ದ್ರಾಕ್ಷಿ ಬೆಳೆ ಕಟಾವಿಗೆ ಬಾರದ ವರ್ತಕರು


Team Udayavani, Aug 1, 2023, 3:24 PM IST

ದ್ರಾಕ್ಷಿ ಬೆಳೆ ಕಟಾವಿಗೆ ಬಾರದ ವರ್ತಕರು

ದೇವನಹಳ್ಳಿ: ತೋಟಗಳಿಗೆ ಬಂದು ಕಾಶಿ ಕಟಾವು ಮಾಡುತ್ತಿದ್ದ ನೆರೆ ರಾಜ್ಯದ ವರ್ತಕರು ಈ ಬಾರಿ ಮಳೆಯಿಂದಾಗಿ ಬಂದಿಲ್ಲ. ಹೀಗಾಗಿ ತೋಟದಲ್ಲಿ ಮಾಡುತ್ತಿದ್ದಾರೆ. ಇದರಿಂದ ಉತ್ಪಾದನೆ ಮತ್ತು ಪೂರೈಕೆ ಹೆಚ್ಚಳವಾಗಿದ್ದು, ಬೇಡಿಕೆ ಕುಸಿದಿದೆ ಇದರಿಂದ ದ್ರಾಕ್ಷಿ ಬೆಳೆಗಾರರಿಗೆ ದಿಕ್ಕು ತೋಚದಂತಾಗಿದೆ.

ತಾಲೂಕಿನಲ್ಲಿ ಸುಮಾರು 1290 ಹೆಕ್ಟರ್‌ ಪ್ರದೇಶದಲ್ಲಿ ವಿವಿಧ ಸ್ಥಳೀಯ ದ್ರಾಕ್ಷಿ ಬೆಳೆಯ ಲಾಗುತ್ತಿದೆ. ಬೆಂಗಳೂರು ಬ್ಲೂ 400 ಹೆಕ್ಟರ್‌, ದಿಲ್‌ ಖುಷ್‌ 300 ಹೆಕ್ಟರ್‌, ರೆಡ್‌ ಗ್ಲೋಬ್‌ 250 ಹೆಕ್ಟರ್‌, ಶರತ್‌ ಕೃಷ್ಣ 150 ಹೆಕ್ಟರ್‌, ಸರಿತಾ ಕೃಷ್ಣ 120 ಹೆಕ್ಟೆರ್‌, ಸೋನಾಟಕ ಬೆಳೆಯಲಾಗಿದೆ.

ಬ್ಲೂ ದಾಕ್ಷಿ ಇಪ್ಪತ್ತು ರೂಪಾಯಿಗೆ ಇಳಿಕೆ: 70 ಇದ್ದ ಬೆಂಗಳೂರು ಬ್ಲೂ ದಾಕ್ಷಿ ಇಪ್ಪತ್ತು ರೂಪಾಯಿಗೆ ಇಳಿಕೆಯಾಗಿದೆ. 120 ಇದ್ದ ದಿಲ್‌ ಖುಷ್‌ 50ರಿಂದ 65ಕ್ಕೆ ಇಳಿಕೆಯಾಗಿದೆ. ರೆಡ್‌ ಗ್ಲೋಬ್‌ 170 ಇದ್ದದ್ದು ಈಗ 130ಕ್ಕೆ ಕುಸಿದಿದೆ. ಬೆಂಗಳೂರು ಬ್ಲೂ ದಾಕ್ಷಿಗೆ ಕನಿಷ್ಠ 60 ರೂ. ಸಿಕ್ಕಿದರೆ ರೈತರ ಶ್ರಮಕ್ಕೆ ಸ್ವಲ್ಪ ಪ್ರತಿಫ‌ಲ ಸಿಗುತ್ತದೆ ಎಂದು ಎಂದು ರೈತರು ಹೇಳುತ್ತಾರೆ.

ಸಗಟು ಖರೀದಿಸಿದ್ದರೂ ಇಲ್ಲದೇ ದ್ರಾಕ್ಷಿಗೆ ಬೇಡಿಕೆ ಇಲ್ಲದಂತಾಗಿದ್ದು, ತೋಟಗಳಿಂದ ಹಣ್ಣು ಹೊರಕ್ಕೆ ಹೋಗುತ್ತಿಲ್ಲ. ತೋಟಕ್ಕೆ ಹಾಕಿರುವ ಬಂಡವಾಳವೂ ಹೊರಡುವ ವಿಶ್ವಾಸ ವಿಲ್ಲದಂತಾಗಿದೆ ಎಂಬುದು ರೈತರ ಆತಂಕಕ್ಕೆ ಮನೆ ಮಾಡಿದೆ. ಕಟಾವು ಮಾಡಿಕೊಂಡು ಹೋಗುವವರು ಇಲ್ಲದೆ, ಈ ಬಾರಿ ಉತ್ತಮ ಫ‌ಸಲು ಬಂದಿದ್ದರು ಬೆಳೆಗೆ ಬೆಲೆ ಇಲ್ಲದಂತಾಗಿದೆ. ಬೆಳೆಗಾಗಿ ಮಾಡಿರುವ ಸಾಲ ತೀರಿಸುವುದು ಹೇಗೆ ಅನ್ನುವ ಚಿಂತೆಗೆ ರೈತರು ಜಾರಿದ್ದಾರೆ.ಸತತ ಮಳೆಯಿಂದ ಕಟಾವು ತಡ ಆಗುತ್ತಿರುವು ದರಿಂದ ತೋಟಗಳಲ್ಲೇ ಕೊಳೆಯು ವಂತಹ ಸ್ಥಿತಿಗೆ ಬಂದಿದೆ. ಒಳ್ಳೆಯ ಗುಣಮಟ್ಟದ ದ್ರಾಕ್ಷಿ ಜ್ಯೂಸಿಗೆ ಕಟಾವು ಮಾಡುತ್ತಿದ್ದು ಒಂದು ಕೆ.ಜಿ. ದ್ರಾಕ್ಷಿಯನ್ನು ಐದು ಆರು ರೂ.ಗೆ ಕೊಡುತ್ತಿದ್ದೇವೆ ಎಂದು ರೈತರ ಅಳಲಾಗಿದೆ.

ರೈತರು ತರಕಾರಿಯೊಂದಿಗೆ ದ್ರಾಕ್ಷಿ ಬೆಳೆದು ರೈತರು ಮಾದರಿ: ರೈತರು ತರಕಾರಿಯೊಂದಿಗೆ ದ್ರಾಕ್ಷಿ ಬೆಳೆದು ರೈತರು ಮಾದರಿಯಾಗುತ್ತಿದ್ದಾರೆ. ದ್ರಾಕ್ಷಿ ಬೆಳೆಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಕೆಲಸವಾಗಬೇಕು ಎಂಬುದು ರೈತರ ಬಹುದಿನದ ಬೇಡಿಕೆಯಾಗಿದೆ. ರೈತರ ಬೇಡಿಕೆಗೆ ಮಾತ್ರ ಮಾನ್ಯತೆ ಸಿಗುತ್ತಿಲ್ಲ. ದ್ರಾಕ್ಷಿ ಬೆಳೆ ಹವಾಮಾನ ಅವಲಂಬಿತ ಕೃಷಿ ಬೆಳೆ ತೇವಾಂಶ ಇದ್ದರೆ ದ್ರಾಕ್ಷಿ ಬೇಗನೇ ಹಾಳಾಗುತ್ತದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಈ ಬೆಳೆಯ ನಿರ್ವಹಣೆಗಾಗಿ ವೈಜ್ಞಾನಿಕ ರೀತಿಯಲ್ಲಿ ಸಂಸ್ಕಾರಣಾ ಘಟಕ ಸರ್ಕಾರ ಹಾಗೂ ಜನಪ್ರತಿ ನಿಧಿಗಳು ಈ ಬಗ್ಗೆ ಚಿಂತನೆ ಮಾಡಬೇಕು ಎಂದು ಸಾಕ್ಷಿ ಬೆಳೆಗಾರರು ರಫ್ತು ಒತ್ತಾಯಿಸಿದ್ದಾರೆ.

ಬೇಡಿಕೆ ಇದೆಯೋ ಅಷ್ಟು ಕಟಾವು: ರೈತರ ತೋಟ ಗಳಲ್ಲಿ ದ್ರಾಕ್ಷಿ ಕಟಾವು ಮಾಡಿ ದೆಹಲಿ, ಕೊಲ್ಕತ್ತಾ, ಅಸ್ಸಾಂ ಕೇರಳ, ಶ್ರೀನಗರ, ಚೆನ್ನೈ ಸೇರಿದಂತೆ ವಿವಿಧ ರಾಜ್ಯಗಳಿಗೆ ರಫ್ತು ಮಾಡುತ್ತಿದ್ದೇವೆ. ಇತ್ತೀಚೆಗೆ ಮಳೆಗಳು ಹೆಚ್ಚಾಗಿರುವ ಕಾರಣ ದ್ರಾಕ್ಷಿ ಕಳಿಸಲು ಸಾಧ್ಯವಾಗುತ್ತಿಲ್ಲ ಎಂದು ದ್ರಾಕ್ಷಿ ವ್ಯಾಪಾರಸ್ಥರು ಹೇಳುತ್ತಾರೆ. ರಾಜ್ಯದಲ್ಲಿ ಎಷ್ಟು ಬೇಡಿಕೆ ಇದೆಯೋ ಅಷ್ಟು ಕಟಾವು ಮಾಡುತ್ತಿದ್ದೇವೆ, ಬೇಡಿಕೆ ಕಡಿಮೆ ಯಾಗಿದೆ ಎಂದು ರೈತರ ಹೇಳುತ್ತಾರೆ.

ದೇವನಹಳ್ಳಿ ತಾಲೂಕಿನಲ್ಲಿಯೇ ಅತಿ ಹೆಚ್ಚು ದ್ರಾಕ್ಷಿ ಬೆಳೆಯಲಾಗುತ್ತಿದೆ. ಬೆಲೆ ಇದ್ದಾಗ ದಾಕ್ಷಿ ಇಳುವರಿಯಲ್ಲಿ ಕುಸಿತ ಗೊಳ್ಳುತ್ತದೆ. ಸರ್ಕಾರದ ಜನಪ್ರತಿನಿಧಿಗಳು ದ್ರಾಕ್ಷಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಬೇಕು. ಮುಂದಿನ ಬಜೆಟ್‌ನಲ್ಲಿ ದೇವನಹಳ್ಳಿ ತಾಲೂಕಿಗೆ ದ್ರಾಕ್ಷಿ ಘಟಕ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿ ದರೆ ರೈತರಿಗೆ ಅನುಕೂಲವಾಗುತ್ತದೆ. ವಿನಯ್‌ ಕುಮಾರ್‌, ರೈತ

ಟಾಪ್ ನ್ಯೂಸ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24-bng

Bengaluru: ಜಪ್ತಿ ಮಾಡಿದ ವಸ್ತುಗಳ ಮೇಲೆ ಕ್ಯೂಆರ್‌ ಕೋಡ್‌: ಪೊಲೀಸ್‌ ಆಯುಕ್ತ

WhatsApp Image 2025-01-22 at 01.46.02

ನಿವೃತ್ತ ಬಿಸಿಯೂಟ ಸಿಬಂದಿಗೆ ಇಡುಗಂಟು: ಶಿಕ್ಷಣ ಇಲಾಖೆ

Life imprisonment: ಕೊಲೆ, ದರೋಡೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ

Life imprisonment: ಕೊಲೆ, ದರೋಡೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.