ಬಸವ ಜನ್ಮಸ್ಥಳದಲ್ಲಿ ಅದ್ಧೂರಿ ಜಯಂತಿ
ಬಸವಣ್ಣನ ತೊಟ್ಟಿಲೋತ್ಸವ ಸಂಭ್ರಮಕ್ಕೆ ಸಾಕ್ಷಿಯಾದ ಭಕ್ತ ಸಮೂಹ
Team Udayavani, May 8, 2019, 1:07 PM IST
ಬಸವನಬಾಗೇವಾಡಿ: ಬಸವ ಜಯಂತಿ ನಿಮಿತ್ತ ಬಸವ ಸ್ಮಾರಕದಲ್ಲಿ ನಡೆದ ಬಸವಣ್ಣನ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಭಕ್ತ ಸಮೂಹ.
ಬಸವನಬಾಗೇವಾಡಿ: ಬಸವಣ್ಣನವರ ಜನ್ಮಸ್ಥಳ ಬಸವನಬಾಗೇವಾಡಿ ಪಟ್ಟಣದ ಬಸವ ಜನ್ಮ ಸ್ಮಾರಕದಲ್ಲಿ ಬಸವೇಶ್ವರರ ತೊಟ್ಟಿಲೋತ್ಸವ ಕಾರ್ಯಕ್ರಮ ಸಂಭ್ರಮದಿಂದ ಆಚರಿಸಲಾಯಿತು.
ಮಂಗಳವಾರ ಪಟ್ಟಣದ ಐತಿಹಾಸಿಕ ಬಸವೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಮೂಲನಂದೀಶ್ವರನಿಗೆ ವಿಶೇಷ ಅಭಿಷೇಕ ನೆರವೇರಿತು. ನಂತರ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಹಾರಾಷ್ಟ್ರದ ಬೀಳೂರ ಸಂಕದ ವಿರಕ್ತ ಮಠದ ಮುರುಘೇಂದ್ರ ಸ್ವಾಮೀಜಿ ಮತ್ತು ಸಿದ್ದಲಿಂಗ ಸ್ವಾಮೀಜಿ ಅವರನ್ನು ಮಠದಿಂದ ಸಕಲ ವಾದ್ಯ ವೈಭವದ ಮೆರವಣಿಗೆ ಮೂಲಕ ಬಸವ ಸ್ಮಾರಕಕ್ಕೆ ಬರ ಮಾಡಿಕೊಳ್ಳಲಾಯಿತು. ಮುರುಘೇಂದ್ರ ಶ್ರೀಗಳು ಹಾಗೂ ಸಿದ್ದಲಿಂಗ ಶ್ರೀಗಳ ಅಧ್ಯಕ್ಷತೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಅವರು ಬಾಲ ಬಸವಣ್ಣನ ಬೆಳ್ಳಿ ಮೂರ್ತಿಯನ್ನು ತೊಟ್ಟಿಲಿಗೆ ಹಾಕುವ ಮೊಲಕ ತೊಟ್ಟಿಲೋತ್ಸವಕ್ಕೆ ಚಾಲನೆ ನೀಡಿದರು.
ನಂತರ ಸುಮಂಗಲೆಯರು ಜೋಗುಳ ಹಾಡಿ ತೊಟ್ಟಿಲ ತೊಗಿದರು. ಬಸವ ಜನ್ಮ ಸ್ಮಾರಕದಲ್ಲಿ ಜಮಾಯಿಸಿದ ಅಪಾರ ಜನಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ತೊಟ್ಟಿಲು ಹಾಗೂ ನಾಮಕರಣ ನಡೆಯಿತು. ಕೊಪ್ಪಳ, ರಾಯಚೂರು, ಗದಗ, ಹುಬ್ಬಳ್ಳಿ, ಬಳ್ಳಾರಿ, ಕಲಗುರಗಿ, ದಾವಣಗೆರೆ ಹಾಗೂ ಮಹಾರಾಷ್ಟ್ರದ ಸೇರಿದಂತೆ ವಿವಿಧ ಜಿಲ್ಲೆಯಿಂದ ಆಗಮಿಸದ್ದ ಭಕ್ತರು ತೊಟ್ಟಿಲು ತೂಗಿ ಪುನೀತರಾದರು.
ಮದುವೆಯಾದ ನಂತರ ಮಕ್ಕಳ ಭಾಗ್ಯ ಸಿಗದೆ ಇರುವ ಮಹಿಳೆಯರು ಈ ಬಸವೇಶ್ವರ ತೊಟ್ಟಿಲು ಕೆಳಗೆ ಕೂಡಿಸಿದರೆ ವರ್ಷದೊಳಗೆ ಮಕ್ಕಳ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆಯಿದೆ. ತಾಲೂಕು ಸೇರಿದಂತೆ ರಾಜ್ಯ ವಿವಿಧ ಪ್ರದೇಶದ ಮಹಿಳೆಯರು ತೊಟ್ಟಿಲು ಕಾರ್ಯಕ್ರಮದಲ್ಲಿ ಭಾಗವಹಿಸಿತ್ತಾರೆ. ಇನ್ನೂ ಕೆಲ ಮನೆತನದವರು ಕಲ್ಲು ಸಕ್ಕರೆ ಗುಗ್ಗರಿ ವಿತರಿಸಿದರು. ಬಸವ ಜಯಂತಿ ಅಂಗವಾಗಿ ಬಸವೇಶ್ವರ ದೇವಸ್ಥಾನ ಬಸವ ಜನ್ಮಸ್ಮಾರಕ ಹಾಗೂ ಬಸವೇಶ್ವರ ವೃತ್ತವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸ್ಮಾರಕದ ಮುಂದೆ ಬಸವಸೈನ್ಯ ಸೇರಿದಂತೆ ವಿವಿಧ ಸಂಘಟನೆಗಳು ಮಜ್ಜಿಗೆ, ಶರಬತ್ ವ್ಯವಸ್ಥೆ ಮಾಡಿದ್ದವು.
ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಆಯುಕ್ತೆ ರಾಜೇಶ್ವರಿ ಅಗಸರ, ಈರಣ್ಣ ಪಟ್ಟಣಶೆಟ್ಟಿ, ಬಸಪ್ಪ ಹಾರಿವಾಳ, ಬಸವರಾಜ ಗೊಳಸಂಗಿ, ಈರಣ್ಣ ಬಿರಾದರ, ಬಸಣ್ಣ ದೇಸಾಯಿ, ಶಂಕರಗೌಡ ಬಿರಾದಾರ, ಸುಭಾಷ್ ಚಿಕ್ಕೊಂಡ, ಮಲ್ಲಿಕಾರ್ಜುನ ಕಿಣಗಿ, ಸಂಗಮೇಶ ಒಲೇಕಾರ, ಬಸವರಾಜ ಕೋಟಿ, ಜಗದೀಶ ಕೊಟ್ರಶೆಟ್ಟಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಸಂಭ್ರಮ: ಬಸವ ಜಯಂತಿ ದಿನವಾದ ಮಂಗಳವಾರ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಎಲ್ಲರೂ ತಮ್ಮ ತಮ್ಮ ಮನೆಗಳ ಮುಂದೆ ರಂಗೋಲಿ ಬಿಡಿಸಿ ಸಿಹಿ ಅಡುಗೆ ತಯಾರಿಸಿ ದೇವರಿಗೆ ನೈವೇದ್ಯ ಮಾಡಿದರು. ನಂತರ ಸುಮಂಗಲೆಯರು ಹಾಗೂ ಮಕ್ಕಳು ಯುವಕರು ಹೊಸ ಹೊಸ ಬಟ್ಟೆಗಳನ್ನು ತೊಟ್ಟು ಮೂಲ ನಂದೀಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ನಂತರ ಬಸವ ಜನ್ಮಸ್ಮಾರಕದಲ್ಲಿ ಬಸವಣ್ಣನವರ ತೊಟ್ಟಿಲ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.