ಕಟ್ಟಡ ನಿರ್ಮಾಣ ಮಾಡಿದರೂ ಹಣ ನೀಡದ ಗ್ರಾಪಂ
Team Udayavani, Nov 19, 2021, 1:46 PM IST
ನೆಲಮಂಗಲ: ಆಲೂರು ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ನಿಧಿ-1ರ ಅನುದಾನದಲ್ಲಿ ನಿರ್ಮಾಣ ಮಾಡಲು ತಿರ್ಮಾನ ಮಾಡಿದ್ದ ಅಧಿ ಕಾರಿ ಹಾಗೂ ಸದಸ್ಯರು ಕಟ್ಟಡ ಪೂರ್ಣಕೊಂಡರೂ ಗುತ್ತಿಗೆದಾರನಿಗೆ ಹಣನೀಡದೆ ಪರದಾಡಿಸುತ್ತಿದ್ದಾರೆ.
ಪಟ್ಟಣ ಸಮೀಪದ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿ ಆಲೂರು ಗ್ರಾಮಪಂಚಾಯಿತಿಯ ಕಚೇರಿ ಈ ಹಿಂದೆ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪರಿಣಾಮ 2019ರ ಅವಧಿಯಲ್ಲಿನ ಅಧ್ಯಕ್ಷರು, ಸದಸ್ಯರ ಒಮ್ಮತದ ತೀರ್ಮಾನದಂತೆ ನಿಧಿ-1ರ ಅನುದಾನ ಬಳಕೆ ಮಾಡಿಕೊಂಡು ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಯಿತು.
ಅನಂತರ 14ನೇ ಹಣಕಾಸಿನ ಮೂಲಕ 4 ಲಕ್ಷ ರೂ.ವನ್ನು ಗುತ್ತಿಗೆದಾರ ನಿಗೆ ನೀಡಿದ್ದು, ನಂತರ ಕಟ್ಟಡ 2020 ಜೂನ್ ನಲ್ಲಿ ಪೂರ್ಣ ಕೊಂಡರೂ, ಉಳಿದ ಅನುದಾನದ ಹಣವನ್ನು ನೀಡಲು ಇಲ್ಲಿಯವರೆಗೂ ಅಧಿಕಾರಿಗಳು ಮುಂದಾಗಿಲ್ಲಎಂದು ಗುತ್ತಿಗೆದಾರರು ದೂರಿದ್ದಾರೆ.
ಬಿಲ್ ಪಾಸ್ ಮಾಡಿಲ್ಲ: ಆಲೂರು ಗ್ರಾಪಂನ ನಿಧಿ-1ರ ಅನುದಾನದಲ್ಲಿ ಎರಡು ಬಾರಿ 4.5 ಲಕ್ಷ ರೂ. ಅನುದಾನ ನೀಡುವುದಾಗಿ ಕ್ರಿಯಾಯೋಜ ನೆಯಲ್ಲಿ ಸೇರಿಸಲಾಗಿದೆ. ಎಂಜಿನಿಯರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ ಬಿಲ್ ನೀಡಲು ಸೂಚನೆ ಸಹ ನೀಡಲಾಗಿದೆ. ಆದರೆ, ಗ್ರಾಪಂ ಅಧಿ ಕಾರಿಗಳು ಮಾತ್ರ ಇಲ್ಲಿಯವರೆಗೂ ಹಣವನ್ನು ಗುತ್ತಿಗೆದಾರರಿಗೆ ನೀಡಿಲ್ಲ. ಕ್ರಿಯಾಯೋಜನೆಯಲ್ಲಿ ಮುಂದುವರಿದ ಕಾಮಗಾರಿ ಎಂದು ಅನುದಾ ನದ ಮಾಹಿತಿ ನಮೂದು ಮಾಡಿದರೂ, ಹಣ ನೀಡಲು ಅಧಿಕಾರಿಗಳ ಹಿಂದೇಟು ಹಾಕುತ್ತಿದ್ದಾರೆ.
ಆಡಳಿತ ಮಂಡಳಿ ಸಮಸ್ಯೆ: ಆಲೂರು ಗ್ರಾಪಂ ಆಡಳಿತ ಮಂಡಳಿ ಚುನಾವಣೆ ನಂತರ ಹೊಸಬರು ಅಧಿಕಾರಕ್ಕೆ ಬಂದ ನಂತರ ಹಿಂದಿನ ಆಡಳಿತ ಮಂಡಳಿಯಲ್ಲಿ ತಿರ್ಮಾನವಾದ ಕಟ್ಟಡ ಕಾಮಗಾರಿ ಅನುದಾನ ನೀಡಲು ಸಾಧ್ಯವಿಲ್ಲ ಎಂಬುದಾಗಿ ತಡೆ ಮಾಡುತ್ತಿದ್ದು, ನೂತನ ಕಟ್ಟಡ ನಿರ್ಮಾಣ ಮಾಡಿದ ಗುತ್ತಿಗೆದಾರನಿಗೆ ಬಹು ದೊಡ್ಡ ಸಮಸ್ಯೆ ಎದುರಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ಸಮರದಲ್ಲಿ ಗುತ್ತಿಗೆದಾರ ಸಾಲಮಾಡಿ ಕಾಮಗಾರಿ ಮಾಡಿ ಕಂಗಾಲಾಗಿದ್ದಾನೆ.
ಪಿಡಿಒಗೆ ಗೊತ್ತಿಲ್ಲವಂತೆ: ಆಲೂರು ಗ್ರಾಮ ಪಂಚಾಯಿತಿ ನೂತನ ಕಟ್ಟಡ ನಿರ್ಮಾಣವಾಗಿದ್ದು, ಶಾಸಕ ಎಸ್.ಆರ್. ವಿಶ್ವನಾಥ್ ಉದ್ಘಾಟ ನೆಯನ್ನು ಸಹ ಮಾಡಿದ್ದಾರೆ. ಆದರೆ, ಈಗಿನ ಪಿಡಿಒ ಗಿರೀಶ್ ಮಾತ್ರ ಗುತ್ತಿಗೆದಾರರಿಗೆ ಹಣ ನೀಡಬೇಕು. ಚರ್ಚೆ ಮಾಡಿದ್ದೇವೆ. ನೀಡುತ್ತೇವೆ. ಎಷ್ಟು ವೆಚ್ಚದಲ್ಲಿ ಕಾಮಗಾರಿ ಆಗಿದೆ. ಅವರಿಗೆ ಎಷ್ಟು ನೀಡಬೇಕು. ಇಲ್ಲಿವರೆಗೂ ಎಷ್ಟು ನೀಡಿದೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದು, ಅಧಿ ಕಾರಿಯ ಎಡವಟ್ಟು ಬಯಲಾಗಿದೆ.
ಇದನ್ನೂ ಓದಿ:- ಚುನಾವಣಾ ನೀತಿ ಸಂಹಿತೆ : ಸಿಎಂ ನೇತೃತ್ವದ ವಿಪತ್ತು ನಿರ್ವಹಣಾ ಸಭೆ ಮುಂದೂಡಿಕೆ
“ಆಲೂರು ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆ ನೀಡಿ ಕೇವಲ 4 ಲಕ್ಷ ರೂ. ಪಾವತಿ ಮಾಡಿದ್ದಾರೆ. ಕಾಮಗಾರಿ ಪೂರ್ಣಗೊಂಡಿದ್ದರೂ, ಉಳಿದ ಬಿಲ್ ಹಣ ನೀಡಲು ಅಲೆದಾಡಿಸುತ್ತಿದ್ದಾರೆ. ಎಲ್ಲ ದಾಖಲಾತಿಗಳನ್ನು ಮೇಲಾಧಿಕಾರಿಗಳಿಗೆ ನೀಡಿದ್ದು, ಶೀಘ್ರದಲ್ಲಿ ಹಣ ನೀಡದಿದ್ದರೆ ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ.” – ಮಂಜುನಾಥ್, ಗುತ್ತಿಗೆದಾರ.
“ನೂತನ ಕಟ್ಟಡದ ಅನುದಾನ ನೀಡಲು ಚರ್ಚೆ ಮಾಡಲಾಗಿದೆ. ಶೀಘ್ರದಲ್ಲಿ ನೀಡುವ ಕೆಲಸ ಮಾಡುತ್ತೇವೆ,. ಎಷ್ಟು ನೀಡಿದೆ, ಎಷ್ಟು ನೀಡಲಾಗಿದೆ ಎಂಬುದು ಗೊತ್ತಿಲ್ಲ. ದಾಖಲಾತಿ ಪರಿಶೀಲನೆ ಮಾಡಿಲ್ಲ. ಸಮಸ್ಯೆ ಬಗೆಹರಿಸುತ್ತೇನೆ.” – ಗಿರೀಶ್, ಆಲೂರು ಗ್ರಾಪಂ ಪಿಡಿಒ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.