ಶಾಲೆಯಿಂದ-ಶಾಲೆಗೆ ಶಿಕ್ಷಕರ ನಿಯೋಜಿಸದಿರಿ
ಶಿಥಿಲಾವಸ್ಥೆ ಶಾಲಾ ಕಟ್ಟಡ ತೆರವುಗೊಳಿಸಿ •ನೀರಿನ ಸಮಸ್ಯೆ ಇರುವಲ್ಲಿ ಶಾಶ್ವತ ಪರಿಹಾರ ಹುಡುಕಿ
Team Udayavani, Aug 7, 2019, 10:30 AM IST
ಬಸವಕಲ್ಯಾಣ: ನಗರದ ತಾಲೂಕು ಪಂಚಾಯತ್ ಕೆಡಿಪಿ ಸಭೆಯಲ್ಲಿ ಶಾಸಕ ಬಿ. ನಾರಾಯಣರಾವ್ ಮಾತನಾಡಿದರು.
ಬಸವಕಲ್ಯಾಣ: ಶಿಕ್ಷಕರನ್ನು ಶಾಲೆಯಿಂದ- ಶಾಲೆಗೆ ನಿಯೋಜನೆ ಮಾಡುವುದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ನಿಯೋಜನೆ ಮಾಡಬಾರದು ಎಂದು ಶಾಸಕ ಬಿ.ನಾರಾಯಣರಾವ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದಲ್ಲಿ ಮಂಗಳವಾರ ನಡೆದ ತಾಲೂಕು ಪಂಚಾಯತ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿಯಮದ ಪ್ರಕಾರ ವರ್ಗಾವಣೆ ಆಗಲಿ, ಹೊರತು ನಿಮ್ಮ ಕಚೇರಿಯಿಂದ ಶಿಕ್ಷಕರನ್ನು ನಿಯೋಜನೆ ಮಾಡುವ ಕೆಲಸ ಆಗಬಾರದು ಎಂದರು.
ಕಳೆದ ವರ್ಷ ತಾಲೂಕಿನ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.40 ಫಲಿತಾಂಶ ಬಂದಿದ್ದು, ಇದರ ಬಗ್ಗೆ ಶಿಕ್ಷಕರು ಹೆಚ್ಚು ಗಮನ ಹರಿಸಬೇಕು ಎಂದು ಸ್ಥಳದಲ್ಲಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ತಾಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಣೆಗಳನ್ನು ತೆರವುಗೊಳಿಸಿ, ಆಟಕ್ಕಾಗಿ ಸ್ಥಳ ಬಿಟ್ಟು ಉಜಳಂಬ ಗ್ರಾಮದ ಮಾದರಿಯಲ್ಲಿ ನೂತನ ಶಾಲಾ ಕಟ್ಟಡಗಳನ್ನು ನಿರ್ಮಿಸಬೇಕು ಎಂದು ಸಂಬಂಧ ಪಟ್ಟ ಗುತ್ತಿಗೆದಾರರಿಗೆ ಹೇಳಿದರು.
ತಾಲೂಕು ಪಂಚಾಯತ್ ವ್ಯವಸ್ಥಾಪಕ ಜಯಪ್ರಕಾಶ ಚವ್ಹಾಣ ಮಾತನಾಡಿ, ಟ್ಯಾಂಕರ್‌ಗಳಿಂದ ಗ್ರಾಮಗಳಿಗೆ ನೀರು ಸರಬರಾಜು ಮಾಡಿದ 28 ಲಕ್ಷ ರೂ. ಬಾಕಿ ಉಳಿದುಕೊಂಡಿದೆ ಎಂದು ಸಭೆಯ ಗಮನಕ್ಕೆ ತಂದಾಗ, ಶಾಸಕ ಬಿ.ನಾರಾಯಣರಾವ್ ಅವರು, ಟ್ಯಾಂಕರ್‌ನಿಂದ ನೀರು ಪೂರೈಸುವ ಗ್ರಾಮಗಳಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಿ. ಇದರಿಂದ ಸಾಕಷ್ಟು ಹಣ ಉಳಿಯುತ್ತದೆ ಎಂದರು.
ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ ಮಾತನಾಡಿ, ಅಧಿಕಾರಿಗಳು ಸಮಯ ಪಾಲನೆ ಮಾಡುವುದರ ಜೊತೆಗೆ, ಕಚೇರಿಗೆ ಸಮಸ್ಯೆ ಎಂದು ಬರುವ ಸಾರ್ವಜನಿಕರನ್ನು ಗೌರವ ದಿಂದ ಕಾಣಬೇಕು ಎಂದು ಸಲಹೆ ನೀಡಿದರು.
ಪಿಆರ್‌ಈ ಅಧಿಕಾರಿ ರಾಜಕುಮಾರ ಸಾಹುಕಾರ, ಎಚ್ಕೆಆರ್‌ಡಿಬಿ ಯೋಜನೆಯಡಿ 2015-18 ವರೆಗೆ ಕಾಮಗಾರಿ ಪೂರ್ಣಗೊಂಡಿದ್ದು, 2017-18ರ 77 ಕಾಮಗಾರಿ ಪೈಕಿ 71 ಮುಗಿಸಲಾಗಿದೆ. ಹಾಗೂ 2018-19ನೇ ಸಾಲಿನ ಒಟ್ಟು 125ರ ಪೈಕಿ 40 ಮುಗಿಸಲಾಗಿದೆ. 85 ಕಾಮಗಾರಿಗಳು ಚಾಲ್ತಿಯಲ್ಲಿವೆ ಎಂದು ಸಭೆಯ ಗಮನಕ್ಕೆ ತಂದರು. ನಂತರ ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಣ್ಣನಿರಾವರಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.
ಸ್ಥಾಯಿ ಸಮಿತಿ ಅಧ್ಯಕ್ಷ ಓಂಕಾರ ಪಾಟೀಲ ಮಾತನಾಡಿದರು. ತಾಪಂ ಉಪಾಧ್ಯಕ್ಷ ಸಂಗಮೇಶ ಬಿರಾದಾರ್, ಪ್ರಭಾರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.