ಮೇಲ್ದರ್ಜೆಗೇರಿಸಲಾದ ಉತ್ತರ ರನ್‌ವೇ ಕಾರ್ಯಾರಂಭ
Team Udayavani, Mar 26, 2021, 12:30 PM IST
ದೇವನಹಳ್ಳಿ: ತಾಲೂಕಿನ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೀಕರಿಸಲಾದ ಮತ್ತು ಮೇಲ್ದರ್ಜೆಗೆ ಏರಿಸಲಾದ ಉತ್ತರ ರನ್‌ವೇ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶ ನಾಲಯದಿಂದ(ಡಿಜಿಸಿಎ) ಒಪ್ಪಿಗೆ ಪಡೆದು ಕೊಳ್ಳುವುದರೊಂದಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರಿ (ಕೆಐಎಬಿ/ ಬೆಂಗಳೂರು ವಿಮಾನ ನಿಲ್ದಾಣ)ನಲ್ಲಿ ನವೀಕರಿಸಲಾದ ಮತ್ತು ಮೇಲ್ದರ್ಜೆಗೇರಿಸಲಾದ ಉತ್ತರ ರನ್‌ವೇ ಇಂದಿನಿಂದ ಕಾರ್ಯಾರಂಭ ಮಾಡಿದೆ.
ಜೂನ್ 2020ರಿಂದ ಕಾರ್ಯಾಚರOಗಳೆ ನ್ನು ನಿಲ್ಲಿಸಿದ್ದ ಉತ್ತರ ರನ್‌ವೇನ ನವೀಕರಣಕಾರ್ಯದಲ್ಲಿ ಮೇಲ್ಮೆ çಯನ್ನು ಹೊಸ ಆಸ್‌ಫಾಲ್ಟ್ ಪದರಗಳೊಂದಿಗೆ ದೃಢಪಡಿಸುವುದುಅಲ್ಲದೆ, ಎರಡು ನೂತನ ಟ್ಯಾಕ್ಸಿ ಮಾರ್ಗಗಳ ಸೇರ್ಪಡೆ ಸೇರಿದ್ದು, ಇದರಿಂದ ರನ್‌ವೇಕಾರ್ಯಾಚರಣೆ ಹೆಚ್ಚಿನ ಕಾರ್ಯಕ್ಷಮತೆ ಯೊಂದಿಗೆ ನಡೆಯಲು ಅವಕಾಶವಾಗುತ್ತದೆ. ಕ್ಯಾಟ್ ಒನ್ ಎಂಬ ವರ್ಗೀಕರಣವನ್ನು ಮುಂದುವರಿಸಲಿದೆ. ಆದರೆ, ಎಲ್‌ಇಡಿ ರನ್‌ವೇ ಸೆಂಟರ್ ಲೈನ್ ಲೈಟಿಂಗ್, ಇನ್‌ಸೆಟ್ ರನ್‌ವೇ ಎಡ್ಜ್ ಲೈಟ್ಸ್‌ಮತ್ತು ಟ್ಯಾಕ್ಸಿ ವೇ ಸೆಂಟರ್‌ಲೈನ್ ಲೈಟಿಂಗ್‌ಮತ್ತು ಎರಡು ಹೊಸ ಮಿಡ್‌ಪಾಯಿಂಟ್ ಟ್ರ್ಯಾನ್ಸ್‌ಮಿಸೊಮೀಟರ್‌ಗಳ ನೂತನ ಅಳವಡಿಕೆಯೊಂದಿಗೆ ರನ್‌ವೇಯನ್ನು ವಿತರಿಸಲಾಗಿದೆ. ಈ ಎಲ್ಲಾ ಸ್ಥಾಪನೆಗಳು ಇದೇ ವರ್ಷ ಕೆಲ ಸಮಯದಲ್ಲಿ ಕಾರ್ಯಾರಂಭ ಮಾಡಲಿವೆ. ದಕ್ಷಿಣ ರನ್‌ವೇ ಡಿಸೆಂಬರ್ 06,2019ರಿಂದ ಕಾರ್ಯಾಚರಣೆ ಆರಂಭಿಸಿದ್ದು, ಈ ವಿಸ್ತರಣೆಗಳು ಬೆಂಗಳೂರು ವಿಮಾನನಿಲ್ದಾಣದಲ್ಲಿ ಕಡಿಮೆ ದೃಶ್ಯ ಸಾಧ್ಯತೆ ಇದ್ದರೂ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿದ್ದರೂ ಕಾರ್ಯಾಚರಣೆ ನಡೆಸುವ ಸಡಿಲತೆ ನೀಡಲಿವೆ.
ವಿಸ್ತರಿಸಲಾದ ಉಪಕರಣಸೌಲಭ್ಯಗಳಿಂದಾಗಿ ಉತ್ತರ ರನ್‌ವೇನಲ್ಲಿ ರನ್‌ವೇ ದೃಶ್ಯ ಸಾಧ್ಯತೆಯ ಶ್ರೇಣಿ(ಆರ್‌ವಿಆರ್)125 ಮೀಟರ್‌ಗಳು ಮತ್ತು ನೆಲದ ಮೇಲೆ 550 ಮೀಟರ್‌ಗಳಷ್ಟು ಆರ್‌ವಿಆರ್ ಗಳಲ್ಲಿವಿಮಾನ ಆಗಸಕ್ಕೆ ಹಾರಬಹುದಾದ ಅವಕಾಶಮಾಡಿಕೊಡುತ್ತವೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸುವಎರಡು ರನ್‌ವೇಗಳು ಕರ್ನಾಟಕ ಮತ್ತುಭಾರತದ ಬೆಳವಣಿಗೆಗೆ ಚಾಲನೆ ನೀಡುವುದಲ್ಲದೆ, ಹೆಚ್ಚುತ್ತಿರುವ ಬೇಡಿಕೆಯನ್ನುಪೂರೈಸಲು ಅಗತ್ಯ ಪ್ರೇರೇಪಣೆಯನ್ನು ನೀಡಲಿವೆ. ಬೆಂಗಳೂರು ವಿಮಾನ ನಿಲ್ದಾಣವನ್ನುಭಾರತದ ನೂತನ ಪ್ರವೇಶದ್ವಾರವಾಗಿಪರಿವರ್ತಿಸಲು ಬಿಐಎಎಲ್ ಹೊಂದಿರುವದೃಷ್ಟಿಕೋನವನ್ನು ಈ ಎರಡು ರನ್‌ವೇಗಳುಮತ್ತಷ್ಟು ವರ್ಧಿಸಲಿವೆ ಎಂದು ಬಿಐಎಎಲ್ ವಕ್ತಾರರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.