ಸ್ಮಶಾನ ಜಾಗಕ್ಕೆ ಆಗ್ರಹಿಸಿ ಗ್ರಾಮಸ್ಥರ ಮನವಿ


Team Udayavani, Nov 23, 2022, 1:09 PM IST

tdy-6

ಆನೇಕಲ್‌: ನೆರಳೂರು, ಗುಡ್ಡಹಟ್ಟಿ ಗ್ರಾಮಗಳಲ್ಲಿ ಸ್ಮಶಾನದ ಸಮಸ್ಯೆ ಇದ್ದು, ಜೀವನದ ನಂತರದ ಸಮಾಧಿಯನ್ನು ಕಟ್ಟಿಕೊಳ್ಳಲು ಸ್ಥಳ ಗುರುತಿಸಿ ಕೊಡಬೇಕೆಂದು ಆಗ್ರಹಿಸಿ, ತಹಶೀಲ್ದಾರ್‌ ಶಿವಪ್ಪ ಲಮಾಣಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಆನೇಕಲ್‌ ತಾಲೂಕಿನ ಆದಿಗೊಂಡನಹಳ್ಳಿಯಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಕಾರ್ಯಕ್ರಮದಲ್ಲಿ ಸುತ್ತಮುತ್ತಲ ಹಳ್ಳಿಗಳಿಂದಆಗಮಿಸಿದ ಜನರು, ತಹಶೀಲ್ದಾರ್‌ ಶಿವಪ್ಪ ಲಮಾಣಿಅವರಲ್ಲಿ ಸಮಸ್ಯೆಗಳ ಸರಮಾಲೆ ಮುಂದಿಟ್ಟು ಕೂಡಲೇಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಗ್ರಾಮಸ್ಥರು, ಮುತ್ತಾ ನಲ್ಲೂರು ಕೆರೆಗೆ ಕೈಗಾರಿಕೆಗಳ ತ್ಯಾಜ್ಯ ನೀರು ಹರಿಯುತ್ತಿದ್ದು, ಸುತ್ತಮುತ್ತಲಿನ ಕೆರೆಗಳು ಕಲುಷಿತವಾಗಿವೆ. ಆದ್ದರಿಂದ ಕೆರೆಗೆ ಸೇರುವ ತ್ಯಾಜ್ಯ ನೀರು ಹರಿಯುವುದನ್ನು ತಡೆಯಬೇಕು. ಬೆಂಡಿಗಾನಹಳ್ಳಿಯಲ್ಲಿ ಚರಂಡಿ ಹಾಗೂ ಬೀದಿದೀಪಗಳ ವ್ಯವಸ್ಥೆ ಶೀಘ್ರ ಮಾಡಿ ಕೊಡಬೇಕು. ಸಮೀಪದ ಅಂಬೇಡ್ಕರ್‌ನಗರದಲ್ಲಿ ಒಳಚರಂಡಿ ವ್ಯವಸ್ಥೆ ಅವಶ್ಯಕತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಶಾಲಾ ವಿದ್ಯಾರ್ಥಿಗಳ ಮನವಿ: ವಿಶೇಷವೆಂದರೇ ಸಭೆಗೆ ಆಗಮಿಸಿದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು, ಇತ್ಛಂಗೂರು-ಮಂಚನಹಳ್ಳಿ ರಸ್ತೆ ಸರಿಪಡಿಸುವಂತೆ ಮನವಿ ಸಲ್ಲಿಸಿ ಮಾತನಾಡಿ, ಕಿರಿದಾದ ದಾರಿಯಲ್ಲಿ ನಡೆಯಬೇಕಾದರೇ ಕಿರಿಕಿರಿ ಆಗುತ್ತಿದ್ದು, ಮಳೆಗಾಲದಲ್ಲಿ ತುಂಬಾ ತೊಂದರೆ ಆಗುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳದಲ್ಲೇ ಆದೇಶ ನೀಡಿ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿ ಕೊಡಿ ಎಂದು ಮನವಿ ಮಾಡಿದರು.

ಶೀಘ್ರ ಕ್ರಮ ಕೈಗೊಳ್ಳುವೆ: ತಹಶೀಲ್ದಾರ್‌ ಶಿವಪ್ಪ ಎಚ್‌. ಲಮಾಣಿ ಮಾತನಾಡಿ, ಪ್ರತಿ ಗ್ರಾಮಗಳಿಗೂ ಸ್ಮಶಾನವನ್ನು ಗುರುತಿಸಿ ಕೊಡುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಸರ್ಕಾರಿ ಜಾಗ ಗುರುತಿಸಲಾಗುವುದು.ಇಲ್ಲವಾದಲ್ಲಿ ಮಾರುಕಟ್ಟೆ ಬೆಲೆಯಲ್ಲಿ ಜಮೀನನ್ನುಖರೀದಿ ಮಾಡಿಯಾದರೂ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಕೆರೆಗೆ ತ್ಯಾಜ್ಯ ಬರದಂತೆಸಂರಕ್ಷಿಸಲು ಉತ್ಛ ನ್ಯಾಯಾಲಯ ಆದೇಶ ನೀಡಿದ್ದು,ಶೀಘ್ರ ಕ್ರಮ ವಹಿಸಲಾಗುವುದು. ಶಾಲಾ-ವಿದ್ಯಾರ್ಥಿ ಗಳ ಮನವಿಯನ್ನು ಕೂಡಲೇ ಪರಿಶೀಲಿಸುವುದಾಗಿ ಹೇಳಿದರು.

ನೆರಳೂರು ಗ್ರಾಪಂ ಅಧ್ಯಕ್ಷೆ ಭಾರತಿ ನಾಗರಾಜು, ಉಪಾಧ್ಯಕ್ಷ ಶಶಿಕುಮಾರ್‌, ತಾಪಂ ಡಿಡಿಅನಿಲ್‌ ಕುಮಾರ್‌, ಟಿಎಚ್‌ಒ ಡಾ. ರವಿ, ಬಿಇಒ ಜೆ.ಎಂ. ಜಯಲಕ್ಷ್ಮೀ, ಕೃಷಿ ಅಧಿಕಾರಿ ಧನಂಜಯ, ಸಿಡಿಪಿಒ ಕವಿತಾ, ಪಿಡಿಒ ಶಶಿಕಿರಣ್‌ ಇದ್ದರು.

ಟಾಪ್ ನ್ಯೂಸ್

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ!

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾ*ಚಾರ!

22-bantwala-5

Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ

7

BBK11: ತಾಯಿಯನ್ನು ನೆನೆದು ಬಿಗ್‌ ಬಾಸ್‌ ವೇದಿಕೆಯಲ್ಲೇ ಕಣ್ಣೀರಿಟ್ಟ ಕಿಚ್ಚ ಸುದೀಪ್

21-ptr

Puttur: ಮುಂಜಾನೆ 3 ಗಂಟೆಗೆ ನಡೆಯಿತು ಅಗಲಿದವರಿಗೆ ಅವಲಕ್ಕಿ ಸಮರ್ಪಣೆ!

20-kadaba

ಮರ ಬಿದ್ದು ಸವಾರ ಸಾವು; ಅಪಾಯಕಾರಿ ಮರ ತೆರವಿಗೆ ಅಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ

Jammu Kashmir: Two terrorists hit in an encounter

Jammu Kashmir: ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

9-bng

Channapatna: ಸಾಲಕ್ಕೆ ಹೆದರಿ ದಂಪತಿ ನೇಣಿಗೆ ಶರಣು

7

Arrested: ಪಾಕ್‌ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್‌ಪಿನ್‌ ಸೆರೆ

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ

Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

23-balindra

Deepawali: ಸುಳ್ಯದಲ್ಲಿ ಗಮನ ಸೆಳೆದ ಬಲೀಂದ್ರ ಅಲಂಕಾರ ಸರ್ಧೆ

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ!

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾ*ಚಾರ!

22-bantwala-5

Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.