ನಿರ್ವಹಣೆಯಿಲ್ಲದೇ ಬಾಲವನ ಪಾಳು
ಸಾರ್ವಜನಿಕರು ತಿರುಗಿ ನೋಡಲಾಗದ ಸ್ಥಿತಿ •ಖರ್ಚು ಮಾಡಿದ ಹಣ ನೀರಲ್ಲಿ ಹೋಮ
Team Udayavani, May 22, 2019, 11:04 AM IST
ಬಸವಕಲ್ಯಾಣ: ನಗರದ ಬಾಲವನದ ಹುಲ್ಲಿನ ಹಾಸಿಗೆ ನಿರ್ವಹಣೆ ಕೊರತೆಯಿಂದ ಸಂಪೂರ್ಣ ಒಣಗಿದೆ.
ಬಸವಕಲ್ಯಾಣ: ಸರ್ಕಾರದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ನಗರದ ನುಲಿಯ ಚಂದಯ್ಯನವರ ಗವಿ ಪಕ್ಕದಲ್ಲಿ ನಿರ್ಮಿಸಲಾದ ಬಾಲ-ವನ ನಿರ್ವಹಣೆ ಕೊರತೆಯಿಂದ ಸಾರ್ವಜನಿಕರು ಮತ್ತು ಮಕ್ಕಳು ಅತ್ತ ತಿರುಗಿ ನೋಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದಲ್ಲಿ ನರಸಭೆ ವ್ಯಾಪ್ತಿಗೆ ಒಳಪಡುವ ಬಹುತೇಕ ಉದ್ಯಾನಗಳು ಕೆಲವು ವರ್ಷಗಳ ಹಿಂದೆಯೇ ನಿರ್ವಹಣೆ ಇಲ್ಲದೆ ಹಾಳಾಗಿವೆ. ಮತ್ತೆ ಕೆಲವು ಅತಿಕ್ರಮಣಗೊಂಡು ಹಾಳಾಗಿರುವುದು ಒಂದುಕಡೆಯಾದರೆ, ಈಚೆಗೆ ಮಕ್ಕಳಿಗಾಗಿ ನಿರ್ಮಿಸಲಾದ ಬಾಲವನ ನಿರ್ವಹಣೆಗೆ ಅಧಿಕಾರಿಗಳು ನಿರ್ಲಕ್ಷ ತೋರಿರುವುದು ಆಕ್ರೋಷಕ್ಕೆ ಕಾರಣವಾಗಿದೆ.
ಗವಿ ಹಾಗೂ ಕೆರೆಯ ದಡದ ಹತ್ತಿರ ವಿಶಾಲ ಪ್ರದೇಶದಲ್ಲಿ ನಿರ್ಮಿಸಲಾದ ಬಾಲವನದಲ್ಲಿ ಸಾಕಷ್ಟು ಹಣ ಖರ್ಚು ಮಾಡಿ, ಆರಂಭದಲ್ಲಿ ಹುಲ್ಲಿನ ಹಾಸಿಗೆ, ಬಗೆ ಬಗೆಯ ಮರಗಳು, ಮಕ್ಕಳ ಆಟಿಕೆಗಳು, ಪ್ರತ್ಯೇಕ ಶೌಚಾಲಯ ಮತ್ತು ಕ್ಯಾಂಟೀನ್ ಕಟ್ಟಡ ವ್ಯವಸ್ಥೆ ಮಾಡಲಾಗಿತ್ತು.
ಆದರೆ ನೀರಿನ ಕೊರತೆಯೊ ಅಥವಾ ನಿರ್ಲಕ್ಷ್ಯವೊ ಬಾಲವನ ಸಧ್ಯ ಕಸದ ತೊಟ್ಟಿಯಾಗಿ ಕೇಳುವವರು, ಹೇಳವರು ಇಲ್ಲದಂತಾಗಿದೆ. ಪುಂಡ- ಪೋಕರಿಗಳ ಠಿಕಾಣಿ ಹೂಡುವ ಸ್ಥಳವಾಗಿರುವುದು ಮಾತ್ರ ಶೋಚನೀಯ ಸಂಗತಿಯಾಗಿದೆ.
ಇದರಿಂದ ಬಾಲವನದಲ್ಲಿ ಪ್ಲಾಸ್ಟಿಕ್ ಚೀಲಗಳು ಮತ್ತು ಬಾಟಲ್ಗಳ ಸೇರಿದಂತೆ ತ್ಯಾಜ್ಯದ ರಾಶಿ ಬಿದ್ದಿದೆ. ಇಲ್ಲಿಗೆ ಬಂದವರು ಮೂಗು ಮುಚ್ಚಿಕೊಂಡು ಹಿಂತಿರುಗಿ ಬರುವಂತ ವಾತವರಣ ನಿರ್ಮಾಣವಾದೆ ಎಂಬುದು ಸಾರ್ವಜನಿಕರ ಆರೋಪವಾಗಿವೆ. ಮಕ್ಕಳು ಮತ್ತು ಸಾರ್ವಜನಿಕರ ಆಕರ್ಷಣೆಗಾಗಿ ಬಾಲವನದಲ್ಲಿ ಈಗಾಗಲೇ ಅಳವಡಿಸಲಾದ ಕುರ್ಚಿಗಳು ಹಾಳಾಗಿವೆ. ಮಕ್ಕಳ ಆಟಿಕೆ ವಸ್ತುಗಳು ಮುರಿದು ಬಿದ್ದಿವೆ. ಮರಗಳು, ಹುಲ್ಲಿನ ಹಾಸಿಗೆ ಸಂಪೂರ್ಣ ಒಣಗಿ, ಯಾವ ವಸ್ತುಗಳೂ ಉಪಯೋಗಕ್ಕೆ ಬಾರದಂತಾಗಿವೆ. ಆದರೂ ಸಂಬಂಧ ಪಟ್ಟವರು ನಿರ್ವಹಣೆ ಮಾಡುವುದು ಹೋಗಲಿ, ಇರುವ ವಸ್ತುಗಳನ್ನೂ ಸಂರಕ್ಷಣೆ ಮಾಡಲು ಮುಂದಾಗುತ್ತಿಲ್ಲ. ಕನಿಷ್ಟ ಪ್ರವೇಶದ ಬಾಗಿಲಿಗೆ ಒಂದು ಕೀಲಿಯನ್ನು ಕೂಡ ಹಾಕದೇ ಹಾಗೇ ಬೀಡಲಾಗಿದೆ ಎಂಬುದು ಜನರ ಆರೋಪವಾಗಿದೆ.
ಪಾಳುಬಿದ್ದ ಕ್ಯಾಂಟಿನ್ ಕಟ್ಟಡ: ಬಾಲವನದಲ್ಲಿ ನಿರ್ಮಿಸಲಾದ ಕ್ಯಾಂಟಿನ್ ಕಟ್ಟಡ ನಿರ್ವಹಣೆ ಕೊರತೆಯಿಂದ ಸಂಪೂರ್ಣ ಪಾಳು ಬಿದ್ದಿದೆ. ಕೋಣೆಗಳ ಬಾಗಿಲು, ಕಿಡಕಿ ಮುರಿದು ಹಾಕಲಾಗಿದೆ. ವಿದ್ಯುತ್ ಬೋರ್ಡ್ ಜೋತು ಬಿದ್ದಿವೆ. ಕಬ್ಬಿಣ ಸರಳುಗಳು ಹಾಳಾಗಿವೆ.
ಸಾವಿರಾರು ರೂ. ಖರ್ಚು ಮಾಡಿ ನೆಟ್ಟಿದ್ದ ಮರಗಳು ಮತ್ತು ಹುಲ್ಲಿನ ಹಾಸಿಗೆ ಸಂಪೂರ್ಣ ಒಣಗಿ ಹೋಗಿದೆ. ಇದರಿಂದ ಸದಾ ಜನ ಇರುವ ವನ ಈಗ ಯಾರೂ ಇಲ್ಲದೆ ಬಿಕೋ ಎನ್ನುತ್ತಿದೆ. ಒಂದು ವೇಳೆ ಬಾಲವನದಲ್ಲಿ ನೀರಿನ ಕೊರತೆ ಎದುರಾದಲ್ಲಿ, ಕನಿಷ್ಟ ಇರುವ ವಸ್ತುಗಳು ಮತ್ತು ಕ್ಯಾಂಟಿನ್ ಕಟ್ಟಡವನ್ನಾದರೂ ಹಾಳಾಗದಂತೆ ನೋಡಿಕೊಳ್ಳಬೇಕು. ಇನ್ನೂ ಕೆಲವು ದಿನ ಹಾಗೇ ಬಿಟ್ಟರೆ, ಒಂದು ವಸ್ತುಕೂಡ ಕೆಲಸಕ್ಕೆ ಬರುವುದಿಲ್ಲ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಬಾಲವನ ನಿರ್ವಹಣೆ ಮಾಡಲು ಮುಂದಾಗಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.