ಶರಣರ ಪರಂಪರೆ ಉಳಿಸಿದ ಹಾರಕೂಡ ಮಠ
ಡಾ|ಚೆನ್ನವೀರ ಶಿವಾಚಾರ್ಯರ 57ನೇ ಜನ್ಮದಿನಾಚರಣೆಯಲ್ಲಿ ಸಂಶೋಧಕ ಡಾ| ಸವದತ್ತಿಮಠ ಅಭಿಮತ
Team Udayavani, Nov 9, 2019, 11:39 AM IST
ಬಸವಕಲ್ಯಾಣ: ಹಾರಕೂಡ ಎಂಬ ಚಿಕ್ಕ ಗ್ರಾಮದ ಸಂಸ್ಥಾನ ಹಿರೇಮಠಕ್ಕೆ ಲಿಂ. ಚನ್ನಬಸವ ಶಿವಯೋಗಿಗಳ ನಂತರ ಕೀರ್ತಿ ತಂದವರು ದಾಸೋಹ ರತ್ನ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ|ಚೆನ್ನವೀರ ಶಿವಾಚಾರ್ಯರು ಎಂದು ಧಾರವಾಡದ ಸಂಶೋಧಕ, ಹಿರಿಯ ಸಾಹಿತಿ ಡಾ|ಸಂಗಮೇಶ ಸವದತ್ತಿಮಠ ಹೇಳಿದರು.
ಹಾರಕೂಡದ ಡಾ|ಚೆನ್ನವೀರ ಶಿವಾಚಾರ್ಯರ 57ನೇ ಜನ್ಮದಿನದ ಅಂಗವಾಗಿ ಶುಕ್ರವಾರ ನಗರದ ಬಿಕೆಡಿಬಿ ಸಭಾಭವನದಲ್ಲಿ ನಡೆದ “ಸಾಹಿತ್ಯ ಚಿಂತನ ಸಮಾವೇಶ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
40 ವರ್ಷಗಳಿಂದ ಮಠದಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕಗಳನ್ನು ನಾನು ನೋಡುತ್ತಾ ಬಂದಿದ್ದೇನೆ. ಮಠದಲ್ಲಿ ಹಿಂದೂ-ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಎಂಬ ಭಾವನೆ ಇಲ್ಲದೆ ಪ್ರತಿಯೊಬ್ಬ ಕಲಾವಿದರು ಹಾರಕೂಡ ಮಠದಲ್ಲಿ ಜರುಗುವ ಧಾರ್ಮಿಕ ಮತ್ತು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಏಕೈಕ ಮಠ ಇದಾಗಿದೆ.
ಶ್ರೀಗಳು ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶ ಕಲಾವಿದರನ್ನು ಗುರುತಿಸಿ ಪ್ರತಿವರ್ಷ ಪ್ರಶಸ್ತಿ ನೀಡುತ್ತಿರುವುದು ಕಲಾವಿದರಲ್ಲಿ ಪ್ರೋತ್ಸಾಹ ಹಾಗೂ ಉಲ್ಲಾಸ ತರುವಂತೆ ಮಾಡಿದೆ ಎಂದರು.
ಡಾ| ಚೆನ್ನವೀರ ಶಿವಾಚಾರ್ಯರು ಶರಣ ಪರಂಪರೆ ಸಮನ್ವಯತೆ ಕಾಪಾಡಿಕೊಡು ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಹೀಗಾಗಿ ಮಠವನ್ನು ಭಕ್ತಾದಿಗಳು ಕೇವಲ ಧರ್ಮೋದ್ಧಾರಕ್ಕಾಗಿ ಸಿಮೀತ ಮಾಡದೆ ಸಮನ್ವಯಕ್ಕೆ ಮಹತ್ವ ನೀಡಬೇಕು. ಹಾಗೂ ಶ್ರೀಗಳ 60ನೇ ಜನ್ಮದಿನವನ್ನು ರಾಷ್ಟ್ರಮಟ್ಟದಲ್ಲಿ ಆಚರಿಸಬೇಕು. 60 ಪುಸ್ತಕಗಳು ಪ್ರಕಟಗೊಳ್ಳಬೇಕು.
ಹಾರಕೂಡ ಮಠದ ಗ್ರಂಥ ದತ್ತಿ ಸ್ಥಾಪನೆ ಆಗಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ಅನುಭವ ಮಂಟಪ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಹಾರಕೂಡ ಹಾಗೂ ಭಾಲ್ಕಿ ಮಠಗಳು ಜನಮುಖೀ ಮಠಗಳಾಗಿವೆ. ಮಠದಲ್ಲಿ ಪ್ರತಿವರ್ಷ ಸಾಹಿತ್ಯ, ಸಂಗೀತ, ಸಂಸ್ಕೃತ ಮತ್ತು ನಾಟಕದಲ್ಲಿ ಸಾಧನೆ ಮಾಡಿದ ಕಲಾವಿದರಿಗೆ ನೀಡುವ ಶ್ರೀಚೆನ್ನ ಪ್ರಶಸ್ತಿ ಕಲ್ಯಾಣ ಕರ್ನಾಟಕ ಅತಿ ದೊಡ್ಡ ಪ್ರಶಸ್ತಿಯಾಗಿದೆ ಎಂದು ಬಣ್ಣಿಸಿದರು.
ಶ್ವಗುರು ಬಸವಣ್ಣನವರ ಸಾರವನ್ನು ಮನಸ್ಸಿನಲ್ಲಿ ತುಂಬಿಕೊಂಡಿದ್ದು, ಬಸವ ಸಿದ್ಧಾಂತ ಬದುಕುವುದು ಎಂದರ್ಥ. ಹೀಗಾಗಿ ಹಾರಕೂಡ ಶ್ರೀಗಳು ಆ ದಾರಿಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ನಂತರ ತಹಶೀಲ್ದಾರ್ ಸಾವಿತ್ರಿ ಶರಣು ಸಲಗರ, ಶ್ರೀದೇವಿ ಖಂಡಾಳೆ, ಡಾ|ಗವಿಸಿದ್ಧಪ್ಪಾ ಪಾಟೀಲ, ಹಿರೆನಾಗಾಂವ ಗ್ರಾಮದ ಶ್ರೀ ಜಯಶಾಂತಲಿಂಗ ಮಹಾಸ್ವಾಮಿಗಳು ಶ್ರೀಗಳ ಕುರಿತು ಮಾತನಾಡಿದರು. ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಬಿ.ನಾರಾಯಣರಾವ್ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಗುರುಬಸವ ಪಟ್ಟದ್ದೇವರು, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮುತ್ತಿಮೂಡ, ಜಿಪಂ ಸದಸ್ಯರಾದ ಆನಂದ ಪಾಟೀಲ, ಗುಂಡುರೆಡ್ಡಿ ಹಣಮಂತವಾಡಿ(ಆರ್), ಅಣ್ಣಾರಾವ್ ರಾಠೊಡ, ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ಬಾಬು ಹೊನ್ನಾನಾಯಕ, ಪ್ರದೀಪ ವಾತಡೆ, ಜಗನ್ನಾಥ ಪಾಟೀಲ, ಮನೋಜ ಮಾಶೆಟ್ಟಿ, ಸುನೀಲ ಪಾಟೀಲ ಹಾಗೂ ಸ್ವಾಗತ ಸಮಿತಿ ಚಂದ್ರಕಾಂತ ಸ್ವಾಮಿ ನಾರಾಯಣಪೂರ, ಪ್ರಭುಲಿಂಗಯ್ನಾ ಟಂಕಸಾಲಿಮಠ, ಡಿ.ಕೆ.ದಾವುದ್, ಮಲ್ಲಯ್ನಾ ಸ್ವಾಮಿ ಹಿರೇಮಠ, ಸಿದ್ರಾಮ ಗುದಗೆ, ಶಿವರಾಜ ನರಶೆಟ್ಟಿ, ಸೂರ್ಯಕಾಂತ ಮಠ, ಸಿದ್ರಾಮ ಕವಳೆ, ಡಾ|ಬಸವರಾಜ ಸ್ವಾಮಿ, ರಾಜಕುಮಾರ ದೇಗಾಂವ, ಪ್ರೊ| ರುದ್ರೇಶ್ವರಸ್ವಾಮಿ ಗೋರ್ಟಾ ಮತ್ತಿತರರು ಇದ್ದರು.
‘ಶ್ರೀಚೆನ್ನ ಸಂಭ್ರಮ’ ಪುಸ್ತಕ ಬಿಡುಗಡೆ: ಕಾರ್ಯಕ್ರಮದಲ್ಲಿ ಸರಸ್ವತಿ ಪಾಟೀಲ ಬರೆದ “ಶ್ರೀಚೆನ್ನ ಸಂಭ್ರಮ’ ಪುಸ್ತಕವನ್ನು ತಹಶೀಲ್ದಾರ್ ಸಾವಿತ್ರಿ ಶರಣು ಸಲಗರ ಬಿಡುಗೊಡೆಗೊಳಿಸಿದರು. ಮತ್ತು ಹಾರಕೂಡದ ದಿನದರ್ಶಿಕೆ ಬಿಡುಗಡೆ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.