ತಳ ಕಾಣುತ್ತಿದೆ ಮುಲ್ಲಾಮಾರಿ
Team Udayavani, Jul 24, 2019, 11:23 AM IST
ಬಸವಕಲ್ಯಾಣ: ಖೇರ್ಡಾ (ಬಿ) ಗ್ರಾಮದ ಮುಲ್ಲಾಮಾರಿ ಜಲಾಶಯದ ನೀರು ತಳಮಟ್ಟಕ್ಕೆ ತಲುಪಿದೆ.
ಬಸವಕಲ್ಯಾಣ: ಪ್ರಸಕ್ತ ವರ್ಷ ಮುಂಗಾರು ಮಳೆ ಆರಂಭವಾಗಿ ಎರಡು ತಿಂಗಳು ಕಳೆಯುತ್ತ ಬಂದರೂ ತಾಲೂಕಿನಲ್ಲಿ ನಿರೀಕ್ಷೆಯಷ್ಟು ಮಳೆ ಸುರಿದಿಲ್ಲ. ಹೀಗಾಗಿ ಬಸವಕಲ್ಯಾಣ ತಾಲೂಕಿನ ಖೇರ್ಡಾ (ಬಿ) ಗ್ರಾಮದ ಮುಲ್ಲಾಮಾರಿ ಜಲಾಶಯ ನೀರಿನ ಮಟ್ಟ ಇಳಿಮುಖವಾಗುತ್ತಿದೆ.
ಜಲಾಶಯ 1ಟಿಎಂಸಿ ನೀರು ಶೇಖರಣೆ ಸಾಮರ್ಥ್ಯ ಹೊಂದಿರುವ ಈ ಜಲಾಶಯವು ಹುಮನಾಬಾದ ತಾಲೂಕಿನ ಹಳ್ಳಿಖೇಡ (ಕೆ), ಧನ್ನೂರ್ (ಆರ್) ಹಾಗೂ ಕಲಬುರಗಿ ಜಿಲ್ಲೆ ಸೊಂತ, ಚಿತ್ತಕೋಟಾ, ಗೊಬ್ಬರವಾಡಿ, ಕಿಣ್ಣಿ ಸೇರಿದಂತೆ ವಿವಿಧ ಗ್ರಾಮಗಳ ಜನರಿಗೆ ಕುಡಿಯಲು ಹಾಗೂ ಜಮೀನುಗಳಿಗೆ ನೀರು ಕೊಡುವ ಸಂಜೀವಿನಿಯಾಗಿತ್ತು. ಆದರೆ ಮಳೆ ಕೊರತೆಯಿಂದ ಜಲಾಶಯಕ್ಕೆ ಹೊಸ ನೀರು ಹರಿದು ಬಂದಿಲ್ಲ. ಹೀಗಾಗಿ ಜಲಾಶಯದ ನೀರಿನ ಮಟ್ಟ ಕುಸಿದಿದೆ. ಹಾಗಾಗಿ ಕುಡಿಯಲು ಮತ್ತು ಜಮೀನುಗಳಿಗೆ ನೀರು ಹರಿಸುವುದನ್ನು ಕೂಡ ಬಂದ್ ಮಾಡಲಾಗಿದೆ.
ಜಲಾಶಯದಲ್ಲಿ ಸದ್ಯ 0.142 ಟಿಎಂಸಿ ನೀರಿದ್ದು, ತಳಮಟ್ಟದ ನೀರು 0.082 ಹಾಗೂ ಒಟ್ಟು 0.224 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದೆ. ಸದ್ಯ ಒಳಹರಿವು ಮತ್ತು ಹೊರ ಹರಿವೂ ಇಲ್ಲ. ಆರ್‌ಬಿಸಿ 0.0. ಮತ್ತು ಎಲ್ಬಿಸಿ 0.00 ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಲಾಶಯ ಮೇಲ್ದಂಡೆ ಯೋಜನೆಯ ವೇಸ್ಟ್‌ವೇರ್ ನಾಲೆಯಿಂದ, ಎಡ ಮತ್ತು ಬಲದಂಡೆ ಕಾಲುವೆಯಿಂದ ನೀರು ಹರಿಯುವ ಬದಲು, ಹನಿ ನೀರಿಲ್ಲದೆ ನಾಲೆಗಳು ಮರಭೂಮಿಯಂತಾಗಿ ಬಿರುಕು ಬಿಟ್ಟಿದ್ದು, ಸುತ್ತಮುತ್ತಲಿನ ಪ್ರದೇಶ ಬಿಕೋ ಎನ್ನುತ್ತಿದೆ.
ಕೆಲ ವರ್ಷಗಳಿಂದ ಮಳೆ ಕೈ ಕೊಡುತ್ತಿದ್ದು, ಈ ವರ್ಷವಾದರೂ ಉತ್ತಮ ಮಳೆ ಆಗುತ್ತದೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಮತ್ತು ಸಾರ್ವಜನಿಕರಿಗೆ ಚಿಂತೆಯಲ್ಲಿಯೇ ಕಾಲ ಕಳೆಯುವಂತೆ ಮಾಡಿದೆ.
ಮಳೆಗಾಲ ಆರಂಭವಾಗಿ ಎರಡು ತಿಂಗಳಾದರೂ ಹಳ್ಳ-ಕೊಳ್ಳಗಳಲ್ಲಿಯೂ ನೀರಿಲ್ಲ. ಕೊಳವೆ ಬಾವಿ ಮತ್ತು ತೆರೆದ ಬಾವಿಗಳಿಗೂ ಹೊಸ ನೀರು ಬಂದಿಲ್ಲ. ಇನ್ನೂ ಕೆಲ ದಿನಗಳಲ್ಲಿ ಮಳೆ ಬಾರದಿದ್ದರೆ ಪರಿಸ್ಥಿತಿ ಇನ್ನೂ ಹದಗೆಡಲಿದೆ.
ಮೇ ತಿಂಗಳವರೆಗೆ ಮುಲ್ಲಾಮಾರಿ ಜಲಾಶಯ ನೀರನ್ನು ಬಳಕೆ ಮತ್ತು ಜಾನುವಾರುಗಳಿಗಾಗಿ ಬಿಡಲಾಗುತ್ತಿತ್ತು. ಮಳೆಗಾಲ ಪ್ರಾರಂಭದವಾದ ನಂತರ ನೀರು ಹರಿಸುವುದನ್ನು ಬಂದ್ ಮಾಡಲಾಯಿತು. ಆದರೆ ಮಳೆ ಕೊರತೆಯಿಂದ ಜಲಾಶಯದಲ್ಲಿ ನಿರೀಕ್ಷೆಗೆ ತಕ್ಕಂತೆ ನೀರು ಸಂಗ್ರಹವಾಗಿಲ್ಲ. ಇದರಿಂದ ರೈತರು ಮಳೆ ನೀರಿನ ಮೇಲೆಯೇ ಅವಲಂಬನೆಯಾಗುವ ಸ್ಥಿತಿಯಿದೆ.
•ಲಿಂಗರಾಜ ಪಾಟೀಲ,
ಮುಲ್ಲಾಮಾರಿ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ, ಖೇರ್ಡಾ(ಬಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.