ಟೊಮೆಟೋ, ಶುಂಠಿ ಕಳವು: ರೈತರಿಗೆ ಆತಂಕ
Team Udayavani, Jul 13, 2023, 2:39 PM IST
ದೊಡ್ಡಬಳ್ಳಾಪುರ: ಒಂದೆಡೆ ಶತಕ ದಾಟಿರುವ ಟೊಮೆಟೋ ಬೆಳೆಯಿಂದಾಗಿ ಒಂದಿಷ್ಟು ಲಾಭ ಕಾಣುತ್ತಿದ್ದೇವೆ ಎಂದು ರೈತರು ಸಮಾಧಾನಗೊಂಡಿರುವಾಗಲೇ, ರಾತ್ರಿ ವೇಳೆ ತೋಟಗಳಿಂದ ಟೊಮೆಟೋ, ಶುಂಠಿ ಮೊದಲಾದ ತರಕಾರಿಗಳು ಕಳುವಾಗುತ್ತಿರುವುದು ರೈತರಿಗೆ ಆತಂಕ ಸೃಷ್ಟಿಸಿದೆ.
ತೋಟಗಳಲ್ಲಿ ತೆಂಗಿನ ಗರಿ, ಬಾಳೆ ಗೊನೆ, ರೈತರು ಸಾಕಿದ್ದ ಕುರಿ, ಮೇಕೆಗಳ ಕಳುವು ನಡೆಯುತ್ತಿತ್ತು. ಈಗ ತರಕಾರಿಗಳು ಸಹ ಕಳುವಾಗುತ್ತಿರುವುದು ರೈತರ ನಿದ್ದೆಗೆಡಿಸಿದೆ.
ಲಕ್ಷ್ಮೀದೇವಿಪುರ ಗ್ರಾಮದ ಜಗದೀ ಶ್ ಅವ ರು ಒಂ ದು ಎಕರೆ ಪ್ರದೇಶ ದಲ್ಲಿ ಕೊಯ್ಲಿಗೆ ಬಂದಿ ದ್ದ ಸುಮಾ ರು 1.50 ಲಕ್ಷ ಮೌಲ್ಯದ ಟೊಮೆಟೋ ಭಾನುವಾ ರ ರಾತ್ರೋರಾತ್ರಿ ಕಳವು ಮಾಡಿಕೊಂಡು ಹೋಗಿದ್ದಾರೆ. ತಾಲೂಕಿನ ದೊಡ್ಡ ತುಮಕೂರು ಗ್ರಾಮದ ರೈತ ಆಂಜಿನಪ್ಪ ಅವರ ತೋಟದಲ್ಲಿ ಬೆಳೆಯಲಾಗಿದ್ದ ಹೂ ಕೋಸನ್ನು ಹಗಲಿನಲ್ಲಿ ವ್ಯಾಪಾರ ಮಾಡಿ ಮುಂಗಡ ಹಣ ನೀಡಿ ಹೋದವರು, ರಾತ್ರಿ ಕಳವು ಮಾಡಿಕೊಂಡು ಹೋಗಿದ್ದರು. ನಾಗಸಂದ್ರ ಗ್ರಾಮದ ಬಸವರಾಜ್ ಅವರು ಎರಡುವರೆ ತಿಂಗಳ ಹಿಂದೆಯಷ್ಟೇ ಅಡಿಕೆ ಸಸಿಗಳ ನಡುವೆ ಶುಂಠಿ ನಾಟಿ ಮಾಡಿದ್ದರು. ಕೊಯ್ಲಿಗೆ ಬರಲು ಸುಮಾರು ನಾಲ್ಕು ತಿಂಗಳು ಬೇಕಿದೆ. ಆದರೆ ಮಾರು ಕಟ್ಟೆಯಲ್ಲಿ ಶುಂಠಿ ಬೆಲೆ ಗಗನಕ್ಕೆ ಏರಿದ್ದು 1 ಕೆ.ಜಿ.ಸಾಮಾನ್ಯ ವರ್ಗದ ಶುಂಠಿ 200ಗಳಿಗೆ ಮಾರಾಟವಾಗುತ್ತಿದೆ. ಇದರಿಂದಾಗಿ ಇನ್ನೂ ಈಗಷ್ಟೇ ಗೆಡ್ಡೆ ಕಟ್ಟುತ್ತಿರುವ ಎಳೆಯ ಶುಂಠಿಯನ್ನೇ ಕಳ್ಳರು ಭಾನುವಾರ ರಾತ್ರಿ ಗಿಡಗಳ ಸಮೇತ ಸುಮಾರು ಎರಡು ಚೀಲದಷ್ಟು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಕಳ್ಳರನ್ನು ಪತ್ತೆ ಮಾಡುವುದೇ ದೊಡ್ಡ ಕಷ್ಟ : ರೈತರ ತೋಟಗಳಲ್ಲಿ ನಡೆಯುತ್ತಿರುವ ತರಕಾರಿ ಕಳವು ಪ್ರಕರಣಗಳು ಪೊಲೀಸರಿಗು ತಲೆನೋವಾಗಿ ಪರಿಣಮಿಸಿದ್ದು, ಕಳ್ಳರನ್ನು ಪತ್ತೆ ಮಾಡುವುದೇ ದೊಡ್ಡ ಕಷ್ಟವಾಗಿದೆ. ಬೇಸಿಗೆ ಬಿಸಿಲಿನ ತಾಪದ ಸಮಯಲ್ಲಿದಲ್ಲಿ ನಾಟಿ ಮಾಡಿದ್ದ ತರಕಾರಿ ಬೆಳೆಗಳಿಗೆ ಇದ್ದು ಇಲ್ಲದಂತಹ ವಿದ್ಯುತ್ ಸರಬರಾಜಿನಲ್ಲಿ ರಾತ್ರಿ ವೇಳೆಯಲ್ಲಿ ನೀರು ಹಾಯಿಸಿ ಬೆಳೆ ಉಳಿಸಿ ಕೊಂಡಿದ್ದರು. ಈಗ ಜಡಿ ಮಳೆ ಪ್ರಾರಂಭವಾಗಿ ತರಕಾರಿ ತೋಟದಲ್ಲೇ ಕೊಳೆಯಲು ಆರಂಭವಾಗಿದೆ. ಕೈಗೆ ಬಂದಿರುವ ಬೆಳೆ ಉಳಿಸಿಕೊಳ್ಳುವುದು ಹೇಗೆ ಎನ್ನುವ ಚಿಂತೆ ಒಂದು ಕಡೆಯಾದರೆ, ಇರುವ ಅಲ್ಪಸ್ವಲ್ಪ ಬೆಳೆಯನ್ನು ಕಳ್ಳರಿಂದ ರಕ್ಷಿಸಿಕೊಳ್ಳುವುದೇ ರೈತರಿಗೆ ದೊಡ್ಡ ಸವಾಲಾಗಿದೆ.
ರಾತ್ರಿ ವೇಳೆ ತೋಟಗಳಲ್ಲಿ ಒಬ್ಬರೆ ಇದ್ದು ಬೆಳೆ ಕಾವಲು ಕಾಯುವಾಗ ಆಯುಧಗಳೊಂದಿಗೆ ವಾಹನಗಳಲ್ಲಿ ಸಜ್ಜಾಗಿ ಬರುವ ಕಳ್ಳರಿಂದ ಪ್ರಾಣಕ್ಕೆ ಕುತ್ತು ಬಂದರೆ ಹೇಗೆ ಎನ್ನುವ ಭಯದಲ್ಲಿ ರಾತ್ರಿಗಳನ್ನು ಕಳೆಯುವಂತಾಗಿದೆ – ಬಸವರಾಜ್, ಶುಂಠಿ ಬೆಳೆಗಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.