ಪ್ರಾಧ್ಯಾಪಕ ವೃತ್ತಿಗಿದೆ ದೇಶ ರೂಪಿಸುವ ಶಕ್ತಿ: ಗಂಗಾಂಬಿಕಾ
ನಿವೃತ್ತ ಶಿಕ್ಷಕ ಹಣಮಂತರಾವ್ ವಿಸಾಜಿ ಬೀಳ್ಕೊಡುಗೆ ಸಮಾರಂಭ
Team Udayavani, Jun 2, 2019, 4:24 PM IST
ಬಸವಕಲ್ಯಾಣ: ನಿವೃತ್ತ ಶಿಕ್ಷಕ ಹಣಮಂತರಾವ್ ವಿಸಾಜಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ 'ಬಸವಣ್ಣನವರ ವಚನಗಳ ಸಂಗ್ರಹ ಮತ್ತು ಭಾವನವಾದ' ಕೃತಿ ಬಿಡುಗಡೆ ಮಾಡಲಾಯಿತು.
ಬಸವಕಲ್ಯಾಣ: ಪ್ರಾಧ್ಯಾಪಕರ ವೃತ್ತಿ ದೇಶ ರೂಪಿಸುವ ಹಾಗೂ ಹೊಸ ಬೆಳಕಿನ ಕಡೆಗೆ ಕೊಂಡೊಯ್ಯುವ ಕಾಯಕವಾಗಿದೆ ಎಂದು ಹರಳಯ್ಯನವರ ಪೀಠದ ಅಧ್ಯಕ್ಷೆ ಅಕ್ಕ ಡಾ|ಗಂಗಾಂಬಿಕಾ ಪಾಟೀಲ ಹೇಳಿದರು.
ನಗರದ ಬಿಕೆಡಿಬಿ ಯಾತ್ರಿನಿವಾಸದಲ್ಲಿ ನಡೆದ ಶಾಂತಿನಿಕೇತನ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ, ಸಾಹಿತಿ ಹಣಮಂತರಾವ್ ವಿಸಾಜಿ ಅವರ ಬೀಳ್ಕೊಡುಗೆ, ಬಸವಣ್ಣನವರ ವಚನಗಳ ಸಂಗ್ರಹ ಮತ್ತು ಭಾವನವಾದ ಕೃತಿ ಬಿಡುಗಡೆ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದ ಅವರು, ಈ ವೃತ್ತಿಯಲ್ಲಿ ಆತ್ಮತೃಪ್ತಿ ಮತ್ತು ಜ್ಞಾನ ಸಾಧಿಸುವ ಮಾರ್ಗವಿದೆ ಎಂದರು.
ಅಧ್ಯಾಪಕರು ಸಾಮುದಾಯಿಕ ಜ್ಞಾನ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದಾರೆ. ಬಸವಾದಿ ಶರಣರು ಲೋಕ ಜ್ಞಾನದ, ಸಮಾನತೆ ಸಾರಿದ ಅಧ್ಯಾಪಕರಾಗಿದ್ದರು ಎಂದು ಅಭಿಪ್ರಾಯಪಟ್ಟರು. ಹಣಮಂತರಾವ್ ವಿಸಾಜಿಯವರು ಶರಣರ ಹಾಗೂ ಬಸವಣ್ಣನವರ ತತ್ವಗಳನ್ನು ಅನುಸರಿಸಿ ಬದುಕಿದವರು. ಸರಳ ಸೌಜನ್ಯತೆಯನ್ನು ಮೈಗೂಡಿಸಿಕೊಂಡು ಬಂದವರು. ತಮ್ಮ 38 ವರ್ಷಗಳ ಸೇವಾ ಅವಧಿಯಲ್ಲಿ ಬಸವತತ್ವ ಮತ್ತು ಕಾಯಕ ಸಿದ್ಧಾಂತಕ್ಕೆ ಬದ್ಧರಾಗಿ ಬದುಕಿದ ಶರಣ ಚೇತನರು ಎಂದು ಬಣ್ಣಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಹಳ್ಳದ ಮಾತಾನಾಡಿ, ಶಿಕ್ಷಕ ಹುದ್ದೆ ಅತ್ಯಂತ ಪವಿತ್ರವಾದದ್ದು. ವೃತ್ತಿಪರತೆ ಕೊರತೆಯನ್ನು ನೀಗಿಸುವ ಹೊಣೆಗಾರಿಕೆ ಇಂದಿನ ಎಲ್ಲ ಶಿಕ್ಷಕರಲ್ಲಿ ಬರಬೇಕು. ತಮ್ಮ ತಮ್ಮ ವೃತ್ತಿ ಬದ್ಧತೆಯೇ ಅಧ್ಯಾಪಕರನ್ನು ಬೆಳೆಸುತ್ತದೆ. ಆಯ್ಕೆ ಮಾಡಿಯೋ ಆಕಸ್ಮಿಕವಾಗಿಯೋ ಶಿಕ್ಷಕರಾದ ಎಲ್ಲರಲ್ಲಿ ಅಧ್ಯಾಪನ ಕ್ರಿಯೆಗಳು ಪ್ರಾಮಾಣಿಕವಾಗಿ ನಡೆಯಬೇಕು ಎಂದು ಸಲಹೆ ನೀಡಿದರು.
ಬಿಕೆಡಿಬಿ ಸದಸ್ಯ ಶಿವರಾಜ ನರಶೆಟ್ಟಿ, ಭೀಮಾಶಂಕರ ಬಿರಾದಾರ ಮಾತನಾಡಿದರು. ಇದೇ ವೇಳೆ ತಹಶೀಲ್ದಾರ್ ಸಾವಿತ್ರಿ ಶರಣು ಸಲಗರ ಹಾಗೂ ನಿವೃತ್ತ ಉಪನ್ಯಾಸಕಿ ಸರಸ್ವತಿ ಪಾಟೀಲ ಅವರು ಬಸವಣ್ಣನವರ ವಚನಗಳ ಸಂಗ್ರಹ ಪುಸ್ತಕ ಬಿಡುಗಡೆ ಮಾಡಿದರು.
ಜಿಪಂ ಸದಸ್ಯ ಆನಂದ ಪಾಟೀಲ, ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ, ಗಿರೀಶ ರಾಜೋಳಕರ, ತೋಟಗಾರಿಕೆ ಅಧಿಕಾರಿ ಸಂತೋಷ ತಾಂಡೂರ, ಅನುದಾನಿತ ಶಾಲಾ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷ ಅಶೋಕ ರಾಯಪಳ್ಳೆ, ಪ್ರಾಚಾರ್ಯ ಪ್ರಭುಲಿಂಗಯ್ಯ ಟಂಕಸಾಲಿಮಠ, ಶಿವರಾಜ ಖೇಲೆ, ಶ್ರೀಶೈಲ ಹುಡೇದ, ಬಕ್ಕಯ್ಯ ಸ್ವಾಮಿ, ಮಹಾದೇವಪ್ಪ ಇಜಾರೆ, ನಾಗಪ್ಪ ನಿಣ್ಣೆ, ಸುಲೋಚನಾ ಮಾಮಾ, ಅನಂತ ಬಂಡಿ, ರೇವಣಸಿದ್ದಪ್ಪ ಡೊಂಗರೆ, ಪ್ರಶಾಂತ ಬೇಲೂರೆ ಸೇರಿದಂತೆ ಮತ್ತಿತರರು ಇದ್ದರು. ಹಣಮಂತರಾವ್ ವಿಸಾಜಿ ದಂಪತಿಯನ್ನು ಸನ್ಮಾನಿಸಲಾಯಿತು. ದೇವೇಂದ್ರ ಬರಗಾಲೆ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ
Namma Metro; ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.