ನಗರಸಭೆ ಮರಗಳ ಹನನ: ಆಕ್ರೋಶ
ಜಿಲ್ಲಾಧಿಕಾರಿ, ಪೌರಾಯುಕ್ತರ ಗಮನಕ್ಕೆ ತರದೇ ಮರಗಳ ಮಾರಣಹೋಮ
Team Udayavani, Oct 20, 2020, 1:56 PM IST
ನೆಲಮಂಗಲ: ನಗರಸಭೆಯ ನೀರು ಸಂಗ್ರಹಣಾ ಕೇಂದ್ರದಲ್ಲಿರುವ ಬೃಹತ್ ಮರಗಳನ್ನು ರಾಜಾರೋಷವಾಗಿ ಕತ್ತರಿಸಿ ಸಾಗಿಸಿದರೂ, ಅಧಿಕಾರಿಗಳು ಹಾಗೂ ನಗರಸಭೆ ಸದಸ್ಯರು ಜಾಣ ಕುರುಡರಂತಾಗಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಪೌರಾಯುಕ್ತರ ಗಮನಕ್ಕೆ ಬಾರದೇ ಬೃಹತ್ ಗಾತ್ರದ 13ಕ್ಕೂ ಹೆಚ್ಚು ಮರಗಳನ್ನು ಕತ್ತರಿಸಿ ಸಾಗಾಟ ಮಾಡಲಾಗುತ್ತಿದೆ. ಆದರೆ ಅಧಿಕಾರಿಗಳು ಹಾಗೂ ನಗರಸಭೆ ಸದಸ್ಯರು ಸುಮ್ಮನ್ನಿಸದ್ದು,ಸಾಕಷ್ಟು ಅನುಮಾನಗಳಿಗೆಕಾರಣವಾಗಿದೆ. ಬೆಸ್ಕಾಂ ಇಲಾಖೆ ಭಾಗಿ: ಮರಗಳ ಸಮೀಪದಲ್ಲಿ ಟ್ರಾನ್ಸ್‌ಪಾರ್ಮರ್ ಹಾಗೂ ವಿದ್ಯುತ್ ಕಂಬಗಳಿದ್ದು, ಭಾನುವಾರ ಅನುಮತಿ ಪಡೆಯದೇ ಮರಗಳನ್ನು ಕತ್ತರಿಸಿದವರಿಗೆ ಬೆಸ್ಕಾಂ ಅಧಿಕಾರಿಗಳು ಆ ಭಾಗದ ಬಡಾವಣೆಗೆ ವಿದ್ಯುತ್ ಕಡಿತಗೊಳಿಸಿ ತಂತಿಗಳನ್ನು ಕಳಚಿ ಸಹಾಯ ಮಾಡಿದೆ. ಇದರಿಂದ ಬೆಸ್ಕಾಂ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.
ಅನುಮತಿ ಇಲ್ಲ : ಮರಗಳನ್ನು ಕತ್ತರಿಸುವ ಮೊದಲು ಅರಣ್ಯ ಇಲಾಖೆಯಿಂದ ಮರಗಳಅಂದಾಜು ಮೌಲ್ಯ ನಿಗದಿ ಮಾಡಿ ಟೆಂಡರ್ ಕರೆದು ಅಧಿಕಾರಿಗಳ ಸಮ್ಮುಖದಲ್ಲಿ ಮರಗಳನ್ನು ತೆರವು ಮಾಡಬೇಕು. ಆದರೆ ಈ ಯಾವುದೇ ನಿಯಮಗಳನ್ನು ಪಾಲಿಸದೆ,ಮರಗಳನ್ನು ಏಕಾಏಕಿ ಕತ್ತರಿಸಿ ಸಾಗಾಟ ಮಾಡಿರುವುದುಕಾನೂನುಬಾಹಿರವಾಗಿದೆ.ನಗರಸಭೆ ಸ್ವತ್ತಿನಲ್ಲಿರುವ ಮರಗಳನ್ನು ಹಗಲಲ್ಲೇ ಕತ್ತರಿಸಿದರೂ, ಅಧಿಕಾರಿಗಳು ಮೌನವಾಗಿರುವುದು ಏಕೆ? ಇದರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪುರಸಭೆ ಮಾಜಿ ಸದಸ್ಯ ಕೇಶವಮೂರ್ತಿ ಪೌರಾಯುಕ್ತರಿಗೆ ಮನವಿ ನೀಡಿದ್ದಾರೆ.
ಪೈಪ್, ಗೋಡೆಗೆ ಹಾನಿ: ನೀರು ಸಂಗ್ರಹಣಾ ಕೇಂದ್ರದಲ್ಲಿ ಮರ ಕತ್ತರಿಸುವ ವೇಳೆ ಕೇಂದ್ರದ ಕಾಂಪೌಂಡ್ ಗೋಡೆಗಳು ಹಾಗೂ ವಿವಿಧ ಬಡವಾಣೆಗೆ ಸಂಪರ್ಕ ಕಲ್ಪಿಸುವ ಪೈಪ್‌ಗ್ಳಿಗೆ ಹಾನಿ ಮಾಡಿರುವ ಪರಿಣಾಮ ಬಡವಾಣೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ.
ನಗರಸಭೆಗೆ ಬಾರದ ಜಿಲ್ಲಾಧಿಕಾರಿ : ನಗರ ಸಭೆ ಆಡಳಿತಾಧಿಕಾರಿಗಳಾಗಿ ಜಿಲ್ಲಾಧಿಕಾರಿ ಪಿಎನ್ ರವೀಂದ್ರರವರನ್ನು ನೇಮಕ ಮಾಡಿದ ನಂತರ ಒಂದು ಬಾರಿಯೂ ಬಂದಿಲ್ಲ. ಇದನ್ನು ಲಾಭವಾಗಿ ಪಡೆದ ಕೆಲ ಅಧಿಕಾರಿಗಳು ಪೌರಾ ಯುಕ್ತರ ಗಮನಕ್ಕೆ ಬಾರದಂತೆ ಇಂತಹ ಹಲವು ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ತಕ್ಷಣ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ, ನಗರಸಭೆಕಳ್ಳರ ಸಂತೆಯಾಗಲಿದೆ ಎಂದು ಸ್ಥಳೀಯಮುಖಂಡ ಕೇಶವಮೂರ್ತಿ ಹಾಗೂ ಸುಭ್ರ ಮಣಿ ಸೇರಿದಂತೆ ವಿವಿಧ ಮುಖಂಡರು ಒತ್ತಾಯ ಮಾಡಿದ್ದಾರೆ.
ಮರಗಳನ್ನು ಕತ್ತರಿಸಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಮರಗಳನ್ನು ಕತ್ತರಿಸಿರುವುದುಕಾನೂನು ಬಾಹಿರ. ಪೊಲೀಸ್ ಹಾಗೂಅರಣ್ಯ ಇಲಾಖೆಗೆ ದೂರು ನೀಡಲಾಗುವುದು. – ಮಂಜುನಾಥ ಸ್ವಾಮಿ, ಪೌರಾಯುಕ್ತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.