ಬನ್ನೇರುಘಟ್ಟ ಉದ್ಯಾನದಲ್ಲಿ ನೀರಿಗೆ ಹಾಹಾಕಾರ
Team Udayavani, Apr 26, 2019, 2:20 PM IST
ಆನೇಕಲ್: ಶಾಲಾ, ಕಾಲೇಜುಗಳಿಗೆ ರಜೆ ಇರುವುದರಿಂದ ಪ್ರವಾಸಿ ತಾಣಗಳಿಗೆ ಜನ ಹೋಗುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೂ ಪ್ರವಾಸಿಗರು ಬಂದುಹೋಗುತ್ತಾರೆ. ಆದರೆ, ಇಲ್ಲಿಗೆ ಬರುವ ಪ್ರವಾಸಿಗರಿಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ.
ಗುಟುಕು ನೀರಿಗೂ ಪರದಾಟ: ವರ್ಷ ದಿಂದ ವರ್ಷಕ್ಕೆ ಉದ್ಯಾನವನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಲೇಯಿದೆ. ಇದರಿಂದ ಉದ್ಯಾನವನದಲ್ಲಿನ ಅನುಕೂಲ ತೆಗಳನ್ನು ಹೆಚ್ಚಿಸಬೇಕಾದ ಅನಿವಾರ್ಯತೆಯೂ ಇದೆ. ಇದರಲ್ಲಿ ಸಣ್ಣ ನಿರ್ಲಕ್ಷ ್ಯವಾದರೂ ದೊಡ್ಡ ಮಟ್ಟದ ಅನಾನುಕೂಲತೆ ಜೊತೆಗೆ ಇಡೀ ಉದ್ಯಾನವನಕ್ಕೆ ನಕಾರಾತ್ಮಕ ಅಭಿ ಪ್ರಾಯ ಮೂಡುತ್ತದೆ. ಸದ್ಯ ಉದ್ಯಾನವನದ ಮೃಗಾಲಯದ ಆವರಣದಲ್ಲಿ ಕುಡಿಯುವ ನೀರಿಗಾಗಿ ಪ್ರವಾಸಿಗರು ಪರದಾಡುವಂತಾ ಗಿದೆ. ಅದರಲ್ಲೂ ಈ ಉರಿ ಬಿಸಿಲಿನಲ್ಲಿ ದೊಡ್ಡವರು ದಾಹ ಹಿಡಿದಿಟ್ಟಿಕೊಳ್ಳಬಹುದು. ಆದರೆ, ಮಕ್ಕಳು ಮಾತ್ರ ಒಂದು ಗುಟುಕು ನೀರು ಸಿಗದೇ ಹಿಂಸೆ ಪಡಬೇಕಾದ ಪರಿಸ್ಥಿತಿ ಕಳೆದ 15 ದಿನಗಳಿಂದ ಉದ್ಯಾನವನದಲ್ಲಿ ಕಂಡು ಬರುತ್ತಿದೆ.
ಪ್ರವಾಸಿಗರ ಸಂಖ್ಯೆ ಹೆಚ್ಚಳ: ಉದ್ಯಾನವನಕ್ಕೆ ಸಾಮಾನ್ಯ ದಿನಗಳಲ್ಲೂ ಅತೀ ಕಡಿಮೆ ಅಂದರೂ ಒಂದೂವರೆ ಸಾವಿರದಷ್ಟು ಪ್ರವಾಸಿಗರು ಆಗಮಿಸುತ್ತಾರೆ. ಇದು ರಜೆ ದಿನಗಳಲ್ಲಿ ಪ್ರತಿ ದಿನ ಐದು ಸಾವಿರಕ್ಕೆ ಮುಟ್ಟು ತ್ತದೆ. ಇನ್ನು ಶನಿವಾರ, ಭಾನುವಾರ ಮತ್ತಿತರೆ ರಜೆ ದಿನಗಳಲ್ಲಿ ಉದ್ಯಾನವನಕ್ಕೆ ಬರುವ ಪ್ರವಾಸಿಗರ ಸಂಖ್ಯೆ 15 ಸಾವಿರ ಮುಟ್ಟು ತ್ತದೆ. ಇಷ್ಟು ಪ್ರವಾಸಿಗರಿಗೆ ಕುಡಿ ಯುವ ನೀರು ಎಷ್ಟು ಅವಶ್ಯಕ ಎಂಬುದನ್ನು ಅರಿತು, ಅದನ್ನು ಪೂರೈಸುವ ಜವಾಬ್ದಾರಿ ಉದ್ಯಾನ ವನದ ಅಧಿಕಾರಿಗಳ ಮೇಲಿರುತ್ತದೆ.
ರೂ. ಕಾಯಿನ್‌ಗೆ ಲೀಟರ್ ನೀರು: ಹಲವು ವರ್ಷಗಳಿಂದ ಉದ್ಯಾನವನದಲ್ಲಿ ಟಿಕೆಟ್ ಪಡೆದು ಒಳಬರುವಪ್ರವಾಸಿಗರಿಗೆ ಕುಡಿ ಯುವ ನೀರಿನ ವ್ಯವಸ್ಥೆಗಾಗಿ ಹಳೇ ನವಿಲು ಪಂಜರದ ಬಳಿ ಒಂದು ಕುಡಿಯುವ ನೀರಿನ ಶುದ್ಧ ಘಟಕವಿದೆ. ಒಂದು ರೂ.ಕಾಯಿನ್‌ಗೆ ಒಂದು ಲೀಟರ್ ನೀರು( ಖಾಸಗಿ ಸಹ ಭಾಗಿತ್ವದ್ದು)ಅಲ್ಲಿ ದೊರೆಯುತ್ತದೆ. ಉದ್ಯಾನ ವನದ ಒಳ ಹೊಕ್ಕರೆ ಕಾಳಿಂಗ ಸರ್ಪ, ಹಾವಿನ ಆವರಣದ ಬಳಿ ಮತ್ತೂಂದು ಶುದ್ಧ ಕುಡಿಯುವ ನೀರಿನ ಘಟಕವಿದೆ. ಈ ಎರಡರ ಪೈಕಿ ಒಂದರಲ್ಲಿ ಉದ್ಯಾನವನ ದವರು ಉಚಿತವಾಗಿ ನೀರಿನ ವ್ಯವಸ್ಥೆ ಮಾಡಿ ದ್ದಾರೆ. ಸದ್ಯ ಇಷ್ಟು ವರ್ಷಗಳಿಂದ ಇದೇ ವ್ಯವಸ್ಥೆ ಇತ್ತು. ಆದರೆ, ಇಂದು ಒಂದು ಘಟಕದಲ್ಲಿ ನೀರು ಬಂದರೂ ಕೇವಲ ಕೆಲ ಗಂಟೆಗಳು ಮಾತ್ರ. ಮಧ್ಯಾಹ್ನ ಆಗುತ್ತಿದ್ದಂತೆ ನೀರು ಬಂದ್ ಆಗುತ್ತದೆ. ಇನ್ನು ಕಾಯಿನ್ ಹಾಕುವ ಘಟಕದಲ್ಲೂ ಒಮೊಮ್ಮೆ ವಿದ್ಯುತ್ ಇಲ್ಲದಿದ್ದರೆ ನೀರು ಖಾಲಿಯಾಗಿರುತ್ತದೆ. ಅಲ್ಲದೇ, ಕಳೆದ ಶನಿವಾರ, ಭಾನುವಾರ, ರಜೆ ದಿನದಂದೂ ಎರಡು ಘಟದಲ್ಲೂ ನೀರು ಇರಲಿಲ್ಲ. ಹಾಗಾಗಿ, ಉದ್ಯಾನವನಕ್ಕೆ ಬಂದಿದ್ದ ಸಾವಿರಾರು ಪ್ರವಾಸಿಗರು ನೀರಿನ ದಾಹ ನೀಗದೆ ಹಿಂಸೆ ಪಡಬೇಕಾಯಿತು.
ಸಮಸ್ಯೆ ಆಗಿದ್ದು ಎಲ್ಲಿ?: ಕಳೆದ ಹತ್ತಾರು ವರ್ಷಗಳಿಂದ ಸದ್ಯ ಇರುವ ಕುಡಿಯುವ ನೀರಿನ ವ್ಯವಸ್ಥೆ ಪ್ರವಾಸಿಗರ ಬಳಕೆಗೆ ಬರು ತ್ತಿತ್ತು. ಆದರೆ, ಇತ್ತೀಚೆಗೆ ಉದ್ಯಾನವನಕ್ಕೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾ ಗಿದೆ. ಇನ್ನು ಘಟಕಗಳಿಗೆ ನೀರು ಪೂರೈಸುವ ಕೊಳವೆಬಾವಿಯಲ್ಲಿ ಅಂತರ್ಜಲ ಕುಸಿದಿದೆ. ಮತ್ತೂಂದು ಘಟಕದ ಬಳಿ ಚರಂಡಿ ಕಾಮ ಗಾರಿ ನಡೆಯುತ್ತಿರುವುದರಿಂದ ಸಂಪರ್ಕದ ಪೈಪ್‌ಲೈನ್ ದುರಸ್ತಿಯಾಗಿದೆ. ಇದರಿಂದ ಘಟಕದಲ್ಲಿ ನೀರು ಲಭ್ಯವಾಗುತ್ತಿಲ್ಲ. ಆದರೆ, ಇದೆಲ್ಲಕ್ಕಿಂತ ಮುಖ್ಯವಾಗಿ ಉದ್ಯಾನದ ಒಳಗಿದ್ದ ಮೂರೂ ಅಂಗಡಿಗಳನ್ನು ತೆರವು ಮಾಡಲಾಗಿದೆ. ಈ ಅಂಗಡಿಗಳಲ್ಲಿ ನೀರು ಲಭ್ಯ ವಾಗುತ್ತಿತ್ತು. ಆದರೆ, ಮೂರೂ ಅಂಗಡಿ ಗಳು ತೆರವಾದ ಬಳಿಕ ಪ್ರವಾಸಿಗರಿಗೆ ಬಾಟಲ್ ನೀರು ಬೇಕಾದರೂ ಉದ್ಯಾನವದ ಹೊರಹೋಗಬೇಕು. ಇಲ್ಲವೇ, ದ್ವಾರದಲ್ಲಿ ರುವ ಜೆಎಲ್ಆರ್ ಹೋಟೆಲ್ಗೆ ಹೋಗ ಬೇಕು. ಉದ್ಯಾನವನಕ್ಕೆ ಬರುವ ಪ್ರವಾಸಿ ಗರಿಗೆ ಕುಡಿಯವ ನೀರಿನದ್ದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.
ಎರಡು ಕಿ.ಮೀ. ವಿಸ್ತೀರ್ಣ: ಉದ್ಯಾನವ ವೀಕ್ಷಣೆಗೆ ಟಿಕೆಟ್ ಪಡೆದು ಒಳಬರುವ ಪ್ರವಾಸಿ ಗರು ಇಡೀ ಉದ್ಯಾನ ಸುತ್ತಿ ಬರಬೇಕಾದರೆ ಸುಮಾರು ಎರಡು ಕಿ.ಮೀ. ಆಗುತ್ತದೆ. ಇಲ್ಲಿ ಆರಂಭದಲ್ಲಿ ಮಾತ್ರ ಕುಡಿಯುವ ನೀರಿನ ವ್ಯವಸ್ಥೆ ಇದೆ. ಆದರೆ, ಆನೆ ಮತ್ತು ದೋಣಿ ವಿಹಾರಕ್ಕೆ ಹೋಗಿ ಬರುವ ಪ್ರವಾಸಿಗರಿ ಗಂತೂ ಕುಡಿಯುವ ನೀರಿನ ಅವಶ್ಯಕತೆ ಅತೀ ಹೆಚ್ಚಾಗಿರುತ್ತದೆ. ಅದರಲ್ಲೂ ದೋಣಿ ವಿಹಾರ ಮುಗಿಸಿ ಬರುವವರಿಗೆ ದಣಿವಾಗಿ ರುತ್ತದೆ. ಅವರಿಗೆ ನೀರಿನ ಅಗತ್ಯತೆ ಹೆಚ್ಚಾಗಿ ರುತ್ತದೆ. ಅಲ್ಲಿಂದ ಮತ್ತೆ ಸದ್ಯ ನೀರಿನ ಘಟಕ ಗಳ ಬಳಿ ಬರುವಷ್ಟರಲ್ಲಿ ಸುಸ್ತಾಗುತ್ತಾರೆ.
ಎರಡು ನೀರಿನ ಘಟಕ: ಉದ್ಯಾನವನದಲ್ಲಿ ಎರಡು ನೀರಿನ ಘಟಕಗಳನ್ನು ಖಾಸಗಿ ಸಹ ಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಒಂದು ಘಟಕವನ್ನು ಮೃಗಾಲಯ ದ್ವಾರದ ಸಫಾರಿ ಆವರಣದ ಬಳಿ, ಮತ್ತೂಂದು ಘಟಕವನ್ನು ಮೃಗಾಲಯದ ಮಧ್ಯ ಭಾಗ ವಾದ ಸಿಂಹಗಳ ಆವರಣದ ಮುಂಭಾ ಗದಲ್ಲಿ ನಿರ್ಮಾಣ ಮಾಡಲಾಗಿದೆ. ನೀರಿನ ಘಟಕಗಳ ಕಟ್ಟಡವನ್ನು ಉದ್ಯಾನವ ಆರು ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾ ಗಿದೆ. ಸಂಸ್ಕರಣ ಉಪಕರಣಗಳನ್ನು ಸುಮಾರು 8 ಲಕ್ಷ ರೂ.ವೆಚ್ಚದಲ್ಲಿ ಜೋಡಿಸಲಾಗುತ್ತಿದೆ. ಈ 8 ಲಕ್ಷ ರೂ. ಖಾಸಗಿ ಸಹ ಭಾಗಿತ್ವದಲ್ಲಿವೆ. ಇನ್ನು ಕೆಲವೇ ದಿನಗಳಲ್ಲಿ ಎರಡೂ ಘಟಕ ಗಳಿಂದ ಕುಡಿಯುವ ನೀರು ಲಭ್ಯವಾಗಲಿದೆ. ಅದಾದ ಬಳಿಕ ಹಾವು ಆವರಣದ ಬಳಿಯ ಹಳೇ ಘಟಕವನ್ನು ತೆರವು ಮಾಡಲಾಗು ವುದು. ಅದಾದ ನಂತರ ಅವಶ್ಯಕತೆಯಿದ್ದಲ್ಲಿ ಮತ್ತೂಂದು ಘಟಕ ಸ್ಥಾಪಿಸಲು ಯೋಚಿ ಸಲಾಗುವುದೆಂದು ಬನ್ನೇರುಘಟ್ಟ ಉದ್ಯಾನ ವನದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಸಂಜಯ್ ಬಿಜ್ಜೂರು ಹೇಳಿದರು.
ಮಂಜುನಾಥ ಎನ್, ಬನ್ನೇರುಘಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.