ಭಾರತೀಯರ ಪುರಾತನ ಸಂಸ್ಕೃತಿ ಶ್ರೇಷ್ಠ: ದೇಶಪಾಂಡೆ

ಸೆ.27-28 ರಂದು ಘನಲಿಂಗ ರುದ್ರಮುನಿ ಶಿವಾಚಾರ್ಯರ 14ನೇ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ

Team Udayavani, Aug 26, 2019, 1:06 PM IST

26-Agust-23

ಬಸವಕಲ್ಯಾಣ: ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಕೀಲ ಅರುಣಕುಮಾರ ದೇಶಪಾಂಡೆ ಮಾತನಾಡಿದರು.

ಬಸವಕಲ್ಯಾಣ: ಭಾರತೀಯ ಪುರಾತನ ಸಂಸ್ಕೃತಿ ಹಾಗೂ ಶ್ರೇಷ್ಠ ಸಂಸ್ಕೃತಿಯಾಗಿದೆ. ಹಾಗಾಗಿ ವಿವಿಧತೆಯಲ್ಲಿ ಏಕತೆ ಎಂಬ ಭಾವನೆ ಭಾರತೀಯರಲ್ಲಿದೆ. ನಮ್ಮ ಸಂಸ್ಕೃತಿಯನ್ನು ಜಗತ್ತೆ ಗೌರವಿಸುತ್ತವೆ ಎಂದು ಹಿರಿಯ ವಕೀಲ ಅರುಣಕುಮಾರ ದೇಶಪಾಂಡೆ ಹೇಳಿದರು.

ಪವಿತ್ರ ಶ್ರಾವಣ ಮಾಸದ ಅಂಗವಾಗಿ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರ ಗವಿಮಠ ಟ್ರಸ್ಟ್‌, ಶ್ರೀ ಮದ್ವೀರಶೈವ ಸದ್ಬೋಧನ ಸಂಸ್ಥೆ ಮತ್ತು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸಂಯುಕ್ತಾಶ್ರಯದಲ್ಲಿ ನಗರದ ಗವಿಮಠದಲ್ಲಿ ವೀರಶೈವ ಲಿಂಗಾಯತ ಧರ್ಮ ಗ್ರಂಥವಾದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾನವ ಧರ್ಮ ಶ್ರೇಷ್ಠ ಧರ್ಮ. ಶ್ರಾವಣ ಮಾಸ ಗುರುಗಳ ಉಪದೇಶ ಕೇಳಿ ಜನ್ಮ ಪಾವನ ಮಾಡಿಕೊಳ್ಳುವುದೇ ಪವಿತ್ರ ಮಾಸ. ಶ್ರೀ ಅಭಿನವ ಶ್ರೀಗಳು ಚಿಕ್ಕವಯಸ್ಸಿನಲ್ಲಿಯೇ ಸದಾ ಧಾರ್ಮಿಕ, ಸಾಮಾಜಿಕ ಕಾರ್ಯ ಮಾಡುತ್ತ ಭಕ್ತರ ಸೇವೆಯಿಂದ ಗವಿಮಠವನ್ನು ಅದ್ಭುತವಾಗಿ ಅಭಿವೃದ್ಧಿ ಮಾಡಿರುವುದು ಸಾಧನೆಯಾಗಿದೆ ಎಂದರು.

ಕೌಡಿಯಾಳದ ಕ್ರಿಸ್ತ ಆಶ್ರಮದ ಫಾದರ್‌ ಬಾಪು ಮಾತನಾಡಿ, ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಪವಿತ್ರ ಸಾಹಿತ್ಯವಾಗಿವೆ. ಗುರುಗಳ ಮೂಲಕ ಈ ಉಪದೇಶ ಕೇಳುವುದೇ ಒಂದು ಭಾಗ್ಯ. ಶ್ರೀ ಅಭಿನವ ಸ್ವಾಮೀಜಿಗಳು ಎಲ್ಲರನ್ನು ಪ್ರೀತಿಸುತ್ತಾರೆ. ಹೀಗಾಗಿ ಎಲ್ಲರೂ ಇವರನ್ನು ಭಕ್ತಿಯಿಂದ ಗೌರವಿಸುತ್ತಾರೆ ಎಂದು ನುಡಿದರು.

ಸಾನ್ನಿಧ್ಯ ವಹಿಸಿದ್ದ ಗವಿಮಠದ ಘನಲಿಂಗ ರುದ್ರಮುನಿ ಶಿವಾಚಾರ್ಯರು ತಮ್ಮ ಆಶೀರ್ವಚನದಲ್ಲಿ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಮೂಲಕ ಮಾನವ ಧರ್ಮವನ್ನು ಬೋಧಿಸಿದ್ದಾರೆ. ಜಾತಿ, ಧರ್ಮ ಬೇಧ ಮಾಡದೇ ಎಲ್ಲರಿಗೂ ಪ್ರೀತಿಸುವುದನ್ನು ಕಲಿಸಿದ್ದಾರೆ. ಪ್ರೀತಿ ಇದ್ದಲ್ಲಿ ದೇವರ ವಾಸ ಮಾಡುತ್ತಾನೆ. ಹೀಗಾಗಿ ನಾವು ಚರ್ಚ್‌ಗೆ ಹೋಗುತ್ತೇವೆ. ಫಾದರ್‌ ನಮ್ಮ ಮಠಕ್ಕೆ ಬಂದಿದ್ದಾರೆ ಎಂದರು. ನಿವೃತ್ತ ಎಆರ್‌ಟಿಒ ನೀಲಕಂಠ ಮುನ್ನೋಳ್ಳಿ ಅಧ್ಯಕ್ಷತೆ ವಹಿಸಿದ್ದರು. ನಂತರ ಪ್ರೊ. ರುದ್ರೇಶ್ವರ ಸ್ವಾಮಿ ಮಾತನಾಡಿ, ಸೆ.27 ಹಾಗೂ 28 ರಂದು ನಡೆಯಲಿರುವ ಘನಲಿಂಗ ರುದ್ರಮುನಿ ಶಿವಾಚಾರ್ಯರ 14ನೇ ಪಟ್ಟಾಧಿಕಾರ ವರ್ಧಂತಿ ಮಹೋತ್ಸವದ ಬಗ್ಗೆ ಮಾಹಿತಿ ನೀಡಿದರು.

ಅರ್ಜುನ ಕನಕ, ಶರಣಪ್ಪ ಬಿರಾದಾರ, ಗುರುಲಿಂಗಯ್ಯ ಕಟಗಿಮಠ, ಮಲ್ಲಿಕಾರ್ಜುನ ಅಲಶೆಟ್ಟಿ, ಶಿವಕುಮಾರ ಮಠ, ಮಲ್ಲಿಕಾರ್ಜುನ ನಂದಿ, ದಯಾನಂದ ಶೀಲವಂತ, ಆರ್‌. ಎಸ್‌. ಪಾಟೀಲ, ಎಸ್‌. ಕೆ.ಪಟವಾಡಿ, ರವೀಂದ್ರ ಹಾರಕೂಡ, ಶೇಖರ್‌ ವಸ್ತ್ರದ, ರೇವಣಸಿದ್ಧಯ್ಯ ಮಠಪತಿ, ಮಹಾದೇವ ಕಾಮಶೆಟ್ಟಿ, ವಿಜಯಕುಮಾರ ಚಿದ್ರಿ, ಉಪನ್ಯಾಸಕ ಬಸವರಾಜ ಹಿರೇಮಠ, ಸೂರ್ಯಪ್ರಕಾಶ ವಗ್ಗೆ, ಶಿವಶಂಕರ ರಾಮಣ್ಣನವರ, ಸಂತೋಷ ಬಿರಾದಾರ, ಅಭಿಷೇಕ ರಾಮಣ್ಣನವರ, ಗುರುನಾಥ ಕೊಶೆಟ್ಟೆ, ಮಲ್ಲಿಕಾರ್ಜುನ ಅಲಗೂಡೆ ಇದ್ದರು. ಸಂಸ್ಥೆ ಅಧ್ಯಕ್ಷ ಬಸವಂತಪ್ಪ ಲವಾರೆ ಸ್ವಾಗತಿಸಿದರು. ವಕೀಲ ಬಸವರಾಜ ಪಾರಾ ನಿರೂಪಿಸಿದರು. ಸೂರ್ಯಕಾಂತ ಶೀಲವಂತ ವಂದಿಸಿದರು.

ಟಾಪ್ ನ್ಯೂಸ್

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

Police

Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

1-koo

Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

DK SHI NEW

DCM; ಸಂಪನ್ಮೂಲ ಕ್ರೋಡೀಕರಣ ಸಮಿತಿ ಜತೆ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.