ದರ ಪರಿಣಾಮ ಇಡೀ ತೋಟ ಒಣಗಿ ನಿಂತಿದೆ.
ರಾಜ್ಯ ರೈತ ಸಂಘದ ಮುಖಂಡ ವಸಂತ ಕುಮಾರ್ ಮಾಹಿತಿ ನೀಡಿ, ಟೊಮೆಟೋ ಬೆಳೆಗೆ ಕ್ರಿಮಿನಾಶಕ ಸಿಂಪಡಣೆಯಿಂದ ಗಿಡಗಳು ಒಣಗಿ ರುವ ಬಗ್ಗೆ ಗಿಡ್ಡೆ ಗೌಡ ಅವರು ಕ್ರಿಮಿನಾಶಕ ಕಂಪನಿಯ ಪ್ರತಿನಿಧಿ ಯನ್ನು ಸಂಪರ್ಕಿಸಿದ್ದರು. ಕಂಪನಿಯ ಪ್ರತಿನಿಧಿ ಉಡಾಪೆಯ ಉತ್ತರ ನೀಡುತ್ತಿದ್ದಾರೆ. ರೈತರನ್ನು ವಂಚಿಸು ತ್ತಿರುವ ಕಳಪೆ ಔಷಧಿ ಕಂಪನಿಗಳಿಗೆ ತಕ್ಕ ಪಾಠ ಕಲಿಸಲು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕಂಪನಿಯವರೇ ತೋಟದಲ್ಲಿ ನಿಂತು ಕ್ರಿಮಿನಾಶಕ ಸಿಂಪರಣೆ: ಈ ಬಗ್ಗೆ ಮಾಹಿತಿ ನೀಡಿದ ಟೊಮೆಟೋ ಬೆಳೆಗಾರ ಗಿಡ್ಡೆಗೌಡ, ಉತ್ತಮ ಫಸಲು ಬರುತ್ತದೆ ಇದನ್ನು ಬಳಸಿ ಎಂದು ಕಂಪನಿಯವರೇ ತೋಟದಲ್ಲಿ ನಿಂತು ಕ್ರಿಮಿನಾಶಕ ಸಿಂಪಡಣೆ ಮಾಡಿಸಿದ್ದರು. ಔಷಧಿಯ ಸಿಂಪಡಣೆ ಮಾಡಿರುವ ಗಿಡಗಳ ಸಾಲಿನಲ್ಲಿ ಗುರುತಿಗಾಗಿ ಬಣ್ಣದ ಟೇಪು ಗಳನ್ನೂ ಸಹ ಕಟ್ಟಿಸಿದ್ದಾರೆ. ಆದರೆ ಕ್ರಿಮಿನಾಶಕ ಸಿಂಪರಣೆ ಮಾಡಿರುವ ಗಿಡದಲ್ಲಿನ ಹೂವು ಉದುರಲು ಆರಂಭಿಸಿತು, ಕಾಯಿಗಳು ಹುಲುಸಾಗಿ ಬೆಳೆಯುವ ಬದಲು ಬಾಡಿದಂತೆ ಕಪ್ಪಾಗಿ ಉದುರುತ್ತಿವೆ. ಕಂಪನಿಯ ಪ್ರಯೋಗದ ಚೆಲ್ಲಾಟಕ್ಕೆ ನಮ್ಮ ಒಂದು ಎಕರೆಯ ಟೊಮೆಟೋ ಬೆಳೆ ನಾಶವಾಗಿದೆ. ಇವತ್ತಿನ ಮಾರುಕಟ್ಟೆ ದರದಲ್ಲಿ ಸುಮಾರು 25 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.