ಆಧಾರ್ ಸೇವೆ ಆರಂಭಕ್ಕೆ ಆಗ್ರಹ
ಅಟಲಜೀ ಕೇಂದ್ರದಲ್ಲಿ ಸೇವೆ ಸ್ಥಗಿತ • ಬಸವಕಲ್ಯಾಣಕ್ಕೆ ಗ್ರಾಮಸ್ಥರ ಅಲೆದಾಟ
Team Udayavani, Jun 3, 2019, 10:39 AM IST
ಬಸವಕಲ್ಯಾಣ: ಕೋಹಿನೂರ ಗ್ರಾಮದ ಅಟಲ್ ಜೀ ಜನಸೇವಾ ಕೇಂದ್ರದ ಕಟ್ಟಡ.
ವೀರಾರೆಡ್ಡಿ ಆರ್.ಎಸ್.
ಬಸವಕಲ್ಯಾಣ: ಸರ್ಕಾರಿ, ಖಾಸಗಿ ಕೆಲಸ ಸೇರಿದಂತೆ ಪ್ರತಿಯೊಂದಕ್ಕೂ ಆಧಾರ ಕಾರ್ಡ್ ಕೇಳಲಾಗುತ್ತದೆ. ಆದರೆ ಕೋಹಿನೂರ ಜಿಪಂ ವ್ಯಾಪ್ತಿಗೆ ಬರುವ ಜನರು ಆಧಾರ್ ಕಾರ್ಡ್ ಪಡೆಯಲು ಮತ್ತು ಸಣ್ಣ ತಿದ್ದುಪಡಿ ಮಾಡಿಕೊಳ್ಳಬೇಕಾದರೂ ಸುಮಾರು 35 ಕಿ.ಮೀ. ದೂರದ ಬಸವಕಲ್ಯಾಣ ನಗರಕ್ಕೆ ಬರುವ ಸ್ಥಿತಿ ಇದೆ.
ಹೋಹಿನೂರ ವ್ಯಾಪ್ತಿಗೆ ಒಳಪಡುವ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಪಹಣಿ, ಜಾತಿ ಪ್ರಮಾಣಪತ್ರ ಹಾಗೂ ಆಧಾರ್ ಕಾರ್ಡ್ ಸಿಗಬೇಕೇಂಬ ಉದ್ದೇಶದಿಂದ ಆರಂಭಿಸಲಾದ ಅಟಲ್ಜೀ ಜನಸೇವೆ ಕೇಂದ್ರ ಕೇವಲ ಪಹಣಿ ಮತ್ತು ಜಾತಿಪ್ರಮಾಣ ಪತ್ರ ನೀಡುವುದಕ್ಕೆ ಸೀಮಿತವಾದರೆ, ಉಪ ಅಂಚೆ ಕಚೇರಿಯಲ್ಲಿ ನೆಟ್ವರ್ಕ್ ಸಮಸ್ಯೆ ಹೇಳಿ ಆಧಾರ್ ಕಾರ್ಡ್ ಸೇವೆಯನ್ನು ಬಂದ್ ಮಾಡಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಅಟಲ್ಜೀ ಸೇವಾ ಕೇಂದ್ರದಲ್ಲಿ ಖಾಯಂ ಕಂಪ್ಯೂಟರ್ ಸಿಬ್ಬಂದಿ ನೇಮಕ ಮಾಡಿಕೊಳ್ಳದೇ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳತ್ತ ಬರಲಾಗುತ್ತಿದೆ. ನೇಮಕವಾದ ಸಿಬ್ಬಂದಿ ಲಾಗಿನ್ ಆಗಲು ಕೆಲವು ತಿಂಗಳು ಬೇಕಾಗುತ್ತದೆ. ಒಂದು ವೇಳೆ ಲಾಗಿನ್ ಆದರೂ ಕೆಲವು ತಿಂಗಳ ಒಳಗೆ ಅವರಿಗೆ ಇಲ್ಲಿಂದ ಬೇರೆ ಕಡೆಗೆ ವರ್ಗಾವಣೆ ಮಾಡಲಾಗುತ್ತಿದೆ. ಇದರಿಂದ ಜನಸವೇವಾ ಕೇಂದ್ರ ಹೆಸರಿಗೆ ಮಾತ್ರ ಎನ್ನುವಂತಾಗಿದೆ ಎಂಬುದು ಜನರ ಆರೋಪವಾಗಿದೆ.
ವಿದ್ಯಾರ್ಥಿಗಳು ಬ್ಯಾಂಕ್ ಅಕೌಂಟ್ಗಾಗಿ, ವಿಧವೇಯರು ವಿಧವಾ ವೇತನ ಪಡೆಯಲು, ಪಡಿತರ ಚೀಟಿ ಮಾಡಿಸಿಕೊಳ್ಳಲು, ಪಾಸ್‌ಪೋರ್ಟ್, ವಿಳಾಸ ಹಾಗೂ ಹೆಸರು ಬದಲಾವಣೆ ಮಾಡಿಕೊಳ್ಳಬೇಕಾದರೂ ವೃದ್ಧರು, ವಯಸ್ಕರು, ಅಂಗವಿಕಲರು ಬಸವಕಲ್ಯಾಣ ನಗರಕ್ಕೆ ಬಂದು ಆಧಾರ ಕಾರ್ಡ್ ಮಾಡಿಸಿಕೊಳ್ಳಬೇಕಾದ ಅನಿವಾ ರ್ಯತೆ ಇದೆ ಎಂಬುದು ಜನರ ಅಳಲು.
ಗ್ರಾಮದಲ್ಲಿ ಸಮಸ್ಯೆ ಇದ್ದರೂ ಸಂಬಂಧ ಪಟ್ಟವರು ತಾಲೂಕಿನಿಂದ ಸುಮಾರು 35 ಕಿ.ಮೀ. ದೂರ ಇರುವ ಈ ಗ್ರಾಮದ ಅಟಲ್ ಜೀ ಸೇವಾ ಕೇಂದ್ರದಲ್ಲಿ ಶಾಶ್ವತ ಸಿಬ್ಬಂದಿ ನೇಮಕ ಮಾಡುವುದಾಗಲಿ ಅಥವಾ ಉಪ ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ ನಿಲ್ಲಿಸಿರುವುದರ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂಬುದು ಜನರ ಆರೋಪವಾಗಿದೆ.
ಅಧಿಕಾರಿ ಹಾಗೂ ಸಿಬ್ಬಂದಿ ನಡುವೆ ಗ್ರಾಮದ ವೃದ್ಧರು ಮತ್ತು ವಿದ್ಯಾರ್ಥಿಗಳು ಆಧಾರ್ ಕಾರ್ಡ್‌ಗಾಗಿ ತಹಶೀಲ್ದಾರ್ ಕಚೇರಿಗೆ ಮತ್ತು ಪಕ್ಕದ ಊರಿಗೆ ಸುತ್ತಾಡುವಂತಾಗಿದೆ. ಹೀಗಾಗಿ ಸಂಬಂಧ ಪಟ್ಟವರು ಶೀಘ್ರವಾಗಿ ಆಧಾರ್ ಸೇವೆ ಪ್ರಾರಂಭಿಸಿ ಸಮಸ್ಯೆಯಿಂದ ಮುಕ್ತಿಗೊಳಿಸಬೇಕು ಎಂಬುವುದು ಜನರ ಒತ್ತಾಯವಾಗಿದೆ.
ನಗರದಿಂದ ಕೋಹಿನೂರ ಗ್ರಾಮ ಸುಮಾರು 35 ಕಿ.ಮೀ. ಅಂತರದಲ್ಲಿದೆ. ಹೀಗಾಗಿ ಸಂಬಂಧ ಪಟ್ಟವರು ಆದಷ್ಟು ಬೇಗ ಅಟಲ್ ಜೀ ಸೇವಾ ಕೇಂದ್ರದಲ್ಲಿ ಮತ್ತು ಉಪ ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್ ಸಿಗುವಂತೆ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು.
•ರತಿಕಾಂತ, ಗ್ರಾಪಂ ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
Mangaluru: ಎರಡು ಸೈಬರ್ ವಂಚನೆ ಪ್ರಕರಣ: ಸೆನ್ ಪೊಲೀಸರಿಂದ ಇಬ್ಬರ ಬಂಧನ
Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್
Belthangady: ಸಂತ ಲಾರೆನ್ಸ್ ದೇವಾಲಯದಲ್ಲಿ ಕ್ರಿಸ್ಮಸ್ ಬಲಿಪೂಜೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.