ಟೊಮ್ಯಾಟೋ ಗಗನ ಕುಸುಮ..!


Team Udayavani, Nov 25, 2021, 11:01 AM IST

tomato price hike

ದೇವನಹಳ್ಳಿ: ಪ್ರತಿ ಬಾರಿ ಟೊಮ್ಯಾಟೊ ಬೆಳೆದು ಕೈಸುಟ್ಟುಕೊಳ್ಳುತ್ತಿದ್ದ ರೈತರಿಗೆ ಈ ಭಾರಿ ಅದೃಷ್ಟ ಖುಲಾಯಿಸಿದೆ. ಜಿಲ್ಲೆಯ ರೈತರು ಟೊಮ್ಯಾಟೋ ಬೆಳೆದು ಮಾರುಕಟ್ಟೆಗೆ ನೀಡುತ್ತಿದ್ದಾರೆ. ಇದೀಗ ಮಾರುಕಟ್ಟೆಯಲ್ಲಿ 1 ಕೆ.ಜಿಗೆ 100ರೂ. ಗಡಿದಾಟಿದೆ. ರೈತರು ಸಾಲಹೋಲ ಮಾಡಿ ಟೊಮ್ಯಾಟೋ ಬೆಳೆ ಯುತ್ತಾರೆ. ಆದರೆ ಮಾರುಕಟ್ಟೆಗೆ ಹೋಗುವಷ್ಟರಲ್ಲಿ 50 ರಿಂದ 60 ರೂ.ಗೆ ರೈತರಿಂದ ಟೊಮ್ಯಾಟೋ ಖರೀದಿ ಸುತ್ತಾರೆ.

ಮಾರುಕಟ್ಟೆಗೆ ಹೋಗುವಷ್ಟರಲ್ಲಿ ಕೆ.ಜಿ.ಗೆ 100 ರೂ.ಆಗಿರುತ್ತದೆ. ಮದ್ಯವರ್ತಿಗಳ ಹಾವಳಿ ತಪ್ಪಿದರೆ ರೈತರಿಗೆ ಲಾಭದಾಯಕವಾಗುತ್ತದೆ. ರೈತರ ತೋಟಗಳಿಗೆ ನೇರವಾಗಿ ಬಂದು ಖರೀದಿಸಿಕೊಂಡು ಹೋಗುತ್ತಾರೆ. ಅಲ್ಲಿ ಹೋಗುವಷ್ಟರಲ್ಲಿ ಬೆಲೆ ಬದಲಾಗಿರುತ್ತದೆ. ಮಾರುಕಟ್ಟೆಗಳಿಗೆ ರೈತರು ನೇರವಾಗಿ ಹಾಕಿದರೆ ಕಮಿಷನ್‌ ನೀಡಬೇಕಾಗುತ್ತದೆ.

ಇನ್ನು ಮಿಕ್ಕಿದ ಹಣ ರೈತರ ಕೈಗೆ ಹೋಗುತ್ತದೆ. 100ರೂ.ಗೆ ಇಷ್ಟು ಕಮಿಷನ್‌ ಆಗಿರುತ್ತದೆ ಎಂದು ರೈತರು ಹೇಳುತ್ತಾರೆ. ಟೊಮ್ಯಾಟೋಗೆ ರೋಗಬಾಧೆ: ಕೊರೋನಾ ಲಾಕ್‌ ಡೌನ್‌ ತೆರವಾದ ನಂತರ ಇದೇ ಮೊದಲ ಭಾರಿಗೆ ಟೊಮ್ಯಾಟೋಗೆ ಬಹುಬೇಡಿಕೆ ಉಂಟಾಗಿ ಗರಿಷ್ಟ ಬೆಲೆಗೆ ಮಾರಾಟವಾಗುತ್ತಿದೆ. ಹೀಗೆ ಉತ್ತಮ ಬೆಲೆ ಇದ್ದರೂ ಸಹ ರೈತರಿಗೆ ಸಂತಸವಿಲ್ಲ.

ಇದನ್ನೂ ಓದಿ;- ಸೋಮವಾರ ಸಂತೆ ಬಂದ್ರೆ ಪಪಂ ಸಿಬ್ಬಂದಿಗೆ ಹಬ್ಬ

ಲಕ್ಷಾಂತರ ರೂ.ಗಳ ಬಂಡವಾಳ ಹಾಕಿ ಬೆಳೆದ ಬೆಳೆಗಳು ಜಿಲ್ಲೆಯಲ್ಲಿ ಹಲವು ದಿನಗಳಿಂದ ಸುರಿ ಯುತ್ತಿರುವ ಮಳೆಯಿಂದ ಬೆಳೆಗಳು ರೋಗಕ್ಕೆ ತುತ್ತಾ ಗಿವೆ. ಬೆಳೆಯನ್ನು ರಕ್ಷಿಸಿಕೊಳ್ಳಲು ಎಷ್ಟೇ ಕೀಟನಾಶಕ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬಾರದೆ ರೈತರು ಹತಾಶರಾಗಿದ್ದಾರೆ.

ಅಪಾರ ಪ್ರಮಾಣದ ಬೆಳೆ ನಾಶ: ಎಪಿಎಂಸಿ ಮಾರುಕಟ್ಟೆಯಲ್ಲಿ 15 ರಿಂದ 20ಕೆ.ಜಿ ತೂಕದ ಒಂದು ಕ್ರೇಟ್‌ಗೆ 2500 ರಿಂದ 3000ರೂ.ಗೆ ಮಾರಾಟವಾಗುತ್ತಿದೆ. ಕಳೆದ ಒಂದು ವಾರದಲ್ಲಿ ಈ ದರ80 ರಿಂದ 100ರೂ.ಕ್ಕೆ ಹೆಚ್ಚಳವಾಗಿದೆ. ಪ್ರಸ್ತುತ ಜಿಲ್ಲೆಯ ಮಳಿಗೆಗಳಲ್ಲಿ 100ರೂ. ರವರೆಗೆ ಮಾರಾಟವಾಗುತ್ತಿದೆ.

ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯತಲ್ಲಿ ಉತ್ತಮ ಮಳೆ ಯಾಗುತ್ತಿದೆ. ಜತೆಗೆ, ವಾತಾವರಣದಲ್ಲಿನ ತಾಪಮಾನ ಕಡಿಮೆಯಾಗಿದೆ. ಇದರಿಂದ ಟೊಮ್ಯಾಟೋ ಬೆಳೆಗೆ ಹೊಡೆತ ಬಿದ್ದಿದೆ. ಕೆಲ ತೋಟಗಳಲ್ಲಿ ನೀರು ನಿಂತಿ ದ್ದು, ಹೆಚ್ಚಿನ ಪ್ರಮಾಣದ ಬೆಳೆನಾಶವಾಗಿದೆ. ಅಲ್ಲದೆ, ಮಹಾ ರಾಷ್ಟ್ರದಿಂದಲೂ ಬೆಂಗಳೂರಿಗೆ ಟೊಮ್ಯಾಟೋ ಆಮದು ಪ್ರಮಾಣ ಕಡಿಮೆಯಿದೆ. ಜಿಲ್ಲೆಯ ಎಪಿಎಂಸಿಗಳಲ್ಲಿ ಒಂದು ಚೀಲ ಟೊಮ್ಯಾಟೊ ಬೆಲೆ 1500 ಏರಿಕೆ ಕಾಣುತ್ತಿದೆ.

ಟೊಮ್ಯಾಟೋ ದರ ಗಗನಕ್ಕೆ: ಜಿಲ್ಲೆಯ ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಾದ್ಯಂತ ಮಳೆ ಕೊಂಚ ಬಿಡುವುಕೊಟ್ಟಿತ್ತು.ಆದರೆ ಕಳೆದ ಎರಡು ಮೂರು ದಿನಗಳಿಂದ ಹವಾಮಾನ ವೈಪರೀತ್ಯಗಳಿಂದ ಸತತವಾಗಿ ಮಳೆಯಾಗುತ್ತಿದೆ. ಮಳೆ, ಶೀತಗಾಳಿ ಪ್ರಮಾಣ ಹೆಚ್ಚಾದ ಪರಿಣಾಮ ಟೊಮ್ಯಾಟೋ ಬೆಳೆಯ ಇಳುವರಿ ನೆಲ ಕಚ್ಚಿದ್ದು ಬೆಂಗಳೂರು, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಟೊಮ್ಯಾಟೋ ದರ ಗಗನಕ್ಕೇರಿದೆ.

 ಅಂಗಮಾರಿ ಸಂಕಷ್ಟ: ಜಿಲ್ಲೆಯಲ್ಲಿ ಈ ಬಾರಿ ವ್ಯಾಪಾಕವಾಗಿ ಮಳೆಯಾಗುತ್ತಿದೆ. ಶೀತಗಾಳಿ, ಮೋಡ ಮುಸುಕಿದ ವಾತಾವರಣವಿದೆ. ಇದರಿಂದ ಕೆಲವೆಡೆ ಟೊಮ್ಯಾಟೋ ಬೆಳೆಯಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡಿದೆ. ಬಹುತೇಕ ತಾಲೂಕುಗಳಲ್ಲಿ ಟೊಮ್ಯಾಟೋ ಬೆಳೆ ಸೊಂಪಾಗಿ ಬೆಳೆದು ಕೊಯ್ಲು ಆರಂಭವಾಗಿದೆ. ಅಂಗ ಮಾರಿ ರೋಗಬಾಧೆ ಗಿಡದ ಎಲೆಗಳು ಕಂದು ಮತ್ತು ಕಪ್ಪು ಬಣ್ಣಕ್ಕೆ ತಿರುಗಿ ಒಣಗುತ್ತಿವೆ. ರಾತ್ರೋರಾತ್ರಿ ಬೆಳೆ ನಾಶವಾಗುತ್ತಿದೆ. ಕಾಯಿಗಳು ಬಲಿತು ಹಣ್ಣಾಗುವುದಕ್ಕೂ ಮುನ್ನವೇ ಗಿಡದಿಂದ ಉದುರುತ್ತಿದ್ದು ಹೊಲಗಳಲ್ಲಿ ಕೊಳೆತು ಬೆಳೆಯ ಪ್ರಮಾಣ ಕುಸಿತ ಕಂಡಿದೆ.

ಗುಣಮಟ್ಟ ಕುಸಿತ: ಕಾರ್ತಿಕ ಮಾಸದ ಸಮಯದಲ್ಲಿ ಟೊಮ್ಯಾಟೋ ಸೇರಿ ಇತರೆ ತರಕಾರಿಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿತ್ತು. ಅಕಾಲಿಕ ಮಳೆ ಕಾರಣ ಟೊಮ್ಯಾಟೋ ಫ‌ಸಲು ಇಳಿಕೆಯಾಗಿ, ಗುಣಮಟ್ಟವೂ ಕುಸಿದಿದೆ.

“ತರಕಾರಿ ದರಗಳ ಸತತವಾಗಿ ಮಳೆಯಿಂದ ಏರಿಕೆಕಾಣುತ್ತಿದೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ತರಕಾರಿ ಬರುತ್ತಿಲ್ಲ. ಮಳೆ ಹೀಗೆ ಮುಂದುವರೆದರೆ ಬೆಲೆ ಮತ್ತಷ್ಟು ದುಬಾರಿಯಾಗಲಿದೆ.”                         –  ನಾಗರಾಜು, ತರಕಾರಿ ವ್ಯಾಪಾರಿ.

“ಮಳೆಯಿಂದ ಟೊಮ್ಯಾಟೋಗೆ ಬಾರಿ ಹಾನಿ ಉಂಟಾಗಿದೆ. ಟೊಮ್ಯಾಟೋ ಮಳೆಗೆ ಕೊಳೆಯುತ್ತಿದೆ. ಇದರಿಂದ ದರ ಏರಿಕೆ ಆಗಿದೆ. ಮಳೆ ಮುಂದುವರೆದರೆ ಮತ್ತಷ್ಟು ಬೆಳೆಗೆ ಹಾನಿಯಾಗಲಿದೆ.”

– ನಾರಾಯಣಸ್ವಾಮಿ, ರೈತರು.

ಟಾಪ್ ನ್ಯೂಸ್

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

9-bng

Channapatna: ಸಾಲಕ್ಕೆ ಹೆದರಿ ದಂಪತಿ ನೇಣಿಗೆ ಶರಣು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.