ಪಟ್ಟಿಯಿಂದ ಕೈಬಿಟ್ಟದ್ದರಿಂದ ಮತದಾರರ ಆಕ್ರೋಶ
Team Udayavani, May 13, 2018, 1:04 PM IST
ನೆಲಮಂಗಲ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಬಹುತೇಕ ಶಾಂತಿಯುತ ಮತದಾನವಾದರೆ ಕೆಲಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಮತದಾರರ ನಡುವೆ ನಡೆದ ವಾಗ್ವಾದ ಮತಗಟ್ಟೆಗಳಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.
ಪಟ್ಟಣದ ಜಿಲ್ಲಾಪಂಚಾಯತಿ ಕಚೇರಿ ಆವರಣದಲ್ಲಿರುವ ಮೂರು ಮತಗಟ್ಟೆ ಕೇಂದ್ರಗಳಲ್ಲಿ ಪುರಸಭೆ ವ್ಯಾಪ್ತಿಯ 20 ಮತ್ತು 21ನೇ ವಾರ್ಡ್‌ಗಳ ಮತದಾರರು ಮತದಾನ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು.
ಆದರೆ, 21ನೇ ವಾರ್ಡ್‌ನ ವಿಜಯನಗರದ ನಿವಾಸಿಗಳು ಸೇರಿದಂತೆ ಆಸುಪಾಸಿನ ಬಡಾವಣೆಗಳಲ್ಲಿರುವ ಸುಮಾರು 60ರಿಂದ 100ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಕೈಬಿಟ್ಟ ಹಿನ್ನೆಲೆಯಲ್ಲಿ ಮತದಾರರು ಮತಗಟ್ಟೆ ಅಧಿಕಾರಿಗಳ ಮೇಲೆ ಮುಗಿಬಿದ್ದ ಕಾರಣಕ್ಕೆ ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ಕೆಲ ಕುಟುಂಬಗಳಲ್ಲಿ ಪತ್ನಿಯ ಮತವಿದ್ದರೆ ಪತಿಯ ಮತವಿರಲಿಲ್ಲ. ಮತ್ತೆಕೆಲ ಭಾಗಗಳಲ್ಲಿ ಮಕ್ಕಳ ಮತಗಳು, ಪೋಷಕರ ಮತಗಳಿಲ್ಲದ ಕಾರಣಕ್ಕೆ ಒಟ್ಟಾಗಿ ಬಂದಿದ್ದ ಕುಟುಂಬ ಸದಸ್ಯರ ಆಕ್ರೋಶಕ್ಕೆ ಮತಗಟ್ಟೆ ಅಧಿಕಾರಿಗಳು ತತ್ತರಿಸಿ ಹೋದರು.
ಪಟ್ಟುಹಿಡಿದ ಮತದಾರರು: ಕಳೆದ ಹಿಂದಿನ ಚುನಾವಣೆಗಳಲ್ಲಿ ನಾವುಗಳು ಮತದಾನವನ್ನು ಮಾಡಿದ್ದೇವೆ. ನಮ್ಮ ಬಳಿಯಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದೇವೆ. ಮತಗಟ್ಟೆ ಅಧಿಕಾರಿಗಳು ಮತ್ತು ಬಿಎಲ್‌ಒಗಳ ಬೇಜವಾಬ್ದಾರೀತನದಿಂದ ಪಟ್ಟಿಯಲ್ಲಿ ನಮ್ಮ ಹೆಸರು ಕೈಬಿಟ್ಟಿರುವುದಕ್ಕೆ ನಾವು ಕಾರಣರಲ್ಲ. ಅಧಿಕಾರಿಗಳೆ ನೇರ ಹೊಣೆಹೊರಬೇಕು. ಸ್ಥಳಕ್ಕೆ ಚುನಾವಣಾಧಿಕಾರಿ ಅಥವಾ ತಹಶಲ್ದಾರ್ ಆಗಮಿಸಿ ಸಮಸ್ಯೆ ಬಗೆಹರಿಸಬೇಕು. ನಾವು ಮತದಾನ ಮಾಡಲೇಬೇಕೆಂದು ಪಟ್ಟುಹಿಡಿದರು.
ಮನ ವೋಲಿಸಿದ ಪಿಎಸ್‌ಐ: ಮತಗಟ್ಟೆ ಬಳಿಯಲ್ಲಿ ಮತದಾರರು ತಮ್ಮ ಹೆಸರು ಪಟ್ಟಿಯಲಿಲ್ಲ ಎಂಬ ಕಾರಣಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಪ್ರತಿಭಟನೆ ಮುಂದಾಗುತ್ತಿದ್ದ ವಿಚಾರವನ್ನು ತಿಳಿಸಿದ ಪಟ್ಟಣ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಮತದಾರರ ಮನವೋಲಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.