ಸಿಂಗೇನ ಅಗ್ರಹಾರದಲ್ಲಿ ತರಕಾರಿ ಮಾರಾಟ ಡಲ್
Team Udayavani, Apr 30, 2021, 1:24 PM IST
ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಕಲಾಸಿ ಪಾಳ್ಯದಲ್ಲಿರುವತರಕಾರಿ ಮಾರುಕಟ್ಟೆಯನ್ನು ಬ್ಯಾಟರಾಯನಪುರಮತ್ತು ಸಿಂಗೇನ ಅಗ್ರಹಾರಕ್ಕೆ ಸ್ಥಳಾಂತರಿಸಿದೆ. ಆದರೆಸಿಂಗೇನ ಅಗ್ರಹಾರ ಮಾರುಕಟ್ಟೆ ಪ್ರಾಂಗಣದಲ್ಲಿವ್ಯಾಪಾರವಿಲ್ಲದೆ ಮಾರಾಟಗಾರರು ಕಂಗಾಲಾಗಿದ್ದಾರೆ. ಸೋಮವಾರದಿಂದ ಮಾರುಕಟ್ಟೆಸ್ಥಳಾಂತರವಾಗಿದ್ದು ವ್ಯಾಪಾರ ಹೇಳಿ ಕೊಳ್ಳುವಂತಿಲ್ಲ.
ಕೊಳ್ಳುವವರಿಲ್ಲದೆ ಗುರುವಾರ ಸುಮಾರು 100ಟನ್ ತರಕಾರಿ ಹಾಗೆಯೇ ಮಾರುಕಟ್ಟೆಯಲ್ಲಿಉಳಿದಿದೆ.ಕೊರೊನಾ ಹೆಚ್ಚಳದಿಂದಾಗಿ ಕಲಾಸಿಪಾಳ್ಯಮಾರುಕಟ್ಟೆ ಸ್ಥಳಾಂತರ ಮಾಡಲಾಗಿದೆ. ಆದರೆಬೆಳಗ್ಗೆ 6 ಗಂಟೆಯಿಂದ 10 ಗಂಟೆಯೊಳಗೆವ್ಯಾಪಾರ ಮುಗಿಸಬೇಕಾಗಿದೆ. ಆ ಹಿನ್ನೆಲೆಯಲ್ಲಿವ್ಯಾಪಾರ ಹೇಳಿ ಕೊಳ್ಳುವಂತಿಲ್ಲ ಎಂದು ತರಕಾರಿವರ್ತಕ ಬಿ.ಜೆ.ಖಾದರ್ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಸೇರಿದಂತೆ ವಿವಿಧಕಡೆಗಳಿಂದ ತರಕಾರಿ ಮಾರುಕಟ್ಟೆ ಪ್ರವೇಶಿಸುತ್ತದೆ.ರೈತರಿಂದ ಖರೀದಿಸಿ ನಾವು ಇತರೆ ವ್ಯಾಪಾರಿಗಳಿಗೆಮಾರಾಟ ಮಾಡುವ ವೇಳೆಗಾಗಲೇ ಸರ್ಕಾರನೀಡಿರುವ ವ್ಯಾಪಾರದ ಗಡುವು ಮುಗಿದಿರುತ್ತದೆ.ಆ ಹಿನ್ನೆಲೆಯಲ್ಲಿ ವ್ಯಾಪಾರ ವಾಹಿವಾಟು ಇಲ್ಲವೇಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಾರಾಟಕ್ಕೆ ಮತ್ತಷ್ಟು ವಿನಾಯ್ತಿ ನೀಡಿ: ಈ ಬಗ್ಗೆಪ್ರತಿಕ್ರಿಯೆ ನೀಡಿರುವ ಕಲಾಸಿಪಾಳ್ಯ ತರಕಾರಿಮತ್ತು ಹಣ್ಣು ಸಗಟು ವರ್ತಕರ ಸಂಘ ಅಧ್ಯಕ್ಷಆರ್.ವಿ.ಗೋಪಿ, ರೈತರು ಬೆಳೆದ ತರಕಾರಿಗಳು,ಹಣ್ಣು ಹಂಪಲುಗಳು ಮಾರಾಟವಾಗದೇಮಾರುಕಟ್ಟೆಯಲ್ಲಿ ಹಾಳಾಗುತ್ತಿವೆ.
ಆ ಹಿನ್ನೆಲೆಯಲ್ಲಿಮಾರಾಟದ ವೇಳೆಯನ್ನು ಬೆಳಗ್ಗೆ 6 ರಿಂದ 12ಗಂಟೆ ವರೆಗೆ ವಿಸ್ತರಿಸುವಂತೆ ಮನವಿ ಮಾಡಲಾಗಿದೆಎಂದು ಹೇಳಿದ್ದಾರೆ.
ಹಲವು ವರ್ತಕರಿಗೆ ಪಾಸ್ ಸಿಕ್ಕಿಲ್ಲ: ತರಕಾರಿಮಾರಾಟಗಾರರಿಗೆ ಅನುಕೂಲವಾಗ ಎಂಬಉದ್ದೇಶದಿಂದ ಕೃಷಿ ಉತ್ಪನ್ನ ಮಾರಾಟ ಸಮಿತಿಪಾಸ್ ವಿತರಣೆ ಮಾಡಿದೆ. ಆದರೆ ಹಲವುವರ್ತಕರಿಗೆ ಪಾಸ್‌ಗಳು ಕೂಡ ದೊರೆತಿಲ್ಲ.
ಹೀಗಾಗಿಹಲವು ಮಾರಾಟಗಾರರು ತೊಂದರೆಯನ್ನುಅನುಭವಿಸುತ್ತಿದ್ದಾರೆ. ಈ ಸಂಬಂಧ ಸಂಬಂಧಪಟ್ಟಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದುಕಲಾಸಿಪಾಳ್ಯ ತರಕಾರಿ ಮತ್ತು ಹಣ್ಣು ಸಗಟುವರ್ತಕರ ಸಂಘ ಒತ್ತಾಯಿಸಿದೆ.
ಫುಟ್ಬಾತ್ ಮೇಲೆ ವ್ಯಾಪಾರಕ್ಕೆ ಅವಕಾಶಕಲ್ಪಿಸಬಾರದು: ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿಕೆಲವರು ಪುಟಾ³ತ್ ಮೇಲೆ ತರಕಾರಿ ವ್ಯಾಪಾರಮಾಡುತ್ತಿದ್ದಾರೆ. ಇದಕ್ಕೆ ಬಿಬಿಎಂಪಿ ಅಧಿಕಾರಿಗಳುಅವಕಾಶ ನೀಡಬಾರದು ಎಂದು ಕಲಾಸಿಪಾಳ್ಯತರಕಾರಿ ಮತ್ತು ಹಣ್ಣು ಸಗಟು ವರ್ತಕರ ಸಂಘದಕಾರ್ಯದರ್ಶಿ ವಿಜಯಕುಮಾರ್ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.