ಬಂಗಾರಪೇಟೇಲಿ ಈಗಲೂ ಕಣಿ ಹೇಳ್ತಾರೆ

ಆಧುನೀಕತೆಯಲ್ಲೂ ಕಣಿ ಕೇಳುವ ಆಚರಣೆ ಇದೆ „ ವ್ಯಾಪಾರದ ಜೊತೆ ಕಣಿಯೂ ಇವರ ಕಾಯಕ

Team Udayavani, Oct 11, 2019, 6:40 PM IST

11-October-19

● ಎಂ.ಸಿ.ಮಂಜುನಾಥ್‌
ಬಂಗಾರಪೇಟೆ: ಆಧುನಿಕತೆ ಮುಂದುವರಿದಂತೆ ಗ್ರಾಮೀಣ ಭಾಗದಲ್ಲಿದ್ದ ಕೆಲವು ಪದ್ಧತಿಗಳು ನಿಧನವಾಗಿ ನೇಪತ್ಯಕ್ಕೆ ಸರಿಯುತ್ತಿವೆ. ಅದರಲ್ಲಿ ಕಣಿ ಹೇಳುವ ಕೊರವಂಜಿಗಳೂ ಸೇರಿದ್ದಾರೆ. ಹಿಂದೆ ಊರೂರು ಅಲೆಯುತ್ತ, ಮನೆ ಬಾಗಿಲಿಗೇ ಹೋಗಿ ವಿಶೇಷ ವೇಷಭೂಷಣಗಳಿಂದ ಹಾಡಿನ ಮೂಲಕ ಭವಿಷ್ಯ ಹೇಳುತ್ತಿದ್ದ ಕೊರವಂಜಿಗಳು ಈಗ ಸಿಗುವುದೇ ಅಪರೂಪ. ಇಂತಹ ಕಣಿ ಹೇಳುವ ಕೊರವಂಜಿಗಳು ಪಟ್ಟಣದಲ್ಲಿ ಇದ್ದಾರೆ.

ಜೈನ ದೇಗುಲ ಮುಂಭಾಗ ಮಂಗಳವಾರ ಮತ್ತು ಶುಕ್ರವಾರದಂದು ಸಾಂಪ್ರದಾಯದಿಂದ ಬಂದಿರುವ ಕಣಿ ಹೇಳುವ ಕಾಯಕವನ್ನು ಮಹಿಳೆಯರಿಬ್ಬರು ವ್ಯಾಪಾರದ ಜೊತೆ ಮಾಡುತ್ತಿದ್ದಾರೆ. ಹಳ್ಳಿಗಳಿಂದ ಬರುವ ಮಹಿಳೆಯರು ನವಧಾನ್ಯ, ಎಲೆ-ಅಡಕೆ, ದಕ್ಷಿಣೆ ಕೊಟ್ಟು ಕಣಿ ಕೇಳುತ್ತಾರೆ.

ನಾಮಕರಣ ಮಾಡುವುದಕ್ಕೂ ಕಣಿ: ಹಿಂದೆ ಗ್ರಾಮೀಣ ಜನರು ಕಣಿ ಕೇಳಿ ಮಗುವಿಗೆ ನಾಮಕರಣ ಮಾಡುತ್ತಿದ್ದರು. ಆದರೆ, ಈಗ ಶಾಸ್ತ್ರೀಗಳು, ಪಂಚಾಗ ನೋಡುವವರ ಬಳಿ ಕೇಳಿ ನಾಮಕರಣ ಮಾಡುತ್ತಾರೆ. ಒಂದು ವೇಳೆ ಮಗು ಸದಾ ಆಳುತ್ತಿದ್ದರೆ, ಪಟ್ಟಣಕ್ಕೆ ಬಂದು ಈ ಕೊರವಂಜಿಗಳ ಬಳಿ ಕಣಿ ಕೇಳಿ ಮತ್ತೂಮ್ಮೆ ನಾಮಕರಣ ಮಾಡಿರುವುದು ಇದೆ.

ಮನೆಯಲ್ಲಿ ಯಾರಾದರೂ ತುಂಬಾ ದಿನಗಳಿಂದ ಮಾನಸಿಕವಾಗಿ ಬಳಲುತ್ತಿದ್ದರೆ, ಅನಾರೋಗ್ಯ ಕಾಡುತ್ತಿದ್ದರೆ, ಮನಸ್ಸಿಗೆ ನೋವಾಗಿದ್ದರೆ ಕಣಿ ಕೇಳುವುದನ್ನು ಮೆರೆತ್ತಿಲ್ಲ. ಯಾರಾದ್ರು ಕಾಣಿಕೆ ನೀಡಿ ಕಣಿ ಹೇಳಿ ಅಂದ್ರೆ, ದೇವರ ಪ್ರಾರ್ಥನೆ ಮಾಡಿ, ರಾಗಿಯಲ್ಲಿ ಬೆರೆಳಾಡಿಸುವ ಕಣಿಯಮ್ಮ, ಬೆರಳಿಗೆ ಸಿಗುವ ರಾಗಿ ಕಾಳನ್ನು ಎತ್ತಿ, ಎಷ್ಟು ಬಂದಿದೆ ಎಂದು ನೋಡಿಕೊಂಡು ಇಂತಹದ್ದೇ ದೇವರ ಪೂಜೆ ಮಾಡಿ ಎಂದು ಹೇಳುತ್ತಾರೆ.

ಒಂದು ರೋಗಿಯ ಬಗ್ಗೆ ಕೇಳಿದ್ರೆ ಅವರ ತಲೆಯ ಮೇಲೆ ಹಾಕಲು ಒಂದಿಷ್ಟು ನವಧಾನ್ಯ ಕೊಡುತ್ತಾರೆ. ಇದರಿಂದ ಎಷ್ಟೋ ಮಕ್ಕಳಿಗೆ, ಹಿರಿಯರಿಗೆ, ಮಹಿಳೆಯರಿಗೆ ಕಾಯಿಲೆ ಗುಣವಾಗಿದೆ ಎಂದು ಕೆಲವರು ಹೇಳುತ್ತಾರೆ. ಆದರೆ, ಅದು ಅವರ ನಂಬಿಕೆ.

ಬಂಗಾರಪೇಟೆ ತಾಲೂಕಿನ ಜನತೆ ಸಂತೆಯ ದಿನವಾದ ಶುಕ್ರವಾರ ಈಗಲೂ ಸಾಕಷ್ಟು ಮಂದಿ ಕಣಿ ಕೇಳಲು ಬರುತ್ತಾರೆ. ಗ್ರಾಮೀಣ ಮತ್ತು ಪಟ್ಟಣದ ಜನತೆ, ಪಟ್ಟಣದಲ್ಲಿ ಪಚ್ಚೆ ಸಾಮಗ್ರಿಯನ್ನು ಗಂಧಿಗೆ ಅಂಗಡಿಗಳಲ್ಲಿ ಪಡೆದು ಕಣಿಯಮ್ಮ ಹೇಳಿದಂತೆ ರೋಗಿ ಅಥವಾ ಸಮಸ್ಯೆ ಇರುವವರನ್ನು ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿಕೊಂಡು ಬರುವುದು ವಾಡಿಕೆಯಾಗಿದೆ.

ಟಾಪ್ ನ್ಯೂಸ್

bsf

2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು

Basavarj-horatti

ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ

1-adads

Udupi: ಗೀತೋತ್ಸವದ ಮಂಗಳೋತ್ಸವ ; ಉಪೇಂದ್ರ ಸೇರಿ ಗಣ್ಯರು ಭಾಗಿ

1-viju

Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ

PM Mod

PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು

Shri-Guru-Kottureshwara-Temple

ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

bsf

2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು

Basavarj-horatti

ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ

1-adads

Udupi: ಗೀತೋತ್ಸವದ ಮಂಗಳೋತ್ಸವ ; ಉಪೇಂದ್ರ ಸೇರಿ ಗಣ್ಯರು ಭಾಗಿ

1-viju

Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ

PM Mod

PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.