ಕಾಗಿನೆಲೆ ಮಾದರಿ ಚೌಡಯ್ಯ ಗವಿ ಅಭಿವೃದ್ಧಿಯಾಗಲಿ
ಗಂಗಾಮತಸ್ಥರ ಸಂಘದ ರಾಜ್ಯಾಧ್ಯಕ್ಷ ಬಿ.ಮೌಲಾಲಿ ಭೇಟಿ
Team Udayavani, Jul 14, 2019, 12:14 PM IST
ಬಸವಕಲ್ಯಾಣ: ಅಂಬಿಗರ ಚೌಡಯ್ಯನವರ ಗವಿಗೆ ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ರಾಜ್ಯಾಧ್ಯಕ್ಷ ಬಿ. ಮೌಲಾಲಿ ಭೇಟಿ ನೀಡಿದರು. ಸುನೀಲ ಭಾವಿಕಟ್ಟಿ ಮತ್ತಿತರರು ಇದ್ದರು.
ಬಸವಕಲ್ಯಾಣ: ನಗರದ ನಿಜ ಶರಣ ಅಂಬಿಗರ ಚೌಡಯ್ಯನವರ ಗವಿ ಸ್ಥಳವನ್ನು ಕಾಗಿನೆಲೆ ಮಾದರಿಯಲ್ಲಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ರಾಜ್ಯಾಧ್ಯಕ್ಷ ಬಿ. ಮೌಲಾಲಿ ಒತ್ತಾಯಿಸಿದರು.
ನಗರದ ನಿಜ ಶರಣ ಅಂಬಿಗರ ಚೌಡಯ್ಯನವರ ಗವಿಗೆ ಶನಿವಾರ ಭೇಟಿ ನೀಡಿದಾಗ ವಿವಿಧ ಸಂಘಟನೆಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಗವಿ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ಒದಗಿಸಿಬೇಕು ಎಂದು ಆಗ್ರಹಿಸಿದರು.
ಅಂಬಿಗರ ಚೌಡಯ್ಯನವರು ನಡೆದಾಡಿದ ಕರ್ಮಭೂಮಿ ಹಾಗೂ ಐಕ್ಯಭೂಮಿಯಾದ ಚೌಡದಾನಾಪುರ ಈ ಎರಡು ಪುಣ್ಯ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಸಮಾಜ ಬಾಂಧವರು ಒಗ್ಗಟ್ಟಿನಿಂದ ಪ್ರಯತ್ನಿಸಬೇಕಿದೆ ಎಂದರು. ರಾಜ್ಯದ ನಾಲ್ಕು ವಿಭಾಗ ಮಟ್ಟದಲ್ಲಿ ನಮ್ಮ ಸಮುದಾಯದ ಶಾಲಾ-ಕಾಲೇಜು, ಹಾಸ್ಟೇಲ್ಗಳಿಗಾಗಿ 10 ಎಕರೆ ಭೂಮಿ ಹಾಗೂ ತಲಾ ಒಂದು ಸ್ಥಳಕ್ಕೆ 25 ಕೋಟಿ ರೂ. ಅನುದಾನ ಮಂಜೂರು ಮಾಡಬೇಕು ಎಂದು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿದ್ದೇವೆ. ಅದಕ್ಕೆ ಸಕರಾತ್ಮಕ ಉತ್ತರ ಕೂಡ ಸಿಕ್ಕಿದೆ ಎಂದು ತಿಳಿಸಿದರು.
ಟೊಕರೆ ಕೋಲಿಯ 39 ಪರ್ಯಾಯ ಪದಗಳಾದ ಕೋಲಿ, ಕಬ್ಬಲಿಗ, ಗಂಗಾಮತ, ತಳವಾರ, ಬೆಸ್ತ, ಇನ್ನುಳಿದ ಪರ್ಯಾಯ ಪದಗಳಿಂದ ಕರೆಯುವ ಈ ಸಮುದಾಯವನ್ನು ಎಸ್‌ಟಿ ಪಟ್ಟಿಯಲ್ಲಿ ಸೇರಿಸಲು ಹಲವಾರು ಬಾರಿ ನಾನು ಮತ್ತು ಕೇಂದ್ರ ಸಚಿವೆ ಸಾದ್ವಿ ನಿರಂಜನ ಜ್ಯೋತಿ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ಸೇರಿದಂತೆ ಅನೇಕ ನಾಯಕರು ಪ್ರಧಾನಮಂತ್ರಿ ಮತ್ತು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಎಸ್‌ಟಿ ಪಟ್ಟಿಯಲ್ಲಿ ಸೇರುವ ಕಾಲ ಸಮೀಪ ಬಂದಿದೆ ಎಂದು ಭವಿಷ್ಯ ನುಡಿದರು.
ತಾಲೂಕು ಟೋಕರೆ ಕೋಲಿ ಸಮಾಜದ ಸಂಘದ ಅಧ್ಯಕ್ಷ ಈಶ್ವರ್ ಬೊಕ್ಕೆ, ಅಂಬಿಗರ ಚೌಡಯ್ಯ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ, ಅಂಬಿಗರ ಚೌಡಯ್ಯ ಪಂಚ ಕಮಿಟಿಯ ಅಧ್ಯಕ್ಷ ನಾಗಪ್ಪಾ ಚಾಮಾಲೆ, ನಗರ ಸಭೆ ಸದಸ್ಯ ಮಲ್ಲಿಕಾರ್ಜುನ್ ಬೊಕ್ಕೆ, ಗೋವಿಂದ ಚಾಮಾಲೆ, ಶಂಕರರಾವ್ ಜಮಾದಾರ್, ಮಾರುತಿ ಚಾಟಲೆ, ಶರಣು ಕಂದಗೋಳ್, ಸಂಜುಕುಮಾರ ಸುಣಗಾರ, ಜಗನ್ನಾಥ ಡೋಮೆ, ರಾಜಪ್ಪಾ ಈರಲೆ, ರಾಮಣ್ಣಾ ಮಠಾಳ್, ರವಿ ಕೋಟೆ, ದಿಗಂಬರ ಬೊಕ್ಕೆ, ಶಿವಕುಮಾರ ತೋಗಲುರು, ಅಪ್ಪಾರಾವ್ ಹಣಕುಣಿ, ವೈಜಿನಾಥ ಕಣಜಿ, ಶಣ್ಮುಖಪ್ಪ ವಾಲೀಕಾರ್, ಬಂಡೆಪ್ಪಾ ಚಾಮಲೆ, ಸಂಜು ಸಿರ್ಸೆ, ಸತೀಷ ಮುದಾಳೆ, ಚಂದ್ರಕಾಂತ ಹಳ್ಳಿಖೇಡಕರ್, ಹಣಮಂತ ಜೋಗಿ, ರವಿಂದ್ರ ಖಾಶೆಂಪೂರ್, ಶರಣಪ್ಪಾ ಖಾಶೆಂಪೂರ್, ಸಂತೋಷ ಕೋಳಾರ್, ಬಸವರಾಜ ಗಾಂಧಿನಗರ ಮತ್ತಿತರರು ಇದ್ದರು.
ಅಂಬಿಗರ ಚೌಡಯ್ಯ ಯುವ ಸೇನೆ, ತಾಲೂಕು ಟೋಕರೆ ಕೋಲಿ ಸಮಾಜ ಸಂಘ, ಅಂಬಿಗರ ಚೌಡಯ್ಯ ಪಂಚ ಕಮಿಟಿ, ಅಂಬಿಗರ ಚೌಡಯ್ಯನವರ ಅಭಿಮಾನಿಗಳ ವತಿಯಿಂದ ಬಿ.ಮೌಲಾಲಿ ಅವರಿಗೆ ಸನ್ಮಾನ ಆಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.