ಡಕೋಟಾ ಬಸ್‌ಗೆ ಕಡಿವಾಣ ಯಾವಾಗ?


Team Udayavani, Dec 13, 2018, 3:28 PM IST

blore-g-1.jpg

ದೊಡ್ಡಬಳ್ಳಾಪುರ: ಕೆಲವು ದಿನಗಳ ಹಿಂದೆ ಮಂಡ್ಯ ಜಿಲ್ಲೆಯ ಪಾಂಡವಪುರದ ಬಳಿ ನಡೆದ ಖಾಸಗಿ ಬಸ್‌ ದುರಂತ ಜನರು ಪ್ರಯಾಣಿ ಸುವ ವಾಹನಗಳ ಕಾರ್ಯಕ್ಷಮತೆ ಹಾಗೂ ಸುರಕ್ಷತೆಯ ಬಗ್ಗೆ ಚಿಂತಿಸುವಂತೆ ಮಾಡಿದೆ.  ಡ್ಡಬಳ್ಳಾಪುರ ತಾಲೂಕಿನಲ್ಲಿ ಸಂಚಾರ ಮಾಡುತ್ತಿರುವ ಬಹಳಷ್ಟು ಖಾಸಗಿ ಬಸ್‌ಗಳು ಹಾಗೂ ಕೈಗಾರಿಕಾ ಪ್ರದೇಶದಲ್ಲಿ ಸಂಚರಿಸುವ ವಾಹನಗಳ ಸ್ಥಿತಿಗತಿಗಳ ಬಗ್ಗೆ ಸಹಜವಾಗಿಯೇ ಪ್ರಯಾಣಿಕರಲ್ಲಿ ಅನುಮಾನ ಕಾಡತೊಡಗಿದೆ.

ದೇವನಹಳ್ಳಿ ಸಾರಿಗೆ ಇಲಾಖೆಯ ಕಚೇರಿ ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ಬಸ್‌ಗಳಿವೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸುಮಾರು 40ಕ್ಕೂ ಹೆಚ್ಚು ಖಾಸಗಿ ಬಸ್‌ಗಳಿವೆ. ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮೊದಲಾಗಿ ಸಾಮಾನ್ಯ ಮಾರ್ಗ ಗಳಷ್ಟೇ ಅಲ್ಲದೇ, ತಾಲೂಕಿನ ಸಾಸಲು, ದೊಡ್ಡಬೆಳವಂಗಲ, ಮಧುರೆ ಹೋಬಳಿಗಳ ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸುತ್ತಿವೆ.

ಸರ್ಕಾರಿ ಬಸ್‌ಗಳಿಗೆ ತೀವ್ರ ಪೈಪೋಟಿ ನೀಡುವ ಮಟ್ಟಿಗೆ ತಮ್ಮ ಜಾಲ ವಿಸ್ತರಿಸಿಕೊಳ್ಳದಿದ್ದರೂ, ಪ್ರಯಾಣಿಕರಿಗೆ ಸರಕು ಸಾಗಾಣಿಕೆ ಹಾಗೂ ಕಡಿಮೆ ಪ್ರಯಾಣ ದರದಿಂದಾಗಿ ತಮ್ಮದೇ ಆದ ಪ್ರಯಾಣಿಕರನ್ನು ಹೊಂದಿವೆ. ಇದರಲ್ಲಿ 15 ವರ್ಷಕ್ಕಿಂತ ಹಳೆಯ ಬಸ್‌ಗಳೂ ಇವೆ. ಕೆಲವು ಬಸ್‌ಗಳು ಹೊರತು ಪಡಿಸಿದರೆ, ಹೆಚ್ಚಿನವು ಬಾಹ್ಯ ಸೌಂದರ್ಯ, ಡಿವಿಡಿ ಸೌಲಭ್ಯಗಳಿಂದ ಜನರನ್ನು ಆಕರ್ಷಣೆ ಮಾಡುತ್ತಿವೆ.

ವಾಹನಗಳ ಅಂಕಿ ಅಂಶ: ದೇವನಹಳ್ಳಿ ಸಾರಿಗೆ ಇಲಾಖೆಯ ಕಚೇರಿ ವ್ಯಾಪ್ತಿಯ ಮಾಹಿತಿ ಯಂತೆ, ಅಕ್ಟೋಬರ್‌ 2018ರ ಅಂತ್ಯಕ್ಕೆ ಞ 3094 ಭಾರೀ ವಾಹನಗಳಿವೆ. ಸುಮಾರು 3 ಸಾವಿರ ಸಾರಿಗೆ ವಾಹನಗಳಿವೆ. ವಿವಿಧ ರೀತಿಯಲ್ಲಿ ಪರವಾನಗಿ ಪಡೆದ 95 ಬಸ್‌ಗಳಿವೆ. 283 ಶಾಲಾ ವಾಹನಗಳಿವೆ. ಇದಲ್ಲದೇ ಇತರೆ ಸುಮಾರು 15 ಬಸ್‌ಗಳು ಸಂಚರಿಸುತ್ತಿವೆ. 650 ಕ್ಯಾಬ್‌ಗಳು ಸೇರಿ ದಂತೆ ದ್ವಿಚಕ್ರ ವಾಹನಗಳು, ಕಾರು ಹಾಗೂ ಇತರೆ ಸೇರಿ 1,35,530 ವಾಹನಗಳು ನೋಂದಣಿಯಾಗಿವೆ.

ಪರ್ಮಿಟ್‌ ಇಲ್ಲ: ದೊಡ್ಡಬಳ್ಳಾಪುರ, ದೇವನಹಳ್ಳಿ ತಾಲೂಕುಗಳಲ್ಲಿ ಸಂಚರಿಸುವ ಹಲವಾರು ಖಾಸಗಿ ಬಸ್‌ಗಳಿಗೆ ಮಾರ್ಗದ ಪರ್ಮಿಟ್‌ಗಳು ಇಲ್ಲ. ಪರ್ಮಿಟ್‌ ಅವಧಿ ಮುಗಿದಿದ್ದರೂ ಅವುಗಳನ್ನು ನವೀಕರಿಸದಿರುವ ನಿದರ್ಶನಗಳಿವೆ. ನಗರ ಪ್ರದೇಶದಲ್ಲಿ ಸಂಚರಿಸುವ ವಾಹನಗಳು ಸಾರಿಗೆ ಇಲಾಖೆ ಕಣ್ಣಿಗೆ ಬೀಳುತ್ತವೆ. ಆದರೆ, ಗ್ರಾಮಾಂತರ ಪ್ರದೇಶದ ಹಲವಾರು ವಾಹನಗಳು ಪರ್ಮಿಟ್‌ ಇಲ್ಲದೇ ಸಂಚರಿಸುವುದು ಸಾಮಾನ್ಯವಾಗಿದೆ. ಇದರೊಂದಿಗೆ ಬಸ್‌ ಟಾಪ್‌ ಪ್ರಯಾಣವೂ ಸಾಮಾನ್ಯವಾಗಿದೆ.

ಕೈಗಾರಿಕಾ ಪ್ರದೇಶದಲ್ಲಿ ಕೇಳ್ಳೋರೇ ಇಲ್ಲ: ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆಗೆ ನಿತ್ಯ ಪಾಳಿಗಳಿಗೆ ಅನುಗುಣವಾಗಿ ಕಾರ್ಮಿಕರನ್ನು ಕರೆತರಲು ನೂರಾರು ವಾಹನಗಳು ಸಂಚರಿ ಸುತ್ತಿವೆ. ಹಲವಾರು ಕಾರ್ಖಾನೆಗಳು ಖಾಸಗಿ ವಾಹನಗಳಿಗೆ ಗುತ್ತಿಗೆ ನೀಡಿವೆ. ಇದರಲ್ಲಿ ಬಸ್‌, ಮಿನಿ ಬಸ್‌ ಹಾಗೂ ಇತರೆ ವಾಹನಗಳು ಸೇರಿವೆ. ಆದರೆ, ಈ ವಾಹನಗಳಲ್ಲಿ ಬಹಳಷ್ಟು ವಾಹನಗಳು, ಬೇರೆಡೆ ಬಳಸಿದ ಗುಜರಿ ವಾಹನಗಳಾಗಿದ್ದು, ಸುಸ್ಥಿ ಯಲ್ಲಿಲ್ಲದೇ ಸಂಚರಿಸುತ್ತಿವೆ. ವಾಹನಗಳಿಗೆ ಎಫ್‌ಸಿ, ವಿಮೆ ಮೊದಲಾದ ದಾಖಲಾತಿ ಗಳಿಲ್ಲ. ಅನನುಭವಿ ಚಾಲಕರು ವಾಹನ ಚಲಾವನರ ಮಾಡಿ ಹಲವಾರು ಅಪಘಾತ ಗಳಾಗಿರುವ ನಿದರ್ಶನಗಳಿವೆ. ಅಪಘಾತ ಗಳಾಗಿ ಮಾಧ್ಯಮಗಳಲ್ಲಿ ವರದಿಯಾದರೆ, ಆಗ ಸಾರಿಗೆ ಇಲಾಖೆಯವರು ಅಡ್ಡಾಡಿ ಕ್ರಮ ಕೈಗೊಳ್ಳುವುದು ಬಿಟ್ಟರೆ ಮತ್ತೆ ಇತ್ತ ತಿರುಗಿಯೂ ನೋಡುವುದಿಲ್ಲ.

15 ವರ್ಷ ದಾಟಿದ ವಾಹನ: 15 ವರ್ಷ ದಾಟಿದ ವಾಹನಗಳನ್ನು ನಿಯಮಾನುಸಾರ ಮುಟ್ಟುಗೋಲು ಹಾಕಿಕೊಂಡು ಕ್ರಮ ಕೈಗೊಳ್ಳುವ ಅಧಿಕಾರ ಸಾರಿಗೆ ಇಲಾಖೆಗೆ ಇದೆ.

ಆದರೆ, ಸಾರಿಗೆ ಇಲಾಖೆ ಈ ಬಗ್ಗೆ ಕ್ರಮ ಕೈಕೊಳ್ಳುತ್ತಿಲ್ಲ. ಕೈಗಾರಿಕಾ ಪ್ರದೇಶದಲ್ಲಿ ಸಂಚರಿ ಸುವ ನೂರಾರು ವಾಹನಗಳಲ್ಲಿ ಸುರಕ್ಷತೆಯೇ ಇಲ್ಲ. ಕೆಲಸಕ್ಕೆ ಹೋದ ಕಾರ್ಮಿಕರು ಮತ್ತೆ ಅದೇ ವಾಹನದಲ್ಲಿ ಸುರಕ್ಷಿತವಾಗಿ ಮನೆ ತಲುಪುವ ಖಾತ್ರಿ ಇಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳು
ಕೆಲವೊಮ್ಮೆ ಬರುವುದನ್ನು ಬಿಟ್ಟು ಕಟ್ಟುನಿಟ್ಟಾಗಿ ಎಲ್ಲಾ ರೀತಿಯ ವಾಹನಗಳ ಮೇಲೆ ಕ್ರಮ ಕೈಗೊಂಡರೆ ಪ್ರಯಾಣಿಕರು ಸುರಕ್ಷಿತವಾಗಿ ಸಂಚರಿಸುವ ಧೈರ್ಯ ಮೂಡುತ್ತದೆ ಎನ್ನುತ್ತಾರೆ ಕಾರ್ಮಿಕ ಮುಖಂಡ ಕೊತ್ತೂರಪ್ಪ 15 ವರ್ಷ ದಾಟಿದ ವಾಹನಗಳನ್ನು ಏಕಾಏಕಿ ಮುಟ್ಟು ಗೋಲು ಹಾಕಿಕೊಳ್ಳಲು ಆಗುವುದಿಲ್ಲ. ವಾಹನಗಳ ಕಾರ್ಯಕ್ಷಮತೆ ಪರಿಶೀಲಿಸಿ, ವಾಹನಗಳು ಸುಸ್ಥಿತಿಯಲ್ಲಿ ಇಲ್ಲದಿದ್ದಾಗ ದಂಡ ವಿಧಿಸಿ ಎಚ್ಚರಿಕೆ ನೀಡಲಾಗುತ್ತದೆ. ಮತ್ತೆ ಇದೇ ರೀತಿ ಮುಂದು ವರಿದರೆ ವಾಹನ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಕೈಗಾರಿಕಾ ಪ್ರದೇಶಗಳಲ್ಲಿ ಸೇರಿದಂತೆ ನಮ್ಮ ಸಾರಿಗೆ ಇಲಾಖೆ ಕಚೇರಿ ವ್ಯಾಪ್ತಿಯಲ್ಲಿ ವಿಮೆ, ಪರವಾನಗಿ, ವಾಹನ ಚಾಲನೆ ಪರವಾನಗಿ ಇಲ್ಲದ ವಾಹನಗಳ ನ್ನು ಪರಿಶೀಲಿಸಿ ದಂಡ ವಿಧಿಸಲಾಗುತ್ತಿದೆ. 
 ಮಂಜುನಾಥ್‌, ಸಹಾಯಕ ಸಾರಿಗೆ ಅಧಿಕಾರಿ, ದೊಡ್ಡಬಳ್ಳಾಪುರ

 ಡಿ.ಶ್ರೀಕಾಂತ್‌

ಟಾಪ್ ನ್ಯೂಸ್

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Crime: ರೌಡಿಶೀಟರ್‌ ಕೊಲೆ ಯತ್ನ; ಆರೋಪಿಗೆ ಗುಂಡೇಟು

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

11

Lack of Bus stand: ಹೊಸಕೋಟೆ; ಬಸ್‌ ನಿಲ್ದಾಣವಿಲ್ಲದೆ ಪರದಾಟ!

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

Anekal: ರೌಡಿಶೀಟರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

1

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.