ಸಂತೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ


Team Udayavani, Apr 11, 2021, 2:29 PM IST

ಸಂತೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ

ನೆಲಮಂಗಲ: ನಗರದ ಸೊಂಡೆಕೊಪ್ಪ ಬೈಪಾಸ್‌ ಬಳಿಯ ಅಂಬೇಡ್ಕರ್‌ ನಗರದಸಮೀಪ ಪ್ರತಿ ವಾರ ನಡೆಯುವ ಸಂತೆಯಲ್ಲಿಸಾವಿರಾರು ಮೇಕೆಕುರಿ ಮಾರಾಟಗಾರರುಹಾಗೂ ಖರೀದಿದಾರರು ಯುಗಾದಿ ಹಬ್ಬ ನಾಲ್ಕು ದಿನ ಬಾಕಿ ಇರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಯುಗಾದಿ ಹಬ್ಬದ ಹಿನ್ನೆಲೆ ಕುರಿಮೇಕೆ ಮಾರಾಟ ಹಾಗೂ ಖರೀದಿಗಾಗಿ ಜನರುಸಂತೆಗೆ ಮುಗಿಬಿದ್ದು ಕೋವಿಡ್ ನಿಯಮಕ್ಕೆಎಳ್ಳುನೀರು ಬಿಟ್ಟಿದ್ದರು. ಮಾಹಿತಿ ತಿಳಿದ ತಹಶೀಲ್ದಾರ್‌ ದಾಳಿ ನಡೆಸಿ, ದಂಡ ಪ್ರಯೋಗ ಮಾಡಿದರು. ನಿಯಂತ್ರಣ ಮಾಡಲು ಬಂದ ಪೊಲೀಸರ ವಿರುದ್ಧವೇ ತಿರುಗಿ ಬಿದ್ದ ಜನರು, ಮೊದಲು ರಾಜಕಾರಣಿಗಳ ಕಾರ್ಯಕ್ರಮಗಳು, ರ್ಯಾಲಿಗಳನ್ನುನಿಲ್ಲಿಸಿ ಆನಂತರ ರೈತರ ಬರುವ ಸಂತೆಗಳನ್ನು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊಟ್ಟೆ ಮೇಲೆ ಹೊಡೆಯಬೇಡಿ: ನಗರಸಭೆ, ಕಂದಾಯ ಅಧಿಕಾರಿಗಳು ಸಂತೆಯಲ್ಲಿ ಮಾಸ್ಕ್ಹಾಕದವರಿಗೆ ದಂಡ ಹಾಕಲು ಮುಂದಾದಕಾರಣ, ಕೆಲವು ಜನರು ಅಧಿಕಾರಿಗಳ ವಿರುದ್ಧವೇತಿರುಗಿ ಬಿದ್ದು ದಂಡ ಕಟ್ಟುವುದಿಲ್ಲ ಏನಾದರೂಮಾಡಿ, ಮೊದಲು ನೀವು ನಿಯಮ ಪಾಲಿಸಿಜನರ ಹೊಟ್ಟೆಯ ಮೇಲೆ ಹೊಡೆಯಬೇಡಿ ಎಂದು ಅಧಿಕಾರಿಗಳ ವಿರುದ್ಧವೇ ತಿರುಗಿಬಿದ್ದರು.

ಭರ್ಜರಿ ವ್ಯಾಪಾರ: ಕೋವಿಡ್ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ ಸರಕಾರ ಕಟ್ಟುನಿಟ್ಟಿನಆದೇಶವನ್ನು ಜಾರಿಗೆ ತಂದರೂ ಜನರು ಮಾತ್ರಹಬ್ಬದ ಆಚರಣೆಗೆ ಕುರಿಮೇಕೆಗಳ ಖರೀದಿಗೆಮುಗಿಬಿದ್ದಿದ್ದು, ನಗರದ ಸಂತೆಯಲ್ಲಿ ಕುರಿಮೇಕೆ ವ್ಯಾಪಾರ ಭರ್ಜರಿಯಾಗಿ ನಡೆಯಿತು.

ತಹಶೀಲ್ದಾರ್‌ ದಾಳಿ : ಕುರಿಮೇಕೆ ಸಂತೆಯಲ್ಲಿ ಜನಜಂಗುಳಿ ಹೆಚ್ಛಾಗಿ ಕೊರೊನಾ ನಿಯಮ ಗಾಳಿಗೆ ತೂರಿದ ಬಗ್ಗೆ ಮಾಹಿತಿ ತಿಳಿದ ತಹಶೀಲ್ದಾರ್‌ ಮಂಜುನಾಥ್‌ ದಿಢೀರ್‌ ದಾಳಿ ನಡೆಸಿ ಮಾಸ್ಕ್ ಹಾಕದವರೆಗೆ ಹಾಗೂ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಿದರು.

ಜನರಿಗೆ ದಂಡ: ನಗರದ ಬಸವಣ್ಣ ದೇವರಮಠದ ರಸ್ತೆ, ಸೊಂಡೆಕೊಪ್ಪ ಬೈಪಾಸ್‌ ಕುರಿಮೇಕೆ ಸಂತೆಯಲ್ಲಿ ಮಾಸ್ಕ್ ಧರಿಸದ 46 ಜನರಿಗೆ 100 ರೂ., 150 ರೂ., 250 ರೂ.ನಂತೆ ದಂಡವಿಧಿಸಲಾಗಿದ್ದು, ತಹಶೀಲ್ದಾರ್‌ ಹಾಗೂ ನಗರಸಭೆಯ ಪೌರಾಯುಕ್ತ ನೇತೃತ್ವದಲ್ಲಿ6300 ರೂ. ದಂಡವಸೂಲಿ ಮಾಡಿ ದಂಡ ಕಟ್ಟಿ ದವರಿಗೆ ಮಾಸ್ಕ್ ವಿತರಣೆ ಮಾಡಿದರು.

ಯಥಾಸ್ಥಿತಿ ಸಂತೆ: ಅಧಿಕಾರಿಗಳ ದಂಡವಿಧಿಸಿದರೂ ಸಂತೆ ಯಥಾಸ್ಥಿತಿ ನಡೆಯಿತು, ಸಾವಿರಾರು ಜನರು ಸಾಮಾಜಿಕ ಅಂತರ ಮರೆತು ಖರೀದಿಯಲ್ಲಿ ಭಾಗವಹಿಸಿದ್ದರು. ಕಟ್ಟುನಿಟ್ಟಿನ ಆದೇಶ ಪೇಪರ್‌ಗೆ ಮಾತ್ರ ಸೀಮಿತವಾಗಿದ್ದು, ಜನರು ಪಾಲನೆ ಮಾಡಲು ಸಹ ಮುಂದಾಗುತ್ತಿಲ್ಲ.

 

ಟಾಪ್ ನ್ಯೂಸ್

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

4

Crime: ರೌಡಿಶೀಟರ್‌ ಕೊಲೆ ಯತ್ನ; ಆರೋಪಿಗೆ ಗುಂಡೇಟು

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

11

Lack of Bus stand: ಹೊಸಕೋಟೆ; ಬಸ್‌ ನಿಲ್ದಾಣವಿಲ್ಲದೆ ಪರದಾಟ!

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.