ದೇಶಕ್ಕೆ ವಿಶ್ವೇಶ್ವರಯ್ಯ ಕೊಡುಗೆ ಅಪಾರ; ತಾಪಂ ಇಒ ವಸಂತ್‌ಕುಮಾರ್
ನಡೆ-ನುಡಿಯಲ್ಲಿ ಆದರ್ಶ ಪಥ ಅನುಸರಿಸಿದ ಅವರ ಜೀವನ ಸದಾಕಾಲಕ್ಕೂ ಪ್ರೇರಣದಾಯಕ
Team Udayavani, Sep 16, 2022, 4:19 PM IST
ದೇವನಹಳ್ಳಿ: ಜೀವನಾಡಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟುವ ಮಹಾ ಕಾರ್ಯಕ್ಕೆ ಪ್ರಮುಖ ಶಕ್ತಿಯಾಗಿ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ನಿಂತು ಕೆಲಸ ಪೂರೈಸಿದ್ದರು ಎಂದು ತಾಪಂ ಇಒ ಎಚ್. ಡಿ. ವಸಂತ್‌ಕುಮಾರ್ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ತಾಪಂ ಮತ್ತು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಎಂಜಿನಿಯರ್ ವತಿಯಿಂದ ಹಮ್ಮಿಕೊಂಡಿದ್ದ ಸರ್ ಎಂ. ವಿಶ್ವೇಶರಯ್ಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸರ್ ಎಂವಿ ಜೀವನಪೂರ್ತಿ ಜನರಿಗಾಗಿ ಬದುಕಿದ್ದಾರೆ. ಅಣೆಕಟ್ಟು ಕಟ್ಟಿದ್ದು ಮಾತ್ರವಲ್ಲದೆ, ಅನೇಕ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡಿದ್ದರು. ಅವರ ಕೊಡುಗೆ ಅಪಾರವಾದದ್ದು ಎಂದರು.
ರಾಜ್ಯಕ್ಕೆ ಅದ್ಭುತ ಕೊಡುಗೆ: ಒಂದು ರಾತ್ರಿ ವಿಶ್ವೇಶ್ವರಯ್ಯನವರು ಮೇಣದ ಬತ್ತಿ ಹಚ್ಚಿಕೊಂಡು ಕೆಲಸ ಮಾಡುತ್ತಿದ್ದರು. ಮೇಣದ ಬತ್ತಿಯಲ್ಲಿ ಓದಿ ದೇಶ ಮತ್ತು ರಾಜ್ಯಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ಅವರು ಹಾಕಿಕೊಟ್ಟಂತಹ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು. ನಾಡು ಕಂಡ ಶ್ರೇಷ್ಠ ಎಂಜಿನಿಯರ್, ಆಡಳಿತಗಾರರಾಗಿದ್ದರು. ನಡೆ-ನುಡಿಯಲ್ಲಿ ಆದರ್ಶ ಪಥ ಅನುಸರಿಸಿದ ಅವರ ಜೀವನ ಸದಾಕಾಲಕ್ಕೂ ಪ್ರೇರಣದಾಯಕ ಎಂದರು.
ರಾಜ್ಯದ ಅಭಿವೃದ್ಧಿ: ದೇಶ, ರಾಜ್ಯದ ಅಭಿವೃದ್ಧಿ ನಿಟ್ಟಿನಲ್ಲೂ ಕಾರ್ಯ ಕೈಗೊಂಡರು. ಭಾಷೆ, ಸಾಹಿತ್ಯ, ಶಿಲ್ಪಕಲೆ ಮತ್ತಿತರ ಕ್ಷೇತ್ರಗಳಲ್ಲಿ ನಾಡು ಏನಾದರೂ ಸಾಧಿಸಬೇಕಾದರೆ ಮೊದಲು ಭೌತಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಬೇಕೆಂಬ ಧ್ಯೇಯವನ್ನು ಇರಿಸಿಕೊಂಡಿದ್ದರು ಎಂದು ಹೇಳಿದರು.
ದೇಶ, ರಾಜ್ಯದ ಬಗ್ಗೆ ಕಾಳಜಿ: ತಾಪಂ ಸಹಾಯಕ ನಿರ್ದೇಶಕ ಸುನಿಲ್ ಮಾತನಾಡಿ, ಒಬ್ಬ ಎಂಜಿನಿಯರ್ ಆಗಿ ಅವರು ಕಟ್ಟಡ, ನಗರ, ನೀರಾವರಿ ಯೋಜನೆ ಗಳನ್ನು ಮಾತ್ರ ರೂಪಿಸಲಿಲ್ಲ. ದೇಶ ಮತ್ತು ಕರ್ನಾಟಕದ ಭವಿಷ್ಯದ ಬಗ್ಗೆ ಕಾಳಜಿ ಇಟ್ಟುಕೊಂಡು ಅನೇಕ ಕಾರ್ಯ ಗಳನ್ನು ಕೈಗೆತ್ತಿಕೊಂಡರು. ಇವರ ಆದರ್ಶ ಜೀವನವೇ ನಮಗೆ ದಾರಿದೀಪ ಎಂದು ಹೇಳಿದರು. ಎಂಜಿನಿಯರ್ ಚೈತ್ರಾ, ಅರ್ಜುನ್, ಪ್ರಶಾಂತ್, ಎಂ. ಹರ್ಷಿತಾ, ರಕ್ಷಿತಾ, ಪ್ರಶಾಂತ್, ಪ್ರಮೋದ್, ಅನಂತ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.